ವಂದೇ ಭಾರತ್ ಸೇರಿದಂತೆ ಅನೇಕ ರೈಲುಗಳ ಮೇಲೆ ಕಲ್ಲೆಸೆತ
ಆತಂಕದಲ್ಲಿ ಪ್ರಯಾಣ ಮಾಡುತ್ತಿರುವ ರೈಲ್ವೆ ಪ್ರಯಾಣಿಕರು
ಕಲ್ಲು ಹೊಡೆದ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ ಅಧಿಕಾರಿಗಳು
ರಾಮನಗರ: ಪಟ್ಟಣದ ಹೊರವಲಯದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದಿದ್ದಾರೆ. ತಿಂಗಳಲ್ಲಿ ನಾಲ್ಕೈದು ಬಾರಿ ವಂದೇ ಭಾರತ್ ರೈಲಿನ ಮೇಲೆ ಕಲ್ಲೆಸೆದಿದ್ದರು. ಇದೀಗ ಇಂತಹುದೇ ಘಟನೆ ಮತ್ತೆ ನಡೆದಿದೆ.
ಕೇಂದ್ರದ ಮಹತ್ತರ ಸೇವೆಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳ ಮೇಲೆ ಇತ್ತೀಚೆಗೆ ಕಲ್ಲೆಸೆತ ಆಗುತ್ತಲೇ ಇದೆ. ರಾಮನಗರ ಪಟ್ಟಣ ಹೊರವಲಯದ ರೈಲು ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಪರಿಣಾಮ ರೈಲಿನ ಕಿಟಕಿ ಗಾಜು ಪುಡಿಯಾಗಿ ಸೀಟಿನ ಮೇಲೆ ಬಿದ್ದಿದೆ.
ಹೀಗಾಗಿ ವಂದೇ ಭಾರತ್ ರೈಲಿನಲ್ಲಿ ಹೋಗುವ ಪ್ರಯಾಣಿಕರು ಆತಂಕದಲ್ಲಿ ಪ್ರಯಾಣ ಮಾಡುವಂತಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ