ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ಇನ್ನೂ ನಿಲ್ಲದ ಅತ್ಯಾಚಾರ
ಬೆಂಗಳೂರನ್ನು ಸೇಫ್ ಸಿಟಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ 7 ಸಾವಿರಕ್ಕೂ ಹೆಚ್ಚು ಕ್ಯಾಮೆರಾ!
ಬೆಂಗಳೂರು: ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ದಿನನಿತ್ಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಅದರಲ್ಲೂ ಇಡೀ ದೇಶದಲ್ಲಿ ಪ್ರತೀ ಗಂಟೆಗೆ ನೂರಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಎಂದು NCRB ಬಿಡುಗಡೆ ಮಾಡಿರೋ ಅಂಕಿಅಂಶಗಳು ಹೆಣ್ಣುಮಕ್ಕಳನ್ನು ಬೆಚ್ಚಿಬೀಳಿಸಿವೆ. ನಿರ್ಭಯಾ ಕೇಸ್ ಬಳಿಕ ಅಂತೂ ಪೋಷಕರು ಹೆಣ್ಣುಮಕ್ಕಳನ್ನು ಸಂಜೆ 6 ಗಂಟೆ ಮೇಲೆ ಮನೆ ಹೊರಗೆ ಕಳಿಸಲು ಹೆದರುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರವೇ ಎಲ್ಲಾ ರಾಜ್ಯಗಳಿಗೂ ಬೆಂಗಳೂರು, ದೆಹಲಿಯಂತಹ ಮಹಾ ನಗರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಎಂದು ಸೂಚನೆ ನೀಡಿದೆ. ಇದರ ಭಾಗವಾಗಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವೂ ಬೆಂಗಳೂರಿನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದೆ.
ಈ ಸಂಬಂಧ ಮಾತಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಇಂದು ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಇಡೀ ಬೆಂಗಳೂರನ್ನು ಸೇಫ್ ಸಿಟಿ ಮಾಡಲು ಹೊರಟಿದ್ದೇವೆ. ಇದಕ್ಕಾಗಿ 7 ಸಾವಿರಕ್ಕೂ ಹೆಚ್ಚು ಹೈ ರೆಸ್ಯೂಲೇಷನ್ ಕ್ಯಾಮೆರಾಗಳ ಅಳವಡಿಕೆಗೆ ನಿರ್ಧಾರ ಮಾಡಿದ್ದೇವೆ ಎಂದರು.
ಇನ್ನು, ಈ ಯೋಜನೆ ಅನುಷ್ಠಾನಕ್ಕೆ 600 ಕೋಟಿಗೂ ಹೆಚ್ಚು ಹಣ ಬೇಕು. ಹೆಚ್ಚು ಮಹಿಳೆಯರು ಓಡಾಡೋ ಜಾಗದಲ್ಲಿ ಅಳವಡಿಸುತ್ತೇವೆ. ಜನಸಂದಣಿ ಪ್ರದೇಶಗಳಲ್ಲೂ ಕ್ಯಾಮೆರಾ ಹಾಕಿ ಕಮಾಂಡ್ ಸೆಂಟರ್ ಮಾಡಲಿದ್ದೇವೆ. ಕ್ಯಾಮೆರಾ ಮೂಲಕ ಪೊಲೀಸಿಂಗ್ ಮಾಡಲು ಸೂಚನೆ ನೀಡಲಾಗಿದೆ ಎಂದರು.
80ಕ್ಕೂ ಹೆಚ್ಚು ವೀವಿಂಗ್ ಸೆಂಟರ್
ಈಗಾಗಲೇ 80ಕ್ಕೂ ಹೆಚ್ಚು ವೀವಿಂಗ್ ಸೆಂಟರ್ ಮಾಡಲಾಗಿದೆ. ಇನ್ನೂ 20 ವೀವಿಂಗ್ ಸೆಂಟರ್ಗಳ ಅಗತ್ಯವಿದೆ. 50 ಸೇಫ್ಟಿ ಐಲೆಂಡ್ಸ್ ಪ್ಲಾನ್ ಮಾಡಲಾಗಿದೆ. ಮಹಿಳೆಯರು ಕೇವಲ ಬಟನ್ ಒತ್ತಿದ್ರೆ ಕಮಾಂಡ್ ಸೆಂಟರ್ಗೆ ಹೋಗಲಿದೆ. ಅಲ್ಲೂ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು ಎಂದರು.
ಕೆಲವೇ ಕ್ಷಣಗಳಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗಲಿದೆ. ಪೊಲೀಸರಿಗೂ ಬಾಡಿ ಕ್ಯಾಮೆರಾ ಅಳವಡಿಕೆ ಮಾಡುತ್ತೇವೆ. ಅದು ನೇರ ಕಮಾಂಡ್ ರೂಮ್ಗೆ ಕನೆಕ್ಟ್ ಆಗಿರಲಿದೆ, ಸಿಬ್ಬಂದಿ ಯಾರೊಂದಿಗೆ ಮಾತಾಡಿದ್ರು ರೆಕಾರ್ಡ್ ಆಗುತ್ತದೆ. ಕೇವಲ ಹೆಣ್ಣು ಮಾತ್ರವಲ್ಲ ಪುರುಷರಿಗೂ ರಕ್ಷಣೆ ನೀಡಲಿದ್ದೇವೆ. ಕಾಲೇಜು, ಮಾಲ್, ಸಿನಿಮಾ ಥಿಯೇಟರ್, ಮಾರ್ಕೆಟ್ ರೀತಿಯ ಜನಸಂದಣಿ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದೇವೆ. ಇಡೀ ದೇಶದಲ್ಲೇ ಬೆಂಗಳೂರು ಸೇಫ್ಟಿ ಸಿಟಿ ಆಗಲಿದೆ ಎಂದರು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ