newsfirstkannada.com

Gyanvapi Survey: ಇಂದಿನಿಂದ ಜ್ಞಾನವಾಪಿ ಮಸೀದಿ ಸರ್ವೇ ಪುನರಾರಂಭ.. ಹೈಕೋರ್ಟ್ ವಿಧಿಸಿದ ಷರತ್ತುಗಳು ಇಲ್ಲಿವೆ

Share :

04-08-2023

    ಸಮೀಕ್ಷೆಗೆ ಅವಕಾಶ ಕೊಡದಂತೆ ಸುಪ್ರೀಂಗೆ ಮತ್ತೆ ಮನವಿ

    ಹಿಂದೂ ಪರ ವಕೀಲರಿಂದಲೂ ಕೇವಿಯಟ್​ ಸಲ್ಲಿಕೆ

    ಜ್ಞಾನವಾಪಿಯಲ್ಲಿ ಎಎಸ್​ಐ ಸಮೀಕ್ಷೆಗೆ ಕೆಲ ಷರತ್ತು

ಜ್ಞಾನವಾಪಿ ಮಂದಿರವೋ, ಮಸೀದಿಯೋ ಎಂಬ ಗದ್ದಲ ದೇಶಾದ್ಯಂತ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಅದರಲ್ಲೂ ಮಸೀದಿಯೊಳಗೆ ದೇಗುಲದ ಕುರುಹುಗಳ ಮತ್ತೆ ಆದ ಬಳಿಕ ಇದು ಮತ್ತೊಂದು ಹಂತ ತಲುಪಿತ್ತು. ಹೀಗಾಗಿ ಗ್ಯಾನವಾಪಿಯೊಳಗೆ ಅಡಗಿರುವ ಅಸಲಿ ರಹಸ್ಯ ಪತ್ತೆ ಹಚ್ಚಬೇಕೆಂಬ ಕೂಗು ಎದ್ದಿತ್ತು. ವಾರಾಣಸಿ ಕೋರ್ಟ್​ನ ಆದೇಶ ಎತ್ತಿಹಿಡಿದ ಹೈಕೋರ್ಟ್​ ಗ್ಯಾನವಾಪಿ ಆವರಣದಲ್ಲಿ ಸಮೀಕ್ಷೆಗೆ ಗ್ರೀನ್​ಸಿಗ್ನಲ್​ ನೀಡಿದೆ.

ಇಡೀ ದೇಶದ ಗಮನ ಸೆಳೆದಿರುವ ಗ್ಯಾನವಾಪಿ ಗದ್ದಲದಲ್ಲಿ ಹಿಂದೂ ಪರ ಹೋರಾಟಗಾರರಿಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಗ್ಯಾನವಾಪಿ ಆವರಣದಲ್ಲಿ ವೈಜ್ಞಾನಿಕ ಸರ್ವೇಗೆ ಒಪ್ಪಿಗೆ ನೀಡಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಅಲಹಾಬಾದ್​ ಹೈಕೋರ್ಟ್​ ಎತ್ತಿ ಹಿಡಿದಿದ್ದು ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದೆ. ಗ್ಯಾನವಾಪಿ ದೇಗುಲವೋ, ಮಸೀದಿಯೋ ಎಂಬುದನ್ನು ತಿಳಿಯಲು ವಾರಾಣಸಿ ಜಿಲ್ಲಾ ನ್ಯಾಯಾಲಯ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು. ಆದ್ರೆ, ವಾರಣಾಸಿ ಕೋರ್ಟ್ ನೀಡಿದ್ದ ಸರ್ವೇ ಆದೇಶವನ್ನು ಪ್ರಶ್ನಿಸಿ ಮಸೀದಿ ಪರ ಸಮಿತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ಬಳಿಕ ಸುಪ್ರೀಂಕೋರ್ಟ್​ ಸರ್ವೇಗೆ ತಾತ್ಕಾಲಿಕ ತಡೆ ನೀಡಿ, ಪ್ರಕರಣವನ್ನು ಅಲಹಾಬಾದ್​ ಹೈಕೋರ್ಟ್​ಗೆ ವರ್ಗಾವಣೆ ಮಾಡಿತ್ತು. ಸುಪ್ರೀಂಕೋರ್ಟ್​ ಸೂಚನೆಯಂದೆ ಏಕಸದಸ್ಯ ಪೀಠದಲ್ಲಿ ಮೂರು ದಿನ ವಿಚಾರಣೆ ನಡೆದಿತ್ತು. ಈ ವೇಳೆ ಸಮೀಕ್ಷೆಯಿಂದ ರಚನೆಗೆ ಹಾನಿಯಾಗುತ್ತದೆ ಎಂದು ಮಸೀದಿ ಪರ ವಕೀಲರು ವಾದಿಸಿದ್ದರು. ಬಳಿಕ ಸಮೀಕ್ಷೆಯಿಂದ ಯಾವುದೇ ಹಾನಿಯಾಗುವುದಿಲ್ಲ ಎಂದು ಎಎಸ್ಐ ಅಫಿಡವಿಟ್ ಸಲ್ಲಿಸಿತ್ತು. ಎರಡೂ ಕಡೆಯ ವಾದ ಪ್ರತಿವಾದ ಹಾಲಿಸಿದ ಹೈಕೋರ್ಟ್​, ಇಂದು ತೀರ್ಪುನ್ನು ಪ್ರಕಟಿಸಿದೆ.

ಹೈಕೋರ್ಟ್​ ಆದೇಶದಲ್ಲಿ ಏನಿದೆ?

ಜ್ಞಾನವಾಪಿ ಆವರಣದಲ್ಲಿ ASI ಸಮೀಕ್ಷೆ ಮುಂದುವರಿಯುತ್ತದೆ. ಯಾವುದೇ ಅಗೆಯುವಿಕೆ ಅಥವಾ ಹಾನಿ ಮಾಡಬಾರದು ಎಂದು ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಹಾಗೂ ನ್ಯಾಯ ಒದಗಿಸುವ ದೃಷ್ಟಿಯಿಂದ ವೈಜ್ಞಾನಿಕ ಸರ್ವೇ ಅಗತ್ಯವೆಂದು ಹೈಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿ, ಮಸೀದಿ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ, ಸಮೀಕ್ಷೆಗೆ ಗ್ರೀನ್​ಸಿಗ್ನಲ್​ ನೀಡಿದೆ.

ಇಂದು ಬೆಳಗ್ಗೆ ಜ್ಞಾನವಾಪಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ

ಕೂಡಲೇ ವೈಜ್ಞಾನಿಕ ಸಮೀಕ್ಷೆ ಆರಂಭಿಸಬಹುದೆಂದು ಅಲಹಾಬಾದ್ ಹೈಕೋರ್ಟ್​ ಹೇಳಿದೆ. ಇದರ ಬೆನ್ನಲ್ಲೇ ಇಂದು ಬೆಳಗ್ಗೆ ಗ್ಯಾನವ್ಯಾಪಿ ಆವರಣದಲ್ಲಿ ಸಮೀಕ್ಷ ನಡೆಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ, ಗ್ಯಾನವಾಪಿ ಮಸೀದಿ ಬಳಿ ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ. ಉತ್ತರ ಪ್ರದೇಶದ ಡಿಸಿಎಂ ಕೇಶವ ಪ್ರಸಾದ್ ಮೌರ್ಯ, ನಾನು ಈ ತೀರ್ಪನ್ನು ಸ್ವಾಗತಿಸುತ್ತೇನೆ. ಸತ್ಯ ಹೊರಬರುವ ವಿಶ್ವಾಸವಿದೆ ಎಂದಿದ್ದಾರೆ.

ಸುಪ್ರೀಂ​ಕೋರ್ಟ್​ ಮೆಟ್ಟಿಲೇರಿದ ಮಸೀದಿ ಸಮಿತಿ

ವಾರಣಾಸಿ ಕೋರ್ಟ್​ ಬಳಿಕ ಅಲಹಾಬಾದ್​ ಹೈಕೋರ್ಟ್​ನಲ್ಲೂ ಮಸೀದಿ ಪರ ಹೋರಾಟಗಾರರಿಗೆ ಹಿನ್ನಡೆಯಾಗಿದೆ. ಹೀಗಾಗಿ ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ, ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಅಲಹಾಬಾದ್ ಹೈಕೋರ್ಟ್​ ಆದೇಶ ಪ್ರಶ್ನಿಸಿ ಮಸೀದಿ ಪರ ವಕೀಲ ನಿಜಾಂ ಪಾಷಾರಿಂದ ಮೇಲ್ಮನವಿ ಸಲ್ಲಿಸಿದ್ದಾರೆ. ಹಾಗೂ ಸುಪ್ರೀಂಕೋರ್ಟ್​ಗೆ ಇ-ಮೇಲ್​ನಲ್ಲಿ ಹೈಕೋರ್ಟ್​ ಆದೇಶದ ಪ್ರತಿ ಕಳಿಸಿ, ಜ್ಞಾನವಾಪಿ ಆವರಣದಲ್ಲಿ ಸರ್ವೇಗೆ ಅವಕಾಶ ಕೊಡದಂತೆ ಮನವಿ ಮಾಡಿದ್ದಾರೆ. ಕೂಡಲೇ ಇ-ಮೇಲ್​ ನೋಡುವುದಾಗಿ ತಿಳಿಸಿದ ಸಿಜೆಐ ಡಿ.ವೈ ಚಂದ್ರಚೂಡ ಅವರು, ಸದ್ಯಕ್ಕೆ ಯಾವುದೇ ಆದೇಶದ ನೀಡಿಲ್ಲ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಜ್ಞಾನವಾಪಿ ಗದ್ದಲದಲ್ಲಿ ಹಿಂದೂ ಪರ ಹೋರಾಟಗಾರರಿಗೆ ಬಹುದೊಡ್ಡ ಗೆಲವುವೇ ಸಿಕ್ಕಿದೆ. ಹಿಂದೂ ಪರ ಹೋರಾಟಗಾರರ ವಾರಾಣಸಿಯಲ್ಲಿ ಗೆಲುವಿನ ಸಂಭ್ರಮದಲ್ಲಿದ್ದಾರೆ. ಇಂದಿಯಿಂದ ವೈಜ್ಞಾನಿಕ ಸಮೀಕ್ಷೆ ಮುಂದುವರಿಯಲಿದ್ದು, ಗ್ಯಾನವಾಪಿ ಮಂದಿರವೋ, ಮಸೀದಿಯೋ ಎಂಬ ರಹಸ್ಯ ಆದಷ್ಟು ಬೇಗ ಹೊರಗೆ ಬರುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Gyanvapi Survey: ಇಂದಿನಿಂದ ಜ್ಞಾನವಾಪಿ ಮಸೀದಿ ಸರ್ವೇ ಪುನರಾರಂಭ.. ಹೈಕೋರ್ಟ್ ವಿಧಿಸಿದ ಷರತ್ತುಗಳು ಇಲ್ಲಿವೆ

https://newsfirstlive.com/wp-content/uploads/2023/08/GYANAVAPI.jpg

Load More