ಜಾತಿ ನಿಂದನೆ, ಜೀವ ಬೆದರಿಕೆ ಕೇಸ್ನಲ್ಲಿ ಮುನಿರತ್ನಗೆ ಜಾಮೀನು
ರಾಜರಾಜೇಶ್ವರಿ ನಗರದ ಬಿಜೆಪಿ ಎಂಎಲ್ಎಗೆ ಭಾರೀ ಸಂಕಷ್ಟ
ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿದ್ದ ಒಕ್ಕಲಿಗ ಸಮುದಾಯ
ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಎಂಎಲ್ಎ ಮುನಿರತ್ನ ನಾಯ್ಡು ವಿರುದ್ಧ ಕೊನೆಗೂ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿದೆ. ಮುನಿರತ್ನ ವಿರುದ್ಧದ ಜಾತಿ ನಿಂದನೆ, ಅ*ತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.
ಶಾಸಕ ಮುನಿರತ್ನರದ್ದು ಎನ್ನಲಾದ ವೈರಲ್ ಆದ ಆಡಿಯೋದಲ್ಲಿ ದಲಿತರು ಹಾಗೂ ಒಕ್ಕಲಿಗರ ಸಮುದಾಯದ ಬಗ್ಗೆ ಅವಾಚ್ಯಶಬ್ಧಗಳಿಂದ ನಿಂದಿಲಾಗಿತ್ತು. ಅಲ್ಲದೇ ಅ*ತ್ಯಾಚಾರ ಪ್ರಕರಣ ಕೂಡ ದಾಖಲು ಮಾಡಲಾಗಿದೆ. ಒಂದೊಂದೆ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಮುನಿರತ್ನ ವಿರುದ್ಧ ಎಸ್ಐಟಿ ರಚನೆ ಮಾಡಬೇಕೆಂದು ಒಕ್ಕಲಿಗ ಸಮುದಾಯ ಸಿಎಂ ಸಿದ್ದರಾಮಯ್ಯಗೆ ಒತ್ತಾಯ ಮಾಡಿತ್ತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಆಕೆ ನನಗೆ ಚೆನ್ನಾಗಿ ಪರಿಚಯ- ಮಹಿಳೆಯ ಗಂಭೀರ ಆರೋಪಕ್ಕೆ ಟ್ವಿಸ್ಟ್ ಕೊಟ್ಟ ಮುನಿರತ್ನ
ಹಿರಿಯ ಪೋಲಿಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಸಿಐಡಿ ಅಪರ ಪೋಲಿಸ್ ಮಹಾನಿರ್ದೇಶಕ ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದೆ. ತಂಡದಲ್ಲಿ ಸದಸ್ಯರಾಗಿ ಕೇಂದ್ರ ವಲಯ ಪೋಲಿಸ್ ಮಹಾನಿರೀಕ್ಷಕ ಲಭೂರಾಮ್, ರೈಲ್ವೇಸ್ ಪೋಲಿಸ್ ಅಧೀಕ್ಷಕಿ ಸೌಮ್ಯಲತಾ ಹಾಗೂ ಪೋಲಿಸ್ ಅಧೀಕ್ಷಕ ಸೈಮನ್ ಅವರು ಇದ್ದಾರೆ. ನಿನ್ನೆಯಷ್ಟೇ ಕಾಂಗ್ರೆಸ್ನ ಒಕ್ಕಲಿಗ ನಾಯಕರು ಎಸ್ಐಟಿ ರಚಿಸುವಂತೆ ಸಿಎಂಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಈಗ ಎಸ್ಐಟಿ ರಚನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ