ಎಡಬಿಡದೆ ಸುರಿಯುತ್ತಿದ್ದಾನೆ ಮಳೆರಾಯ
ಬಾಗಲಕೋಟೆ ಜಿಲ್ಲೆಯಲ್ಲಿ ಮೇಘರಾಜನ ಮೋಡಿ
ಕರಾವಳಿಯಲ್ಲಿ ಮೂರ್ನಾಲ್ಕು ದಿನಗಳಿಂದ ವರುಣಾರ್ಭಟ
ರಾಜ್ಯಕ್ಕೆ ವಿಳಂಬವಾಗಿ ಎಂಟ್ರಿ ಕೊಟ್ಟಿರೋ ಮಳೆರಾಯನೀಗ ಎಡಬಿಡದೇ ಸುರಿಯುತ್ತಿದಾನೆ.. ಕರುನಾಡಿನ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಟ್ಟು ಬಿಡದೇ ತನ್ನ ಪ್ರಲಾಪವನ್ನ ತೋರುತ್ತಿದ್ದಾನೆ. ಇಷ್ಟು ದಿನ ಬಾರೋ ಬಾರೋ ಮಳೆರಾಯ ಅಂತಿದ್ದ ಜನರು 1 ವಾರಕ್ಕೆ ಸುಸ್ತಾಗಿ ಹೋಗಿದ್ದಾರೆ. ಇದೀಗ ಕರಾವಳಿ, ಮಲೆನಾಡು ಭಾಗದಲ್ಲಿ ಮೇಘರಾಜನ ನರ್ತನ ಕೊಂಚ ಕಡಿಮೆಯಾಗಿದೆ. ಉತ್ತರಕರ್ನಾಟಕದಲ್ಲೂ ಮಳೆಯ ಸಿಂಚನವಾಗುತ್ತಿದೆ.
ಇಷ್ಟುದಿನ ಮಳೆ ಬರ್ತಿಲ್ಲ ಅನ್ನೋ ತೊಳಲಾಟ.. ಈಗ ಯಾಕಪ್ಪ ಇಷ್ಟು ಮಳೆ ಬರ್ತಿದೆ ಅನ್ನೋ ಗೋಳಾಟ.. ಜೂನ್ನಲ್ಲಿ ರಜೆ ಮುಗಿಸಿ ಜುಲೈನಲ್ಲಿ ಡ್ಯೂಟಿಗೆ ಹಾಜರಾಗಿರೋ ವರುಣ, ರಾತ್ರಿ ಹಗಲು ಅಂತ ಶಿಫ್ಟ್ ಲೆಕ್ಕದಲ್ಲಿ ಕೆಲಸಮಾಡದೇ, ಬ್ರೇಕ್ ತೆಗೆದುಕೊಳ್ಳದೇ ಸುರಿಯುತ್ತಿದ್ದಾನೆ. ಕರಾವಳಿ, ಮಲೆನಾಡು ಭಾಗದಲ್ಲಿ ಬಿಡದೇ ಸುರಿಯುತ್ತಿದ್ದಾನೆ.
ಉತ್ತರಕರ್ನಾಟಕದಲ್ಲೂ ಮಳೆರಾಯನ ಸಿಂಚನ
ಕರಾವಳಿಯಲ್ಲಿ ಅಬ್ಬರಿಸುತ್ತಿದ್ದ ವರುಣರಾಯ ಇದೀಗ ಉತ್ತರಕರ್ನಾಟಕಕ್ಕೂ ಕಾಲಿಟ್ಟಿದ್ದಾನೆ.. ತುಂತುರು ಮುಂಗಾರು ಮಳೆಗೆ ಮುಳುಗಡೆ ನಗರಿಯ ಜನ ಇವತ್ತು ಮೊರೆ ಹೋಗುವಂತಾಗಿತ್ತು. ಬಿಟ್ಟು ಬಿಟ್ಟು ಸುರಿದ ತುಂತುರು ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಒಂದೆಡೆ ಮಳೆಗಾಗಿ ಕಾದು ಕುಳಿತ ರೈತರಿಗೆ ಮಳೆಯ ಸಿಂಚನ ಖುಷಿ ತಂದಿದೆ. ಮತ್ತೊಂದೆಡೆ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೇ ಬಿತ್ತನೆ ಕುಂಠಿತ ಆಗಿದೆ. ವಾಡಿಕೆಯಂತೆ ಜಿಲ್ಲೆಯಲ್ಲಿ 2 ಲಕ್ಷದ 64 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಬೇಕಿತ್ತು. ಆದ್ರೆ ಈ ಬಾರಿ ಕೇವಲ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ ವರುಣ ಮತಷ್ಟು ಕೃಪೆ ತೋರಬೇಕಿದೆ.
ಮಳೆ ಅಬ್ಬರಕ್ಕೆ ತಡಗೋಡೆ ಕುಸಿತ.. ಮನೆ ಜಖಂ
ಭಾರೀ ಮಳೆಗೆ ಕೊಡಗು ಜಿಲ್ಲೆಯ ಮಡಿಕೇರಿ ನಗರದ ರಾಣಿಪೇಟೆಯಲ್ಲಿ ಮನೆಯೊಂದರ ಬಳಿ ಇದ್ದ ತಡೆಗೋಟೆ ಕುಸಿತವಾಗಿದೆ. ತಡೆಗೋಡೆ ಕುಸಿತದಿಂದ ಮನೆಯ ಅಡುಗೆ ಕೋಣೆ, ಬಾತ್ ರೂಂ ಸಂಪೂರ್ಣ ಜಖಂ ಆಗಿದೆ. ಅದೃಷ್ಟಾವಶಾತ್ ಘಟನೆ ವೇಳೆ ಮನೆಯಲ್ಲಿದ್ದ 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ತಲಕಾವೇರಿ ಭಾಗಮಂಡಲ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗಿದ್ದು ಕಾವೇರಿ ನದಿ ನೀರಿನ ಮಟ್ಟ ಏರಿಕೆ ಕಂಡಿದೆ. ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ಭಾಗಮಂಡಲ ನಾಪೋಕ್ಲು ರಸ್ತೆಯ ಮೇಲೆ ಎರಡ್ಮೂರು ಅಡಿ ನೀರು ಹರಿದು ಜನರು ಪರದಾಡು ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಇಳಿಕೆ ಕಂಡಿದೆ. ಜೊತೆಗೆ ಭಾಗಮಂಡಲ ರಸ್ತೆ ಮೇಲೆ ಹರಿಯುತ್ತಿದ್ದ ನೀರು ಕೂಡ ಇಳಿಕೆ ಕಂಡಿದ್ದು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಭಾಗಮಂಡಲದಲ್ಲಿ ಬೋಟ್ ವ್ಯವಸ್ಥೆ ಮಾಡಿದ್ದು ಗೃಹ ರಕ್ಷಕ ದಳದ ಸಿಬ್ಬಂದಿಗಳು ಭಾಗಮಂಡಲದಲ್ಲೇ ಬೀಡುಬಿಟ್ಟಿದ್ದಾರೆ.
ಉಡುಪಿಯಲ್ಲೂ ಕೊಂಚ ತಗ್ಗಿದ ಮಳೆಯ ಆರ್ಭಟ
ಉಡುಪಿಯಲ್ಲಿ ಮುಂಗಾರು ಅಬ್ಬರಿಸಿ, ಮೂರು ದಿನಗಳ ಕಾಲ ಸುರಿದ ಬಾರೀ ಮಳೆಗೆ ತಗ್ಗು ಪ್ರದೇಶಗಳು ಜಾಲವೃತವಾಗಿದ್ದವು. ಹಲವೆಡೆ ಮನೆಗಳು ಜಲಾವೃತಗೊಂಡ ಪರಿಣಾಮ ಮನೆಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅದರಲ್ಲೂ ನದಿ ತೀರದ ಅನೇಕ ಕುದ್ರು ಪ್ರದೇಶಗಳು ಮುಳಗಡೆ ಹೊಂದಿ ಸಾಕಷ್ಟು ಸಮಸ್ಯೆಯಾಗಿತ್ತು. ಕೆಲವಡೆ ಮನೆಗಳಿಗೂ ಹಾನಿಯಾಗಿ, ಪ್ರಾಣ ಹಾನಿ ಕೂಡ ಸಂಭವಿಸಿತ್ತು. ಸದ್ಯ ಮಳೆ ಕಡಿಮೆಯಾಗಿದ್ದು, ನೀರು ಇಳಿಮುಖವಾಗಿದೆ. ಜಿಲ್ಲೆಗೆ ನೆರೆ ನುಗ್ಗಿದ ಸಂದರ್ಭದ ದೃಶ್ಯಾವಳಿಗಳು ಡ್ರೋನ್ ಕಣ್ಣಿನಲ್ಲಿ ಸೆರೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಮುಳುಗಿ ಹೋಗಿರೋ ಮನೆಗಳು
ಭಾರೀ ಮಳೆಯ ಪರಿಣಾಮ ದಕ್ಷಿಣ ಕನ್ನಡಜಿಲ್ಲೆಯ ನದಿಗಳು ಮೈದುಂಬಿ ಹರಿಯುತ್ತಿದೆ. ನದಿ ತೀರದ ಪ್ರದೇಶಗಳು ಜಲಾವೃತವಾಗಿದ್ದು, ಮಂಗಳೂರು ಹೊರವಲಯದ ಅದ್ಯಪಾಡಿ ಗ್ರಾಮ, ಮುಗೇರ ಕುದ್ರು ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. 30 ಮನೆಗಳು ನೀರಲ್ಲಿ ಮುಳುಗಿದ್ದು, ಜನರು ದೋಣಿಗಳ ಮೊರೆ ಹೋಗಿದ್ದಾರೆ.
ಕಾಫಿನಾಡಲ್ಲೂ ಪುನರ್ವಸು ಮಳೆಯ ಆರ್ಭಟ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪುನರ್ವಸು ಮಳೆ ಎರಡು ಗಂಟೆಗಳ ಕಾಲ ಸತಸತವಾಗಿ ಸುರಿದಿದೆ.. ಕೊಟ್ಟಿಗೆಹಾರ, ಬಣಕಲ್, ಬಾಳೂರು ಚಾರ್ಮುಡಿ ಘಾಟ್ನಲ್ಲಿ ಭಾರೀ ಮಳೆಯಾಗಿದೆ. ಕಳಸ ಮಂಗಳೂರು ರಸ್ತೆಯಲ್ಲಿ ಮರಗಳು ಧರೆಗುರುಳಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿದೆ.
ಒಟ್ಟಾರೆ, ಕರಾವಲಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಅಬ್ಬರಿಸ್ತಿದ್ದ ವರುಣ ಈಗ ಕೊಂಚ ಬಿಡುವುಕೊಟ್ಟಿದ್ದಾರೆ. ಆದ್ರೆ, ಉತ್ತರ ಕರ್ನಾಟಕದ ಕಡೆ ಈಗ ಕಾಲಿಡುತ್ತಿದ್ದಾನೆ. ಹೀಗಾಗಿ ಕರಾವಳಿಯಲ್ಲಾದಂತೆ ಇಲ್ಲಿಯೂ ಮೇಘರಾಜನ ದರ್ಶನವಾಗಲಿ ಅಂತಾ ಬಯಲು ಸೀಮೆಯ ಮಂದಿ ಪ್ರಾರ್ಥಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ