2 ಗುಂಪಿನ ನಡುವೆ ಘರ್ಷಣೆ, ಸ್ಥಳದಲ್ಲಿ ಬಿಗುವಿನ ವಾತಾವರಣ
ಸಿಬ್ಬಂದಿ ಕೊರತೆ, ಗಲಾಟೆ ನಿಯಂತ್ರಿಸಲು ಎಸ್ಪಿ ಹರಸಾಹಸ
ಅದ್ಧೂರಿಯಾಗಿ ಮೆರವಣಿಯಲ್ಲಿ ಹೋಗುವಾಗ ಕಲ್ಲು ತೂರಾಟ
ದಾವಣಗೆರೆ: ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಮೆರವಣಿಗೆ ಉದ್ದಕ್ಕೂ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಹಳೆ ದಾವಣಗೆರೆಯ ಬೇತೂರು, ಹಾಸಭಾವಿ ಸರ್ಕಲ್ ಬಳಿ ನಡೆದಿದೆ.
ಹಳೆ ದಾವಣಗೆರೆಯ ಬೇತೂರಿನ ಗಣೇಶ ವಿಸರ್ಜನೆ ಮಾಡುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಹೋಗಲಾಗುತ್ತಿತ್ತು. ಈ ವೇಳೆ ಗಣೇಶ ಮೆರವಣಿಗೆಯೂದ್ದಕ್ಕೂ ಕಲ್ಲು ತೂರಾಟ ಮಾಡಲಾಗಿದೆ. ಹೀಗಾಗಿ ಬೇತೂರು ರಸ್ತೆ, ಅರಳಿ ಮರ, ಅಶೋಕ ರೋಡ್, ಹಾಸಭಾವಿ ಸರ್ಕಲ್ ಉದ್ವಿಗ್ನಗೊಂಡಿವೆ. ಹಿಂದೂ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದಾರೆ. ಅಲ್ಲದೇ ಸಿಬ್ಬಂದಿ ಕೊರತೆಯಿಂದಾಗಿ ಗಲಾಟೆ ನಿಯಂತ್ರಿಸಲು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ: ಮೊದಲ ಮಗುವಿಗೆ ವೆಲ್ಕಮ್ ಹೇಳಿದ ನಟಿ ಕವಿತಾ ಗೌಡ- ಚಂದನ್ ಕುಮಾರ್.. ಗಂಡಾ, ಹೆಣ್ಣಾ..?
ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿದ್ದಲ್ಲದೇ ಭದ್ರತೆಗೆ ನಿಯೋಜನೆ ಮಾಡಿದ್ದ ಪೊಲೀಸರ ಮೇಲೂ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಇದರಿಂದಾಗಿ ಡಿಸಿಆರ್ಬಿ ಪೊಲೀಸ್ ರಘು ತಲೆಗೆ ಗಂಭೀರವಾದ ಗಾಯವಾಗಿದೆ. ಎರಡು ಗುಂಪುಗಳಿಂದ ಜನರು ಜಮಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ