newsfirstkannada.com

ಫಾಸ್ಟ್​​​ಟ್ಯಾಗ್​​ ಗೋಲ್​ಮಾಲ್​​​; ನೀವು ಟೋಲ್​ ದಾಟದಿದ್ರೂ ಕಟ್​​ ಆಗುತ್ತೆ ದುಡ್ಡು; ಶುರುವಾಗಿದ್ಯಾ ಹೊಸ ದಂಧೆ..?

Share :

22-07-2023

  NHAI ನ್ಯಾಷನಲ್​ ಹೈವೇ ಅಥಾರಿಟಿ ಆಫ್ ​ಇಂಡಿಯಾಗೆ ದೂರು!

  ಟೋಲ್​ ದಾಟದಿದ್ರೂ ಫಾಸ್ಟ್​​ಟ್ಯಾಗ್​ ಮೂಲಕ ಹಣ ಕಟ್!

  ಈ ಬಗ್ಗೆ ನ್ಯಾಷನಲ್​ ರೋಡ್​ ಸೇಫ್ಟಿ ಕೌನ್ಸಿಲ್​ ಹೇಳಿದ್ದೇನು..?

ಬೆಂಗಳೂರು: ಬಹುತೇಕ ಕಡೆಗಳಲ್ಲಿ ಇರೋದು ಟೋಲ್‌ ರಸ್ತೆಗಳೇ. ಫಾಸ್ಟ್‌ ಟ್ಯಾಗ್‌ ಇಲ್ಲ ಅಂದ್ರೆ ವಾಹನಗಳಿಗೆ ಓಡಾಡೋದು ಕಷ್ಟಾನೇ. ನೀವು ಕೂಡಾ ಫಾಸ್ಟ್‌ ಟ್ಯಾಗ್‌ ಹಾಕಿಕೊಂಡಿರಬಹುದು. ನಿಮ್ಮ ಫಾಸ್ಟ್​ ಟ್ಯಾಗ್​ ಬ್ಯಾಲೆನ್ಸ್ ಮೊತ್ತ ಎಷ್ಟಿದೆ ಅನ್ನೋದನ್ನ ಒಮ್ಮೆ ಚೆಕ್​ ಮಾಡಿ. ಯಾಕಂದ್ರೆ ಸ್ವಲ್ಪ ಯಾಮಾರಿದ್ರೂ ಬೀಳುತ್ತೆ ಮಕ್ಮಲ್​ ಟೋಪಿ. ಫಾಸ್ಟ್​ಟ್ಯಾಗ್​ ಟೋಲ್​ಗಳಲ್ಲಿ ಓಡಾಡೋರಿಗೆ ಈ ಬಗ್ಗೆ ಗೊತ್ತೇ ಇರುತ್ತೆ.

ಟೋಲ್ ಪ್ಲಾಜಾಗಳಲ್ಲಿ ಉಂಟಾಗೋ ಟ್ರಾಫಿಕ್ ಜಾಮ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್​ ಅನ್ನು ಜಾರಿಗೆ ತಂದಿದೆ. ಇದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಈ ಟ್ಯಾಗ್​​​ ಅನ್ನು ವಾಹನದ ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದ ಟೋಲ್ ಶುಲ್ಕವನ್ನು ತ್ವರಿತವಾಗಿ ಪಾವತಿಸಬಹುದು. ನಿಮ್ಮ ಮನೆಯಲ್ಲಿರೋ ಕಾರಿಗೂ ಫಾಸ್ಟ್​​ಟ್ಯಾಗ್​ನಲ್ಲಿ ಅಮೌಂಟ್​ ಕಟ್​ ಆಗ್ತಿದೆ ಅನ್ನೋ ಕಾರಣಕ್ಕೆ. ಇನ್ನೂ ನೆಲಮಂಗಲ ಮತ್ತು ಪಾರ್ಲೆ-ಜಿ ಟೋಲ್​ಗಳಲ್ಲಿ ವಾಹನ ಓಡಾಟವಿಲ್ಲದಿದ್ರೂ ಹಣ ಕಡಿತ ಮಾಡಲಾಗ್ತಿದೆ ಎನ್ನಲಾಗ್ತಿದ್ದು.

ಈ ದರೋಡೆ ನಡೆಯೋದು ಹೇಗೆ ಗೊತ್ತಾ..?

ವಾಹನ ಸವಾರರು ನಮ್ಮ ವಾಹನ ಟೋಲ್​ ದಾಟದಿದ್ರೂ ಫಾಸ್ಟ್​​ಟ್ಯಾಗ್​ ಮೂಲಕ ಹಣ ಕಟ್​ ಆಗ್ತಿದೆ ಅಂತ ಆರೋಪಿಸ್ತಿದ್ದಾರೆ. ಆದ್ರೆ ಇಂತಹ ಪ್ರಕರಣಗಳು ನಮ್ಮ ಗಮನಕ್ಕೇ ಬಂದಿಲ್ಲ ಅಂತಿದ್ದಾರೆ ನ್ಯಾಷನಲ್​ ರೋಡ್​ ಸೇಫ್ಟಿ ಕೌನ್ಸಿಲ್​ ಸದಸ್ಯರು ಯಾವುದೇ ವಾಹನಗಳಿಗೆ ಟೋಲ್​ ಪ್ಲಾಜಾ ದಾಟದಿದ್ರೂ ಹಣ ಕಡಿತವಾದ ಪಕ್ಷದಲ್ಲಿ ಅವರು 24 ಗಂಟೆಯೊಳಗೆ ದೂರು ನೀಡಿ ಹಣ ವಾಪಸ್​ ಪಡೆಯಬಹುದು. ಇವರು ಹೇಳೋ ಪ್ರಕಾರ ತಾಂತ್ರಿಕ ದೋಷದಿಂದ ಹೀಗೆ ಆಗ್ತಿರಬಹುದು.

ಈ ಬಗ್ಗೆ ಟೋಲ್​​ನ ಮ್ಯಾನೇಜರ್​, ಸೂಪರಿಂಟೆಂಡೆಂಟ್​​, ಸೂಪರ್ವೈಸರ್​​, ಪಿಡಿಗಳಿಗೆ ಮಾತ್ರವಲ್ಲ ಸಾರಿಗೆ ಮಂತ್ರಿಗಳಿಗೂ ದೂರು ನೀಡಬಹುದು. ಮೇಲ್​, ಟ್ವೀಟರ್​ ಮೂಲಕ ದೂರು ನೀಡಿದ್ರೆ ಸಮಸ್ಯೆ ಬಗೆಹರಿಯಲಿದೆ. NHAI ನ್ಯಾಷನಲ್​ ಹೈವೇ ಅಥಾರಿಟಿ ಆಫ್ ​ಇಂಡಿಯಾಗೂ ಈ ಬಗ್ಗೆ ದೂರು ನೀಡಬಹುದಾಗಿದೆ. ಅದು ಏನೇ ಇರಲಿ ನಿಮ್ಮ ವಾಹನಗಳಿಗೆ ನೀವು ಮಾಡಿರೋ ಫಾಸ್ಟ್​ ಟ್ಯಾಗ್​ ರೀಚಾರ್ಜ್​ ಎಲ್ಲೆಲ್ಲಿ ಎಷ್ಟೆಷ್ಟು ಕಟ್​ ಆಗಿದೆ ಅನ್ನೋದನ್ನ ಇನ್ನೂ ಗಮನಿಸದೇ ಇದ್ದರೆ ಕೂಡಲೇ ಮೊಬೈಲ್​ ತೆಗೆದು ಚೆಕ್​ ಮಾಡಿಕೊಳ್ಳಿ ಇಲ್ಲದಿದ್ರೆ ಟೋಲ್​ ಕಳ್ಳರ ಖಜಾನೆಗೆ ​ ನಿಮ್ಮ ಹಣವೂ ಸೇರಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫಾಸ್ಟ್​​​ಟ್ಯಾಗ್​​ ಗೋಲ್​ಮಾಲ್​​​; ನೀವು ಟೋಲ್​ ದಾಟದಿದ್ರೂ ಕಟ್​​ ಆಗುತ್ತೆ ದುಡ್ಡು; ಶುರುವಾಗಿದ್ಯಾ ಹೊಸ ದಂಧೆ..?

https://newsfirstlive.com/wp-content/uploads/2023/07/fast-tag.jpg

Load More