/newsfirstlive-kannada/media/media_files/2026/01/31/cj-roy-4-2026-01-31-10-49-57.jpg)
ಮೈಸೂರು: ಬಹುಚರ್ಚಿತ ಸಿಜೆ ರಾಯ್ (C.J. Roy) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗ (Human Rights Commission) ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಕರಣದಲ್ಲಿ ಸಮಗ್ರ ತನಿಖೆ ಕೋರಿ ದೂರು ನೀಡಿದ್ದ ಆರ್.ಟಿ.ಐ (RTI) ಕಾರ್ಯಕರ್ತ ವಿಜಯ್ ಡೆನ್ನಿಸ್ ಅವರಿಗೆ ಆಯೋಗವು ನೋಟಿಸ್ ಜಾರಿ ಮಾಡಿದೆ.
ದೂರಿನಲ್ಲೇನಿತ್ತು..?
ಸಿಜೆ ರಾಯ್ ಅವರಿಗೆ ಕೆಲವರಿಂದ ಮಾನಸಿಕ ಕಿರುಕುಳ ನೀಡಲಾಗಿತ್ತು ಮತ್ತು ಆತ್ಮಹತ್ಯೆಗೆ ಪ್ರಚೋದನೆ (Abetment to Suicide) ನೀಡಲಾಗಿತ್ತು ಎಂದು ಆರೋಪಿಸಿ ಆರ್.ಟಿ.ಐ ಕಾರ್ಯಕರ್ತ ವಿಜಯ್ ಡೆನ್ನಿಸ್ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಕಿರುಕುಳ ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದರು.
ಇದನ್ನೂ ಓದಿ: ಸ್ಮಶಾನದಲ್ಲಿ ಮಂಗಳ ಮುಖಿಯರ ಭಯಾನಕ ಆಚರಣೆ.. ಕಾಳಿ ಅವತಾರದಲ್ಲಿ ಪ್ರಾಣಿ ಕಚ್ವಿ ರಕ್ತ ಕುಡಿದ ಪೂಜಾರಿ
ಸಾಕ್ಷ್ಯ ಒಪ್ಪಿಸಲು ಸೂಚನೆ
ಈ ದೂರಿನ ಹಿನ್ನೆಲೆಯಲ್ಲಿ, ಆಯೋಗವು ವಿಜಯ್ ಡೆನ್ನಿಸ್ ಅವರಿಗೆ ನೋಟಿಸ್ ನೀಡಿದೆ. "ನಿಮ್ಮ ಬಳಿ ಸಿಜೆ ರಾಯ್ ಅವರಿಗೆ ಕಿರುಕುಳ ನೀಡಿರುವ ಬಗ್ಗೆ ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯಾಧಾರಗಳಿದ್ದರೆ (Evidence) ಅದನ್ನು ಆಯೋಗದ ಮುಂದೆ ಹಾಜರುಪಡಿಸಿ" ಎಂದು ಸೂಚಿಸಲಾಗಿದೆ.
ದಿನಾಂಕ ನಿಗದಿ
ಮಾನವ ಹಕ್ಕುಗಳ ಆಯೋಗದ ಡಿವೈಎಸ್‌ಪಿ (DySP) ಸುಧೀರ್ ಹೆಗಡೆ ಅವರು ಈ ನೋಟಿಸ್ ಜಾರಿ ಮಾಡಿದ್ದು, ಇದೇ ತಿಂಗಳು 23 ರಂದು (ಫೆಬ್ರವರಿ 23) ಬೆಳಿಗ್ಗೆ 10 ಗಂಟೆಗೆ ಖುದ್ದು ಹಾಜರಾಗಿ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸುವಂತೆ ವಿಜಯ್ ಡೆನ್ನಿಸ್ ಅವರಿಗೆ ನಿರ್ದೇಶನ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಸಿಜೆ ರಾಯ್ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಚಿನ್ನದ ದರದಲ್ಲಿ ಭಾರೀ ಇಳಿಕೆ! ಮದುವೆ ಸೀಸನ್‌ನಲ್ಲಿ ಗ್ರಾಹಕರಿಗೆ ಬಂಪರ್ ಸುದ್ದಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us