ಭ್ರಷ್ಟ ತಿಮಿಂಗಿಲಗಳನ್ನ ಬೇಟೆಯಾಡಿದ ಲೋಕಾಯುಕ್ತ
ಕರ್ನಾಟಕದ ಉದ್ದಗಲಕ್ಕೂ ಲೋಕಾಯುಕ್ತ ಭರ್ಜರಿ ಬೇಟೆ
ಕೊಡಗು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗೆ ಲೋಕಾ ಶಾಕ್
ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ದಾಳಿ ಅಂತಿಂಥ ದಾಳಿಯಲ್ಲ. ಭರ್ಜರಿ ದಾಳಿಯನ್ನೇ ನಡೆಸಿದ್ದಾರೆ. ಆದಾಯ ಮೀರಿದ ಆಸ್ತಿಗಳಿಕೆ ಆರೋಪದ ಹಿನ್ನೆಲೆ ಬೆಳ್ಳಂ ಬೆಳಗ್ಗೆ ಸುಖವಾಗಿ ನಿದ್ದೆ ಮಾಡುತ್ತಿದೆ. ಅಧಿಕಾರಿಗಳ ಮನೆ ಬಾಗಿಲು ತಟ್ಟಿ, ಬಿಸಿ ಮುಟ್ಟಿಸಿದ್ದಾರೆ. ಎಲ್ಲಿಲ್ಲೆ ಯಾವ ಅಧಿಕಾರಿಗಳಿಗೆ ಲೋಕಾ ಶಾಕ್ ನೀಡಿದೆ. ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಂಜಾನೆಯ ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆ ಮೈಸೂರಿನಿಂದ ಬೀದರ್ವರೆಗೂ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ.

ಕೊಡಗು ಜಿಲ್ಲೆಯ ಎಡಿಸಿ ನಂಜುಂಡೇಗೌಡ ಲೋಕಾಯುಕ್ತ ಬಿಗ್ ಶಾಕ್ ನೀಡಿದೆ. ಕೊಡಗು ಮತ್ತು ಮೈಸೂರಿನಲ್ಲಿರುವ ನಂಜುಂಡೇಗೌಡರಿಗೆ ಸೇರಿದ ನಿವಾಸಗಳಲ್ಲಿ ರೇಡ್ ನಡೆದಿದೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ್ದು, ಈ ವೇಳೆ ಅಪಾರ ಪ್ರಮಾಣ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ಕೊಡಗಿನ ಅಪರ ಜಿಲ್ಲಾಧಿಕಾರಿ ಆಗಿರುವ ನಂಜುಂಡೇಗೌಡರ ಮಡಿಕೇರಿ ನಿವಾಸದಲ್ಲಿ 11.5 ಲಕ್ಷ ರೂ. ನಗದು ಪತ್ತೆ. ಹಾಗೂ 385 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿದೆ. ಇನ್ನು ಇವರು ಕೆಲಸ ಮಾಡಿದ ಎಲ್ಲ ಜಿಲ್ಲೆಗಳಲ್ಲೂ ಭೂಮಿಯನ್ನು ಹೊಂದಿದ್ದಾರೆ. ಕೊಡಗು, ಮೈಸೂರು ಸೇರಿದಂತೆ ಹಲವು ಕಡೆ ಸುಮಾರು 80ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಬೇನಾಮಿ ಹೆಸರಿಲ್ಲಿ ಖರೀದಿಸಿದ್ದಾರೆ. ಇನ್ನು ಹಾರಂಗಿಯ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಘುಪತಿಗೆ ಸೇರಿದ ಮನೆಗಳ ಮೇಲೂ ರೇಡ್ ಮಾಡಲಾಗಿದೆ. ಮೈಸೂರಿನ ವಿಜಯನಗರ 4ನೇ ಹಂತದಲ್ಲಿ ರಘುಪತಿ ಬೃಹತ್ ಬಂಗಲೆ ಹೊಂದಿದ್ದು, ಮನೆ, ಆಸ್ತಿ ದಾಖಲೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ.
ಟೂಡಾ ಜಂಟಿ ನಿರ್ದೇಶಕನಿಗೂ ತಟ್ಟಿದ ಲೋಕಾ ಬಿಸಿ
ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ನಾಗರಾಜು ಮೇಲೆ ಲೋಕಾಯುಕ್ತ ಎಸ್ ಪಿ ಅಶೋಕ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸಪ್ತಗಿರಿ ಬಡಾವಣೆಯಲ್ಲಿರುವ ಮನೆ, ಟೂಡಾ ಕಚೇರಿ ಮೇಲೆ ಹಾಗೂ ಅರಸಿಕೆರೆಯ ನಿವಾಸ ಮೇಲೆ ಮೂರು ಟೀಮ್ನಿಂದ ರೇಡ್ ಮಾಡಿ ಪರಿಶೀಲನೆ ನಡೆಸಲಾಗಿದೆ. ಇನ್ನು ತುಮಕೂರು ಜಿ.ಪಂ.ನ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿ ಡಾ.ಬೂವನಹಳ್ಳಿ ನಾಗರಾಜ್ ಮನೆ ಮೇಲೆ ರೇಡ್ ಮಾಡಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲೂ ಲೋಕಾಯುಕ್ತ ರೇಡ್
ಆದಾಯ ಮೀರಿದ ಆಸ್ತಿಗಳಿಕೆ ಆರೋಪದಡಿ, ಹೊಳಲ್ಕೆರೆಯ ಸಣ್ಣ ನೀರಾವರಿ ಇಲಾಖೆ ಇಂಜನಿಯರ್ ಕೆ. ಮಹೇಶ್ ಸಂಬಂಧಿಸದಂತೆ, ಚಿತ್ರದುರ್ಗ, ದಾವಣಗೆರೆ ಸೇರಿ ವಿವಿದೆಡೆ ಲೋಕಾ ದಾಳಿ ನಡೆದಿದೆ. 6 ಜನ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗಿದೆ. ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆ ಇಂಜನಿಯರ್ ಕೆ. ಮಹೇಶ್ಗೆ ಸೇರಿದ ಚಿತ್ರದುರ್ಗ ಮತ್ತು ದಾವಣೆಗೆರೆಗಳ ಮನೆ ದಾಳಿ ನಡೆದಿದೆ. ಚಿತ್ರದುರ್ಗದ ಮನೆಯಲ್ಲಿ 15 ಲಕ್ಷ ನಗದು, ಅರ್ಧ ಕೆಜಿ ಚಿನ್ನ ಪತ್ತೆ ಆಗಿದೆ. ಚಿತ್ರದುರ್ಗ ಲೋಕಾ ಎಸ್ಪಿ ವಾಸುದೇವರಾವ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 6 ಜನ ಅಧಿಕಾರಿಗಳು ದಾಖಲೆಗಳು, ಕಂಪ್ಯೂಟರ್ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೆ.ಮಹೇಶ್ ಪತ್ನಿ ಕೆ.ಭಾರತಿ ಕೂಡ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಅವರು ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆಯಾಗಿ ಕೆಲಸ ಮಾಡಿದ್ದರು.
ಇನ್ನು ಈ ದಂಪತಿಗೆ ಸೇರಿದ ದಾವಣಗೆರೆಯ ಜಯನಗರದಲ್ಲಿರುವ ನಿವಾಸದಲ್ಲಿ ವಿವಿಧ ಬ್ಯಾಂಕ್ಗಳ 4 ಖಾತೆಗಳು ಪತ್ತೆ ಆಗಿದ್ದು, ಅವುಗಳನ್ನು ಪರಿಶೀಲಿಸಿದ್ದಾರೆ. ಇನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ RFO ಸತೀಶ್ ಮೇಲೂ ದಾಳಿ ನಡೆಸಿದೆ. 4 ವರ್ಷಕ್ಕೂ ಅಧಿಕ ಅವಧಿತಿಂದ ಚನ್ನಗಿರಿಯಲ್ಲಿ RFO ಆಗಿ ಸೇವೆ ಸಲ್ಲಿಸುತಿದ್ದಾರೆ. ಚನ್ನಗಿರಿ ಮತ್ತು ಶಿವಮೊಗ್ಗದಲ್ಲಿರುವ ಮನೆಗಳಲ್ಲಿ ಕೆಲವೊಂದು ಮಹತ್ವದ ದಾಖಲೆಗಳು ಸಿಕ್ಕಿದ್ದು, ಲೋಕಾ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೊಪ್ಪಳದಲ್ಲಿ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕನಿಗೆ ಶಾಕ್
ರಾಯಚೂರು ಲೋಕಾಯುಕ್ತ ಎಸ್ಪಿ ಆರ್ ಎಲ್ ಅರಸಿದ್ದಿ ನೇತೃತ್ವದಲ್ಲಿ ಕೊಪ್ಪಳದ ನಿರ್ಮಿತಿ ಕೇಂದ್ರದ ಕಚೇರಿ ವ್ಯವಸ್ಥಾಪಕ ಮಂಜುನಾಥ್ ಬನ್ನಿಕೊಪ್ಪ ಮನೆ ಮೇಲೆ ರೇಡ್ ನಡೆದಿದೆ. ನಿರ್ಮಿತಿ ಕೇಂದ್ರ, ಮನೆ, ಹುಲಗಿಯಲ್ಲಿನ ಲಾಡ್ಸ್. ಹೀಗೆ ಮೂರು ಸ್ಥಳಗಳಲ್ಲಿ 5 ತಂಡಗಳಿಂದ ದಾಳಿ ನಡೆಸಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆದಿದ್ದು, ಮಂಜುನಾಥ್ ಹುಲಗಿ ಬಳಿ 6 ಕೋಟಿ ಬೆಲೆಬಾಳುವ ವಸತಿ ಕಟ್ಟಡ ಹೊಂದಿದ್ದಾರೆ. ಇನ್ನು 3 ಅಂತಸ್ತಿ ಐಷಾರಾಮಿ ಹೋಟೆಲ್ಅನ್ನು ಕಟ್ಟಿಸಿದ್ದಾರೆ. ಅಷ್ಟೇ ಅಲ್ಲ, ಸ್ನೇಹಿತರ ಜೊತೆಗೂ ಉದ್ಯಮದಲ್ಲಿ ಮಂಜುನಾಥ್ ಹಣ ಹೂಡಿಕೆ ಮಾಡಿದ್ದಾರೆ ಅನ್ನೋದು ತಿಳಿದುಬಂದಿದೆ.
ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್ಗೆ ಶಾಕ್
ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ ಅನಿಶೆಟ್ಟ್ಗೂ ಲೋಕಾಯುಕ್ತ ಶಾಕ್ ನೀಡಿದೆ. ಸಂತೋಷ್ಗೆ ಸೇರಿ ಬೆಳಗಾವಿಯ ಪ್ಲಾಟ್. ಧಾರವಾಡದ ಮನೆ, ಹಾವೇರಿಯಲ್ಲಿ ಸಹೋದರನ ಮನೆ ಸೇರಿಂದ ಐದು ಕಡೆ 15 ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ. ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ಸಂತೋಷ್ ಅನಿಶೆಟ್ಟ್, ಸುಭಾಷ್ ನಗರದ ಅಪಾರ್ಟ್ಮೆಂಟ್ನಲ್ಲಿ ಪ್ಲಾಟ್ ತೆಗೆದುಕೊಂಡಿದ್ದರು. ಕೇವಲ ವಿಶ್ರಾಂತಿಗೆಂದು ಪ್ಲಾಟ್ ತೆಗೆದುಕೊಂಡಿದ್ದ ಪ್ಲಾಟ್ನಲ್ಲಿ ದುಬಾರಿ ಬೆಲೆಯ ಮದ್ಯದ ಬಾಟಲಿಗಳು, ವಿದೇಶಿ ಬ್ರ್ಯಾಂಡ್ಗಳ ಬೆಲ್ಟ್ಗಳು ಪತ್ತೆ ಆಗಿವೆ.
ಇನ್ನು ಕಚೇರಿಯಲ್ಲಿರಬೇಕಾದ ಕೆಲ ದಾಖಲೆಗಳು ಮನೆಯಲ್ಲಿ ಪತ್ತೆ ಆಗಿದ್ದು, ಈ ಪ್ಲಾಟ್ನಲ್ಲೇ ಎಲ್ಲ ಡೀಲಿಂಗ್ ನಡೆಯುತ್ತಿದ್ದ ಬಗ್ಗೆ ಅನುಮಾನ ಮೂಡಿದೆ. ಇನ್ನು ಈ ಹಿಂದೆ ಧಾರವಾಡ ಪಾಲಿಕೆಯಲ್ಲಿ ಸಂತೋಷ್ ಕೆಲಸ ಮಾಡಿದ್ದರು. ಹೀಗಾಗಿ ಧಾರವಾಡದಲ್ಲಿರುವ ಸಂತೋಷ ಮನೆ ಸೇರಿದಂತೆ 5 ಕಡೆ ದಾಳಿ ನಡೆಸಲಾಗಿದೆ. ಧಾರವಾಡದಲ್ಲಿ ಐಷಾರಾಮಿ ಮನೆ ಹೊಂದಿದ್ದು, ಅನೇಕ ಪ್ರಾಚ್ಯ ಕಾಲದ ಮೂರ್ತಿಗಳು, ಹಳೆಯ ಬೀಗಗಳು ಪತ್ತೆ ಆಗಿವೆ. ಇನ್ನು ಕೊಟ್ಯಾಂತರ ರೂಪಾಯಿ ಬೆಲೆಬಾಳುವ ಕಟ್ಟಿಗೆಯಿಂದ ಡಿಸೈನ್ ಮಾಡಿಸಿದ್ದು ಅದರ ಮೌಲ್ಯ ಅಳೆಯಲು ಅಧಿಕಾರಿಗಳು ಮುಂದಾಗಿದ್ದಾರೆ. ಒಟ್ಟಾರೆ. ಮೈಸೂರಿನಿಂದ ಬೀದರ್ವರೆಗೂ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಜನ್ಮವನ್ನು ಜಾಲಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ