ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆಕ್ಷನ್ಗೆ ಕ್ಷಣಗಣನೆ
ಮೆಗಾ ಆಕ್ಷನ್ಗೆ ಮುನ್ನವೇ ಹಲವು ಐಪಿಎಲ್ ತಂಡಗಳಿಂದಲೇ ಬಿಗ್ ಡೀಲ್!
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಜಾಗಕ್ಕೆ ಸ್ಫೋಟಕ ಬ್ಯಾಟರ್ ಎಂಟ್ರಿ
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆಕ್ಷನ್ಗೆ ಕ್ಷಣಗಣನೆ ಶುರುವಾಗಿದೆ. ಮೆಗಾ ಆಕ್ಷನ್ಗೆ ಮುನ್ನವೇ ಹಲವು ಐಪಿಎಲ್ ತಂಡಗಳು ಮೆಗಾ ಡೀಲ್ಗೆ ಇಳಿದಿವೆ. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಮೆಗಾ ಟ್ರೇಡ್ ಮಾಡಲಿದೆ ಎಂದು ವರದಿಯಾಗಿದೆ.
2024ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನದಿಂದ ರೋಹಿತ್ ಶರ್ಮಾ ಅವರನ್ನು ಕಿತ್ತು ಎಸೆಯಲಾಗಿತ್ತು. ಅಲ್ಲದೆ ತಂಡದ ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಹೀನಾಯ ಸೋಲು ಕಂಡಿತ್ತು. ಈಗ 2025ರ ಐಪಿಎಲ್ ಸೀಸನ್ಗೆ ಭರ್ಜರಿ ತಯಾರಿ ನಡೆದಿದ್ದು, ರೋಹಿತ್ ಶರ್ಮಾ ಮುಂಬೈ ತೊರೆಯೋದು ಪಕ್ಕಾ ಆಗಿದೆ.
ಇನ್ನು, ಮುಂಬೈ ಇಂಡಿಯನ್ಸ್ ಬಿಡೋದು ಪಕ್ಕಾ ಆಗುತ್ತಿದ್ದಂತೆ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಪ್ಲ್ಯಾನ್ ರೂಪಿಸಿದೆ. ನಾಯಕನ ಸ್ಥಾನದಿಂದ ಕೆಳಗಿಳಿದಿರೋ ರೋಹಿತ್ ಶರ್ಮಾ ಅವರನ್ನು ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸಂಪರ್ಕಿಸಿದೆ. 2025ರ ಮೆಗಾ ಆಕ್ಷನ್ಗೆ ಮುನ್ನವೇ ಹಿಟ್ಮ್ಯಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಟ್ರೇಡ್ ಮಾಡಿಕೊಳ್ಳುವ ಸಾಧ್ಯತೆ ಇದೆ.
ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿರೋ ಪಂತ್ಗೆ ಬ್ಯಾಡ್ನ್ಯೂಸ್ ಒಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪಂತ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕಳೆದ ಸೀಸನ್ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಅದ್ಭುತ ಬ್ಯಾಟಿಂಗ್ ಮಾಡಿ 400ಕ್ಕೂ ಹೆಚ್ಚು ರನ್ ಕಲೆ ಹಾಕಿದ್ರು.
ಚೆನ್ನೈ ತಂಡದ ಕ್ಯಾಪ್ಟನ್ ಪಂತ್..!
ಕಳೆದ ಸೀಸನ್ನಲ್ಲಿ ರುತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ಈ ಸಲ ಸಿಎಸ್ಕೆ ಕ್ಯಾಪ್ಟನ್ ಚೇಂಜ್ ಮಾಡೋ ಪ್ಲಾನ್ ಇದೆ. ಡೆಲ್ಲಿ ಕ್ಯಾಪಿಟಲ್ಸ್ಗೆ ರೋಹಿತ್ ಕ್ಯಾಪ್ಟನ್ ಆಗಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿ ಪಂತ್ ನೇಮಕವಾಗಲಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್