newsfirstkannada.com

ಕೇವಲ 48 ಗಂಟೆಯಲ್ಲಿ ಒಂದೇ ಒಂದು ಕೆಲಸಕ್ಕಾಗಿ ಬಂತು 3 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್; ಏನಿದು ಸ್ಟೋರಿ?

Share :

17-07-2023

    ಒಂದೇ ಒಂದು ಕೆಲಸಕ್ಕಾಗಿ ಬಂತು ಸಾವಿರಾರು ರೆಸ್ಯೂಮ್​​

    3 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್ ನೋಡಿ ಬೆಚ್ಚಿದ CEO..!

    ಏನಿದು ಸ್ಟೋರಿ? ಯಾವ ಕಂಪನಿಗೆ ಇಷ್ಟು ರೆಸ್ಯೂಮ್​ ಬಂದಿದ್ದು?

ಎಷ್ಟು ಓದಿದ್ರೂ, ಒಳ್ಳೇ ಸ್ಕೋರ್​ ಮಾಡಿದ್ರೂ ಕೆಲವೊಮ್ಮೆ ಕೆಲಸ ಸಿಗೋದು ತುಂಬಾ ಕಷ್ಟ. ಹೀಗಾಗಿ ಕೆಲಸಕ್ಕಾಗಿ ಜನ ಅಲೆದು ಅಲೆದು ಸುಸ್ತಾಗಿ ಹೋಗುತ್ತಾರೆ. ಬದುಕಲು ಕೆಲಸ ಅತ್ಯಗತ್ಯ. ಕೇವಲ ಒಂದು ಉದ್ಯೋಗಕ್ಕೆ ಪದವೀಧರು ಅಲೆಯದ ಕಂಪನಿ ಇಲ್ಲ. ಒಂದು ವೇಳೆ ವೇಕೆನ್ಸಿ ಇದ್ದರೂ ಸಂದರ್ಶಕರ ಪ್ರಶ್ನೆಗೆ ಉತ್ತರಿಸಲಾಗದೇ ಅವಕಾಶಗಳು ಕಳೆದುಕೊಳ್ಳುತ್ತಾರೆ. ಕಾರಣ ಕಾಂಪಿಟೇಷನ್.

ಕಳೆದ ಮೂರು ವರ್ಷಗಳ ಹಿಂದೆ ಕೊರೋನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿದ ಮೇಲಂತೂ ಕೆಲಸಗಳಿಗೆ ಬಹಳ ಬರ. ಎಷ್ಟೋ ಕೋಟ್ಯಾಂತರ ಮಂದಿಯನ್ನು ಜಗತ್ತಿನ ಪ್ರತಿಷ್ಠಿತ ಕಂಪನಿಗಳೇ ಕೆಲಸದಿಂದ ಕಿತ್ತಾಕಿದ್ದವು. ಅಂದಿನಿಂದ ಇಂದಿನವರೆಗೂ ಜನ ಕೆಲಸಕ್ಕೆ ಎಂದು ಅಲೆಯುತ್ತಲೇ ಇದ್ದಾರೆ. ಹೆಸರಿಗೆ ಮಾತ್ರ ಡಿಗ್ರೀ, ಮಾಡೋ ಕೆಲಸ ಮಾತ್ರ ಬೇರೆ. ಜನ ಓದಿದ್ದಕ್ಕೂ ಮಾಡ್ತಿರೋ ಕೆಲಸಕ್ಕೂ ಯಾವುದೇ ಸಂಬಂಧವೇ ಇರಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಟಾರ್ಟಪ್​​ ಕಂಪನಿಯೊಂದರಲ್ಲಿ ಕೆಲಸವೊಂದಕ್ಕೆ ಕೇವಲ 48 ಗಂಟೆಯಲ್ಲಿ ಬರೋಬ್ಬರಿ 3 ಸಾವಿರ ಮಂದಿ ಅರ್ಜಿ ಹಾಕಿದ್ದಾರೆ.

ಯೆಸ್​​, ಸ್ಟಾರ್ಟಪ್​​ ಕಂಪನಿಯೊಂದರ CEO ಕಾರ್ತಿಕ್ ಮಂಡವಿಲ್ಲೇ ಎಂಬುವರು ವೇಕೆನ್ಸಿ ಇದೆ ರೆಸ್ಯೂಮ್​​ ಕಳಿಸಿ ಎಂದು ಟ್ವೀಟ್​ ಮಾಡಿದ್ದರು. ಈ ಟ್ವೀಟ್​ ನೋಡಿ ಕೇವಲ 48 ಗಂಟೆಯಲ್ಲಿ ಬರೋಬ್ಬರಿ 3 ಸಾವಿರ ಮಂದಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯ ಕೇಳಿ ಕಾರ್ತಿಕ್​ ಬೆಚ್ಚಿಬಿದ್ದಿದ್ದಾರೆ.

ಇನ್ನು, ಈ ಸಂಬಂಧ ಟ್ವೀಟ್​ ಮಾಡಿರುವ ಕಾರ್ತಿಕ್​​, ಒಂದು ಕೆಲಸಕ್ಕಾಗಿ ಮೂರು ಸಾವಿರಕ್ಕೂ ಹೆಚ್ಚು ರೆಸ್ಯೂಮ್​​​. ಅದು ಕೇವಲ 48 ಗಂಟೆಯಲ್ಲಿ, ಜಾಬ್​​ ಮಾರ್ಕೆಟ್​ ಎಷ್ಟು ಕೆಟ್ಟದ್ದು ಎಂದು ಬರೆದುಕೊಂಡಿದ್ದಾರೆ. ವಿವಿಧ ಹುದ್ದೆಗಳಿಗಾಗಿ ಇದುವರೆಗೂ 13 ಸಾವಿರ ಅಪ್ಲಿಕೇಶನ್​​ ಬಂದಿವೆ ಎಂದು ಕಾರ್ತಿಕ್​ ತಿಳಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೇವಲ 48 ಗಂಟೆಯಲ್ಲಿ ಒಂದೇ ಒಂದು ಕೆಲಸಕ್ಕಾಗಿ ಬಂತು 3 ಸಾವಿರಕ್ಕೂ ಹೆಚ್ಚು ಅಪ್ಲಿಕೇಶನ್; ಏನಿದು ಸ್ಟೋರಿ?

https://newsfirstlive.com/wp-content/uploads/2023/07/Job.jpg

Load More