newsfirstkannada.com

ಅಂದು ಮನ್ನತ್ ಮುಂದೆ ಫೋಟೋ ತೆಗೆಸಿಕೊಂಡಿದ್ದ ಅಟ್ಲಿ.. ಇಂದು ಶಾರುಖ್​ಗೆ ಸಿನಿಮಾ ಮಾಡಿದ್ರು!

Share :

10-09-2023

  10 ವರ್ಷದ ಸೀಕ್ರೆಟ್,​ ಶಾರುಖ್​ ಅರಮನೆಗೆ ಅಟ್ಲಿ ಹೋಗಿದ್ದೇಗೆ?

  ಟಾಲಿವುಡ್ ಸೂಪರ್ ​ಸ್ಟಾರ್​ಗಳ ಜೊತೆ ಅರುಣ್ ಕುಮಾರ್ ಚಿತ್ರ!

  ಆ ಇಬ್ಬರು ಸ್ಟಾರ್​​ಗಳ ಜೊತೆ ಸಿನಿಮಾ ಮಾಡ್ತಾರಾ 'ಜವಾನ್'​ ಡೈರೆಕ್ಟರ್?

ಹತ್ತು ವರ್ಷದ ಹಿಂದೆ ಶಾರುಖ್ ಖಾನ್ ಮನೆ ಗೇಟ್​ ಮುಂದೆ ನಿಂತುಕೊಂಡು ಫೋಟೋ ತೆಗೆಸಿಕೊಂಡಿದ್ದ ಹುಡುಗ, ಇವತ್ತು ಶಾರುಖ್​ ಖಾನ್​ ಜೊತೆ ಸಿನಿಮಾ ಮಾಡಿ ಅದ್ಭುತ ಸೃಷ್ಟಿಸಿದ್ದಾನೆ. ರಾಜಮೌಳಿ, ಸುಕುಮಾರ್, ಪ್ರಶಾಂತ್ ನೀಲ್ ನಂತರ ಅಟ್ಲಿ ಪ್ಯಾನ್ ಇಂಡಿಯಾ ನಯಾ ರೂಲರ್​. ಸೌತ್ ಡೈರೆಕ್ಟರ್​ಗಳು ಬಾಲಿವುಡ್​ನ ರೂಲ್ ಮಾಡೋದು ಹೊಸದೇನಲ್ಲ. ದಕ್ಷಿಣದ ಸಾಕಷ್ಟು ನಿರ್ದೇಶಕರು ಬಾಲಿವುಡ್​ಗೆ ಹೋಗಿ ಸಕ್ಸಸ್ ನೋಡಿ ಬಂದಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ಆದ್ಮೇಲೆ ರಾಜಮೌಳಿ, ಸುಕುಮಾರ್, ಪ್ರಶಾಂತ್ ನೀಲ್​ ಹೆಸರುಗಳು ಟಾಕ್ ಆಫ್ ದಿ ಟೌನ್ ಆಗಿದೆ. ಇದೀಗ ಪ್ಯಾನ್ ಇಂಡಿಯಾ ಅಖಾಡಕ್ಕೆ ಹೊಸ ಆಟಗಾರನ ಎಂಟ್ರಿಯಾಗಿದೆ.

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಬಾಕ್ಸಾಫೀಸ್​ ಚಿಂದಿ ಉಡಾಯಿಸಿದೆ. ಮೊದಲ ದಿನವೇ ಸರಿ ಸುಮಾರು 130 ಕೋಟಿ ಕಲೆಕ್ಷನ್ ಮಾಡಿದ ಜವಾನ್ ಎರಡು ದಿನಕ್ಕೆ 200 ಕೋಟಿ ಬಾಚಿಕೊಂಡಿದೆ. ಶನಿವಾರ ಮತ್ತು ಭಾನುವಾರ ಟಿಕೆಟ್​ಗಳು ಬಹುತೇಕ ಬುಕ್ಕಿಂಗ್ ಆಗಿದ್ದು, ಭರ್ಜರಿ ಗಳಿಕೆ ಕಾಣುವ ಸಾಧ್ಯತೆ ಇದೆ. ಬ್ಯಾಕ್ ಟು ಬ್ಯಾಕ್ ಸೋತು ಸೋತು ಸುಸ್ತಾಗಿದ್ದ ಶಾರುಖ್ ಖಾನ್ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದು ಇದೀಗ ಗೆಲುವಿನ ರುಚಿ ನೋಡ್ತಾ ಇದ್ದಾರೆ. ವರ್ಷದ ಆರಂಭದಲ್ಲಿ ಪಠಾಣ್ ಈಗ ಜವಾನ್. ಕಿಂಗ್ ಖಾನ್​ ಸ್ಟಾರ್​ಡಂ, ಇಮೇಜ್​ನ ಗಟ್ಟಿಯಾಗಿ ನಿಲ್ಲಿಸಿದೆ. ಇವತ್ತು ಜವಾನ್​ ಗೆಲುವಿನ ಹಿಂದಿನ ರಿಯಲ್ ಫೈಟರ್​ ಹೆಸರು ಅರುಣ್ ಕುಮಾರ್ ಅಲಿಯಾಸ್ ಅಟ್ಲಿ.

ಅಟ್ಲಿ ತಾನೊಬ್ಬ ನಿರ್ದೇಶಕ ಆಗಬೇಕು ಅಂತ ಅಂದ್ಕೊಂಡಿದ್ರು. ಆದರೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡ್ತೀನಿ ಅಂತ ಮಾತ್ರ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲವಂತೆ. ಆದ್ರೆ ಇಂಥಾ ಅದೃಷ್ಟ ಸಿಕ್ಕಾಗ ಯಾವುದೇ ಕಾರಣಕ್ಕೂ ಈ ಅವಕಾಶವನ್ನ ಮಿಸ್ ಮಾಡಿಕೊಳ್ಳಬಾರದು ಅಂತ ಬರೋಬ್ಬರಿ ಮೂರು ವರ್ಷ ಹಗಲು ರಾತ್ರಿ ಈ ಚಿತ್ರಕ್ಕಾಗಿ ಕಷ್ಟಪಟ್ಟಿದ್ದಾರೆ. ಗರ್ಭಿಣಿ ಪತ್ನಿನಾ ಚೆನ್ನೈನಲ್ಲಿ ಬಿಟ್ಟು ಜವಾನ್​ಗಾಗಿ ಫುಲ್ ಡೆಡಿಕೇಟಿವ್​ ಆಗಿ ಕೆಲಸ ಮಾಡಿದ್ದಾರೆ. ಆ ಶ್ರಮದ ಪ್ರತಿಫಲ ಇವತ್ತು ಅಟ್ಲಿಯನ್ನ ಪ್ಯಾನ್ ಇಂಡಿಯಾ ದುನಿಯಾದಲ್ಲಿ ದೊಡ್ಡ ಸ್ಟಾರ್​ ಆಗಿಸಿದೆ.

ಶಾರುಖ್ ಮನೆ ಗೇಟ್​ ಮುಂದೆ ಫೋಟೋ ತೆಗೆಸಿಕೊಂಡಿದ್ದ ಅಟ್ಲಿ!
ಹತ್ತು ವರ್ಷದ ನಂತರ ಸ್ವತಃ ಕಿಂಗ್ ಖಾನ್​ ಕರೆದು ಸಿನಿಮಾ ಆಫರ್!

ಅದು 2010ರ ಸಮಯ. ಆಗ ಅಟ್ಲಿ ಸ್ಟಾರ್​ ಡೈರೆಕ್ಟರ್ ಶಂಕರ್ ಬಳಿ ಅಸಿಸ್ಟಂಟ್ ಆಗಿ ಕೆಲಸ ಮಾಡ್ತಿದ್ರು. ರಜಿನಿಕಾಂತ್ ನಟನೆಯ ಎಂಥೀರನ್ ಸಿನಿಮಾದ ಶೂಟಿಂಗ್ ವೇಳೆ ಮುಂಬೈಗೆ ಬಂದಿದ್ದ ಅಟ್ಲಿ ಶಾರುಖ್ ಖಾನ್ ಮನೆ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದರಂತೆ. ಅವತ್ತು ಫೋಟೋ ತೆಗೆಸಿಕೊಳ್ಳುವಾಗ ಕೂಡ ಅದು ಶಾರುಖ್ ಖಾನ್ ಮನೆ ಅಂತ ಗೊತ್ತೇ ಇರಲಿಲ್ಲವಂತೆ. ಆದರೆ ಅದೇ ಹತ್ತು ವರ್ಷದ ನಂತರ ಖುದ್ದು ಬಾಲಿವುಡ್​ ಬಾದ್​ಶಾ ಶಾರುಖ್ ಫೋನ್ ಮಾಡಿ ಮನೆಗೆ ಕರೆದು ಜವಾನ್ ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ. ಹಾಗಂತ ಇದು ಅಟ್ಲಿಗೆ ರಾತ್ರೋರಾತ್ರಿ ಸಿಕ್ಕ ಬಂಪರ್ ಅಲ್ಲ. ಸುಮಾರು ಹತ್ತು ವರ್ಷದ ಹಾರ್ಡ್​ವರ್ಕ್​ನ ಫಲಿತಾಂಶ.

ಚೊಚ್ಚಲ ಚಿತ್ರದಲ್ಲೇ ಸಿಕ್ಸರ್.. ರಾಜರಾಣಿ ಸೂಪರ್​ ಡೂಪರ್!

ಶಂಕರ್ ಬಳಿ ಅಸಿಸ್ಟಂಟ್ ಆಗಿದ್ದ ಅಟ್ಲಿ 2013ರಲ್ಲಿ ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡ್ತಾರೆ. ಆ ಚಿತ್ರವೇ ರಾಜರಾಣಿ. ಆರ್ಯ, ನಯನತಾರ ಮತ್ತು ಜೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ರಾಜರಾಣಿ ಸೂಪರ್​ ಡೂಪರ್​ ಹಿಟ್ ಆಗುತ್ತೆ. ಅಟ್ಲಿ ಹೆಸರು ಕಾಲಿವುಡ್​ನಲ್ಲಿ ಸೆನ್ಸೇಷನ್ ಆಗುತ್ತೆ. ರಾಜರಾಣಿ ಹಿಟ್​ ಬಳಿಕ ಎರಡನೇ ಚಿತ್ರದಲ್ಲೇ ಇಳಯ ದಳಪತಿ ವಿಜಯ್ ಜೊತೆ ಸಿನಿಮಾ ಮಾಡುವ ಅವಕಾಶ ಗಿಟ್ಟಿಸಿಕೊಳ್ಳುವ ಅಟ್ಲಿ, ಒಂದೊಳ್ಳೆ ಮಾಸ್​ ಎಂಟರ್​ಟೈನರ್​ ಚಿತ್ರ ಮಾಡ್ತಾರೆ. ಅದುವೇ ಥೇರಿ ವಿಜಯ್ ಪೊಲೀಸ್​ ಸ್ಟೈಲ್​ಗೆ ಬಾಕ್ಸಾಫೀಸ್​ ಧೂಳ್ ಆಗುತ್ತೆ. ಥೇರಿ ಚಿತ್ರನೂ ಬಿಗ್ ಹಿಟ್​.

ಈ ಚಿತ್ರದ ಬೆನ್ನಲ್ಲೇ ಮತ್ತೆ ವಿಜಯ್ ಜೊತೆನೇ ಮೆರ್ಸಲ್​ ಎನ್ನುವ ಸಿನಿಮಾ ಮಾಡ್ತಾರೆ. ಈ ಚಿತ್ರವೂ ಕಮಾಲ್ ಮಾಡುತ್ತೆ. ಅಷ್ಟೊತ್ತಿಗಾಗಲೇ ಅಟ್ಲಿ ಮೇಲೆ ಎಮೋಷನಲ್ ಆಗಿ ಕನೆಕ್ಟ್​ ವಿಜಯ್, ಅಟ್ಲಿಗೆ ತಮ್ಮನ ಸ್ಥಾನ ಕೊಡ್ತಾರೆ. ಅಟ್ಲಿ ವಿಜಯ್ ಅವರನ್ನ ಗಾಡ್ ಫಾದರ್​ ಅಂತ ಕನ್ಸಿಡರ್ ಮಾಡ್ತಾರೆ. ಆಗಲೇ ಈ ಕಾಂಬಿನೇಷನ್​ನಲ್ಲಿ ಬಂದಿದ್ದು ಬಿಗಿಲ್. ವಿಜಯ್ ಜೊತೆ ಹ್ಯಾಟ್ರಿಕ್ ಬಾರಿಸಿದ ಅಟ್ಲಿ ಅಷ್ಟೊತ್ತಿಗೆ ತಮಿಳು ಇಂಡಸ್ಟ್ರಿಯ ಭರವಸೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಆ ಕಡೆ ಶಾರುಖ್ ಖಾನ್​ ಒಂದೊಳ್ಳೆ ಗೆಲುವಿಗಾಗಿ ಯೋಚನೆ ಮಾಡ್ತಿರುವಾಗ ಅಟ್ಲಿ ಬಗ್ಗೆ ತಿಳಿಯುತ್ತೆ. ಸಹಾಯಕನ ಸಹಾಯದಿಂದ ಅಟ್ಲಿಯನ್ನ ಸಂಪರ್ಕಿಸಿ ಮನೆಗೆ ಕರೆದು ಜವಾನ್ ಸಿನಿಮಾ ಮಾಡುವ ಅವಕಾಶ ಕೊಡ್ತಾರೆ. ಆ ಕಡೆ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುವ ಅವಕಾಶ ಅಂದಾಗ ಅಟ್ಲಿಗೆ ಫುಲ್ ಸಪೋರ್ಟ್ ಕೊಟ್ಟು ಕಾನ್ಫಿಡೆನ್ಸ್​ ಕೊಟ್ಟು ಕಳುಹಿಸಿದ್ದು ನಟ ವಿಜಯ್​ ಅನ್ನೋದನ್ನ ಖುದ್ದು ಅಟ್ಲಿ ಹೇಳಿಕೊಂಡಿದ್ದಾರೆ.

ಟಾಲಿವುಡ್ ಸೂಪರ್​ಸ್ಟಾರ್​ಗಳ ಜೊತೆ ಅಟ್ಲಿ ಸಿನಿಮಾ!

ಜವಾನ್​ ಸಿನಿಮಾ ಗ್ಲೋಬಲ್ ಹಿಟ್ ಆಗಿದೆ. ಮೊದಲ ವಾರದಲ್ಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಶಾರುಖ್ ಸಿನಿಮಾ ಈ ಹಿಂದಿನ ಎಲ್ಲಾ ಬಾಲಿವುಡ್​ ದಾಖಲೆಗಳನ್ನ ಪುಡಿಪುಡಿ ಮಾಡಿದೆ. ಈ ಜವಾನ್ ಸಕ್ಸಸ್​ ಆಗ್ತಿದ್ದಂತೆ ಆ ಕಡೆ ಟಾಲಿವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳಿಗೆ ಕಮಿಟ್ ಆಗಿದ್ದಾರಂತೆ ಅಟ್ಲಿ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಪ್ರಿನ್ಸ್​ ಮಹೇಶ್ ಬಾಬು ಜೊತೆ ಸಿನಿಮಾ ಮಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಈ ಇಬ್ಬರು ನಟರು ಸದ್ಯಕ್ಕೆ ಕಮಿಟ್ ಆಗಿರುವ ಚಿತ್ರಗಳನ್ನ ಮುಗಿಸಿ ಅಟ್ಲಿ ಜೊತೆ ಸಿನಿಮಾ ಮಾಡೋಕೆ ನಿರ್ಧರಿಸಿದ್ದಾರಂತೆ. ಈ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಅಟ್ಲಿ ಹೊಸ ಭರವಸೆಯಾಗಿದ್ದಾರೆ. ಬಾಲಿವುಡ್​ಗೆ ಜವಾನ್ ಅಂಥಹ ಗೆಲುವು ಬೇಕಿತ್ತು. ಆದರೆ ಅಂಥ ಗೆಲುವು ಕೊಡೋಕೆ ಸೌತ್ ಇಂಡಸ್ಟ್ರಿಯ ಅಟ್ಲಿ ಬರಬೇಕಿತ್ತು. ಇಲ್ಲಿಂದ ಅಟ್ಲಿಯ ಆಟ ಮತ್ತೊಂದು ರೀತಿ ಬದಲಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಮನ್ನತ್ ಮುಂದೆ ಫೋಟೋ ತೆಗೆಸಿಕೊಂಡಿದ್ದ ಅಟ್ಲಿ.. ಇಂದು ಶಾರುಖ್​ಗೆ ಸಿನಿಮಾ ಮಾಡಿದ್ರು!

https://newsfirstlive.com/wp-content/uploads/2023/09/jawan-13.jpg

Load More