ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
2025ರ ಐಪಿಎಲ್ ಮೆಗಾ ಹರಾಜಿಗೆ ಭರ್ಜರಿ ತಯಾರಿ..!
ಆರ್‌ಸಿಬಿ ತಂಡದಿಂದಲೇ ರಿಷಬ್ ಪಂತ್ಗೆ ಬಿಗ್ ಆಫರ್
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ನಡೆದಿದೆ. ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜು ಕುರಿತು ಈಗಾಗಲೇ ಬಿಸಿಸಿಐ ಐಪಿಎಲ್ ತಂಡಗಳ ಜತೆಗೆ ಸಭೆ ಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಮೆಗಾ ಹರಾಜು ಯಾವಾಗ ನಡೆಯಲಿದೆ ಎಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ.
ಐಪಿಎಲ್ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಭಾರೀ ತಲೆಕೆಡಿಸಿಕೊಂಡಿವೆ. ಅದರಲ್ಲೂ ಹರಾಜಿನಲ್ಲಿ ಯಾರನ್ನು ಖರೀದಿ ಮಾಡಬೇಕು ಎಂದು ಎಲ್ಲಾ ತಂಡಗಳು ಕಾರ್ಯತಂತ್ರ ರೂಪಿಸುತ್ತಿದೆ. ಇದರ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ.
ಕ್ಯಾಪ್ಟನ್ಸಿಯಿಂದ ಪಂತ್ಗೆ ಕೊಕ್
ಮುಂದಿನ ಸೀಸನ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕನಿಗಾಗಿ ಹುಡುಕಾಟ ಶುರು ಮಾಡಿದೆ. ಇದರ ಮಧ್ಯೆ ಕ್ಯಾಪ್ಟನ್ ರಿಷಬ್ ಪಂತ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್‌ನಲ್ಲಿ 99 ರನ್ ಚಚ್ಚಿದ ಪಂತ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಹೊತ್ತಲ್ಲೇ ಪಂತ್ ಅವರನ್ನು ನಾಯಕತ್ವದ ತೆಗೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿರುವುದು ಅಚ್ಚರಿ ಸಂಗತಿ. ಪಂತ್ ಬದಲಿಗೆ ಅಕ್ಸರ್ ಪಟೇಲ್ ನಾಯಕರಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಪಂತ್ಗೆ ಆರ್‌ಸಿಬಿ ಗಾಳ
2025ರ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬೆನ್ನಲ್ಲೇ ಆರ್‌ಸಿಬಿ ಮತ್ತೋರ್ವ ಸ್ಟಾರ್ ಕ್ರಿಕೆಟರ್ಗೆ ಮಣೆ ಹಾಕಲಿದೆ ಎಂದು ತಿಳಿದು ಬಂದಿದೆ. ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸ್ಪೋಟಕ ಬ್ಯಾಟರ್ ರಿಷಭ್ ಪಂತ್ ಅವರನ್ನು ಬಲೆಗೆ ಬೀಳಿಸಿಕೊಳ್ಳಲು ಪ್ಲ್ಯಾನ್ ಮಾಡಿದೆ. ಪಂತ್ ಆರ್ಸಿಬಿಗೆ ಬಂದರೆ ಮೂರು ಸ್ಲಾಟ್ಗಳು ಫಿಲ್ ಆಗಲಿವೆ ಎಂಬುದು ಮ್ಯಾನೇಜ್ಮೆಂಟ್ ಪ್ಲಾನ್.
ಹರಾಜಿನಲ್ಲಿ ಆರ್‌ಸಿಬಿ ಅನುಭವಿ ಮಿಡಲ್ ಆರ್ಡರ್ ವಿಕೆಟ್ ಕೀಪರ್ ಬ್ಯಾಟರ್ಗಾಗಿ ಹುಡುಕಾಟ ನಡೆಸಲಿದೆ. ಹೀಗಾಗಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟರೆ, ಆರ್ಸಿಬಿಗೆ ಬರಬಹುದು. ಇದರಿಂದ ಆರ್‌ಸಿಬಿ ತಂಡ ಮಾಡಿಕೊಂಡ ಪ್ಲ್ಯಾನ್ ವರ್ಕ್ ಆಗುತ್ತದೆ ಅನ್ನೋ ಚರ್ಚೆ ನಡೆಯುತ್ತಿದೆ.
ಪಂತ್ ಒಳ್ಳೆ ಕ್ಯಾಪ್ಟನ್. ಆರ್‌ಸಿಬಿ ಬಲಿಷ್ಠ ತಂಡ ಕಟ್ಟೋ ಉದ್ದೇಶದಿಂದ ಯುವ ನಾಯಕನಿಗಾಗಿ ಹುಡುಕಾಟ ನಡೆಸುತ್ತಿದೆ. ಪಂತ್ ಸಿಕ್ಕರೆ ಆರ್‌ಸಿಬಿ ಹಣದ ಹೊಳೆಯನ್ನೇ ಹರಿಸಬಹುದು. ಅಲ್ಲದೆ ಇವರು ವಿಕೆಟ್ ಕೀಪಿಂಗ್ ಮಿಡಲ್ ಆರ್ಡರ್ ಬ್ಯಾಟರ್ ಆಗಿ ನ್ಯಾಯ ಒದಗಿಸಬಲ್ಲರು. ಹೀಗಾಗಿ ಆರ್‌ಸಿಬಿ ಒಂದೇ ಕಲ್ಲಿಗೆ ಮೂರು ಸ್ಲಾಟ್‌ಗಳನ್ನು ಫಿಲ್ ಮಾಡಿಕೊಳ್ಳು ಪ್ಲ್ಯಾನ್ ಮಾಡಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ