newsfirstkannada.com

Breaking News: ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನಕ್ಕೆ ಕೊಕ್ಕೆ ಹಾಕಿದ ರಾಜ್ಯ ಸರ್ಕಾರ..!

Share :

18-08-2023

  ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಂದ ಆದೇಶ

  ದೇವಾಲಯಗಳ ಕಾಮಗಾರಿ ಪ್ರಗತಿ ವರದಿ ಕೇಳಿದ ಸರ್ಕಾರ

  ಮೂರು ಹಂತದ ಕಾಮಗಾರಿ ಹಣಕ್ಕೆ ತಡೆ ನೀಡುವಂತೆ ಆದೇಶ

ಬೆಂಗಳೂರು: ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನಕ್ಕೆ ತಡೆ ನೀಡುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಪ್ರಮುಖ ಮೂರು ವಿಷಯಗಳನ್ನು ಪ್ರಸ್ತಾಪಿಸಿ ದೇವಸ್ಥಾನ ಜೀರ್ಣೋದ್ಧಾರ ಅನುದಾನ ಬಿಡುಗಡೆಗೆ ತಡೆ ಹಿಡಿಯುವಂತೆ ಕೋರಿದ್ದಾರೆ.

ಆದೇಶದಲ್ಲಿ ಏನಿದೆ..?

 1. ಸರ್ಕಾರದಿಂದ ದೇವಾಲಯಗಳ ಅಭಿವೃದ್ಧಿ/ಜೀರ್ಣೋದ್ದಾರಕ್ಕಾಗಿ/ ಸಾಮಾನ್ಯ ಯೋಜನೆ ಅಡಿಯಲ್ಲಿ ಅನುದಾನ ಮುಂಜೂರಾಗಿದೆ. ಈ ಕಾಮಗಾರಿಗಳನ್ನು ಪ್ರಾರಂಭಿಸದೇ ಇರುವ ಸಂಸ್ಥೆಗಳಿಗೆ ಮುಂದಿನ ನಿರ್ದೇಶನದವರೆಗೂ ಹಣ ಬಿಡುಗಡೆ ಮಾಡಬಾರದು.
 2. 2022-23ನೇ ಸಾಲಿನಲ್ಲಿ ಮುಂಜೂರಾಗಿರುವ ಅನುದಾನದ ಪೈಕೆ ಈಗಾಗಲೇ ಶೇಕಡಾ 50 ರಷ್ಟು ಹಣ ಬಿಡುಗಡೆಯಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಹಣ ಬಿಡುಗಡೆ ಮಾಡದಿದ್ದಲ್ಲಿ ಸದರಿ ಕಾಮಗಾರಿಗೆ ಹಣವನ್ನು ಬಿಡುಗಡೆ ಮಾಡಬಾರದು. ಹಾಗೂ ಕಾಮಗಾರಿಯನ್ನು ಪ್ರಾರಂಭಿಸದೇ ಇದ್ದಲ್ಲಿ ಕಾಮಗಾರಿಯನ್ನು ಪ್ರಾರಂಭಿಸತಕ್ಕದ್ದಲ್ಲ.
 3. ಆಡಳಿತಾತ್ಮಕ ಮಂಜೂರಾತಿಗೆ ಪ್ರಸ್ತಾವನೆ ಸ್ವೀಕೃತವಾಗಿದ್ದಲ್ಲಿ ಆಡಳಿತಾತ್ಮಕ ಮಂಜೂರಾತಿಯನ್ನು ಮುಂದಿನ ನಿರ್ದೇಶನದವರೆಗೆ ತಡೆಹಿಡಿಯುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News: ದೇವಸ್ಥಾನಗಳ ಜೀರ್ಣೋದ್ಧಾರ ಅನುದಾನಕ್ಕೆ ಕೊಕ್ಕೆ ಹಾಕಿದ ರಾಜ್ಯ ಸರ್ಕಾರ..!

https://newsfirstlive.com/wp-content/uploads/2023/07/SIDDU-3-1.jpg

Load More