Advertisment

ಗಂಟೆಗೆ 60-80ಕಿಮೀ ವೇಗ; ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ.. ಮಾಡಿದ ಅನಾಹುತಗಳೇನು?

author-image
Gopal Kulkarni
Updated On
ಗಂಟೆಗೆ 60-80ಕಿಮೀ ವೇಗ; ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ.. ಮಾಡಿದ ಅನಾಹುತಗಳೇನು?
Advertisment
  • ತಮಿಳುನಾಡು, ಪುದುಚೆರಿಯಲ್ಲಿ ಫೆಂಗಲ್ ಚಂಡಮಾರುತದ ಉಗ್ರಾವತಾರ
  • ಮರ-ಗಿಡಗಳನ್ನು ಧರೆಗುರುಳಿಸಿದ ಯಮವೇಗದಲ್ಲಿ ಬಂದು ಅಪ್ಪಳಿಸಿದ ಫೆಂಗಲ್​
  • ಚೆನ್ನೈ ಏರ್​ಪೋರ್ಟ್​ನಲ್ಲಿ ವಿಮಾನ ಸಂಚಾರ ವ್ಯತ್ಯಯ, ಕರ್ನಾಟಕಕ್ಕೂ ಎಫೆಕ್ಟ್​

ಫೆಂಗಲ್‌ ಆರ್ಭಟ ಜೋರಾಗಿದೆ. ಭಾರೀ ಮಳೆ, ಪ್ರವಾಹಕ್ಕೆ ಜನರು ಥಂಡಾ ಹೊಡೆದಿದ್ದಾರೆ. ತಮಿಳುನಾಡು, ಪುದುಚೇರಿಯಲ್ಲಿ ಆಂಧ್ರ ಕರಾವಳಿಯಲ್ಲಿ ಮಳೆ ಅಬ್ಬರಿಸಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಇತ್ತ ಕರ್ನಾಟಕದಲ್ಲೂ ಫೆಂಗಲ್ ಎಫೆಕ್ಟ್‌ನಿಂದಾಗಿ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.

Advertisment

publive-image

ತಮಿಳುನಾಡಿಗೆ ಅಪ್ಪಳಿಸಿದ ಫೆಂಗಲ್ ಚಂಡಮಾರುತ
ಫೆಂಗಲ್ ಚಂಡಮಾರುತ ಅಬ್ಬರಕ್ಕೆ ತಮಿಳುನಾಡು, ಪುದಿಚೆರಿ ತತ್ತರಿಸಿದೆ. ಸಂಜೆ 7.30ರ ಸುಮಾರಿಗೆ ತಮಿಳುನಾಡಿನ ಉತ್ತರ ಕರಾವಳಿ ಮತ್ತು ಪುದುಚೇರಿ ಮಧ್ಯೆ ಅಪ್ಪಳಿಸಿ ಫೆಂಗಲ್​. ಭಾರೀ ಅವಾಂತರವನ್ನೇ ಸೃಷ್ಟಿಸಿದೆ.

ವರುಣನ ಆರ್ಭಟಕ್ಕೆ ತಮಿಳುನಾಡಿನ ರಾಜಧಾನಿ ಚೆನ್ನೈ ಜನರು ತತ್ತರಿಸಿದ್ದಾರೆ. ನಿನ್ನೆಯಿಂದಲೂ ಸುರಿದ ಮಳೆಗೆ ಚೆನ್ನೈನಬಹುತೇಕ ರಸ್ತೆಗಳು ಜಲಾವೃತವಾಗಿ ಜನರು ಪರದಾಡಿದ್ರು. ಅಂಡರ್​ ಪಾಸ್​ಗಳು ಜಲಾವೃತಾವಾಗಿದ್ದ ಕಾರಣ ಬ್ಯಾರಿಕೇಡ್​ಗಳನ್ನ ಹಾಕಿ, ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ಇದನ್ನೂ ಓದಿ:VIDEO: ಫೆಂಗಲ್ ಸೈಕ್ಲೋನ್‌ಗೆ ತತ್ತರಿಸಿದ ಚೆನ್ನೈ; ಇಂದು ಬೆಂಗಳೂರಲ್ಲೂ ಮಳೆಯ ಅಲರ್ಟ್‌!

Advertisment

ಇನ್ನು ಗಂಟೆಗೆ 60-80 ಕಿ.ಮೀ. ವೇಗದಲ್ಲಿ ಎಂಟ್ರಿಕೊಟ್ಟ ಫೆಂಗಲ್​ ಸೈಕ್ಲೋನ್​ ಸುಮಾರು 4 ಗಂಟೆಗಳ ಕಾಲ ತನ್ನ ರೌದ್ರಾವತಾರ ತೋರಿತು. ಮಧ್ಯರಾತ್ರಿ ಸುಮಾರಿಗೆ, ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ತಮಿಳುನಾಡಿನ ಕರಾವಳಿಯನ್ನು ಫೆಂಗಲ್​ ಚಂಡಮಾರುತ ಹಾದುಹೋಯ್ತು..

ಫೆಂಗಲ್​ ಆರ್ಭಟಕ್ಕೆ ಧರೆಗುರುಳಿದ ಮರಗಳು
ತಮಿಳುನಾಡಿನ ಕಲ್ಪಕ್ಕಮ್​ ಎಂಬಲ್ಲಿ ಫೆಂಗಲ್​ ಆರ್ಭಟಕ್ಕೆ ಮರಗಿಡಗಳು ಧರೆಗುರುಳಿದ್ದು, ಭಾರೀ ಅವಾಂತ ಸೃಷ್ಟಿಯಾಗಿದೆ. ಇನ್ನು ಕೆಲವೆಡೆ ಮನೆಗಳು ಮೇಲ್ಛಾವಣಿಗೆ ಹಾನಿಯಾಗಿದೆ.

ಚೆನ್ನೈ ಏರ್​ಪೋರ್ಟ್​ನಲ್ಲಿ ವಿಮಾನ ಸಂಚಾರ ವ್ಯತ್ಯಯ
ಇನ್ನು ಫೆಂಗಲ್​ ಸೈಕ್ಲೋನ್​ನಿಂದಾಗಿ, ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದಲ್ಲಿ ವ್ಯತ್ಯವಾಗಿತ್ತು. 55 ವಿಮಾನಗಳ ಹಾರಾಟ ರದ್ದು ಮಾಡಿದ್ರೆ, 19 ವಿಮಾನಗಳನ್ನು ಬೇರೆಡೆಗೆ ಡೈವರ್ಟ್​ ಮಾಡಲಾಗಿತ್ತು. ಭಾನುವಾರ ಮುಂಜಾನೆ 4 ಗಂಟೆವರೆಗೂ ಚೆನ್ನೈ ಏರ್​ಪೋರ್ಟ್​ನಲ್ಲಿ ವಿಮಾನಯಾನ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

Advertisment

publive-image

ಕೇವಲ ತಮಿಳುನಾಡು ಮಾತ್ರವಲ್ಲ ಪುದುಚೇರಿಯಲ್ಲೂ ಭಾರೀ ಮಳೆಯಾಗುತ್ತಿದೆ. ಇವತ್ತು ಕೂಡ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಆಂಧ್ರದಲ್ಲೂ ಇವತ್ತು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇತ್ತ ಕರ್ನಾಟಕಕ್ಕೂ ಫೆಂಗಲ್​ ಸೈಕ್ಲೋನ್​ ಎಫೆಕ್ಟ್​ ತಟ್ಟಿದ್ದು, ನಿನ್ನೆ ಇಡೀ ದಿನ ಮೊಡ ಕವಿದ ವಾತಾವರಣ ಇತ್ತು. ಹಾಗೂ ರಾತ್ರಿ ಬೆಂಗಳೂರಿನ ಕೆಲವೆಡೆ ಮಳೆಯಾಗಿದೆ. ಇವತ್ತು ಕೂಡ ಮಳೆಯಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment