ಇತರೆ ಧಾರಾವಾಹಿಗಳಂತೆ ಅಲ್ಲ ‘ಭಾಗ್ಯಲಕ್ಷ್ಮೀ’..!
ಸೀರಿಯಲ್ ಮೂಲಕ ‘ಶಿಕ್ಷಣದ ಕ್ರಾಂತಿ’ಗೆ ಅತ್ತೆ ಸೊಸೆ ನಾಂದಿ
ಇದು ದೊಡ್ಡ ಮಟ್ಟದಲ್ಲಿ ರೀಚ್ ಆಗಲು ಕಾರಣ ಏನು ಗೊತ್ತಾ ?
ಕಿರುತೆರೆಯಲ್ಲಿ ವಿಭನ್ನ ಪ್ರಯೋಗಗಳ ಮೂಲಕ ಗಮನ ಸೇಳೆದಿರುವ ಕತೆ ಭಾಗ್ಯಲಕ್ಷ್ಮೀ. ಸೀರಿಯಲ್ ಪ್ರಿಯರ ನೆಚ್ಚಿನ ಲಿಸ್ಟ್ನಲ್ಲಿ ಭಾಗ್ಯಲಕ್ಷ್ಮೀಗೆ ವಿಶೇಷ ಸ್ಥಾನ ಇದೆ. ಅದ್ರಲ್ಲೂ ಕುಸುಮಾ-ಭಾಗ್ಯ ಕಾಂಬಿನೇಷನ್ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿಯಾಗಿದೆ.
ಯಾವುದೇ ಧಾರಾವಾಹಿ ತೆಗೆದುಕೊಂಡರೂ ಮುಖ್ಯವಾಗಿ ವೀಕ್ಷಕರು ಇಷ್ಟ ಪಡೋದು ನಾಯಕ-ನಾಯಕಿ ಕಾಂಬಿನೇಷನ್. ಆದರೆ ಇಲ್ಲಿ ಅತ್ತೆ ಸೊಸೆಯ ಬಾಂಧವ್ಯದ ಬೆಸುಗೆ. ಕುಸುಮಾ-ಭಾಗ್ಯ ಯಾವುದಾದರೂ ಒಂದು ಫ್ರೇಮ್ನಲ್ಲಿ ಮಿಸ್ಸಾದರೂ ಅಭಿಮಾನಿಗಳು ಸಹಿಸೋದಿಲ್ಲ. ವಿಶೇಷ ಏನಂದರೆ ಮಕ್ಕಳಿಗೂ ಫೇವರಿಟ್ ಈ ಜೋಡಿ.
ಪಾತ್ರಗಳು ಈ ಮಟ್ಟಿಗೆ ರೀಚ್ ಆಗಲು ಕಾರಣ ಕುಸುಮಾ-ಭಾಗ್ಯ ಪಾತ್ರಕ್ಕೆ ಜೀವತುಂಬಿರೋ ಪದ್ಮಜಾ ರಾವ್ ಹಾಗೂ ಸುಷ್ಮಾ ರಾವ್. ಇತ್ತಿಚೀಗೆ ಈ ಜೋಡಿ ಶಾಲೆ ಒಂದಕ್ಕೆ ಭೇಟಿ ನೀಡಿದಾಗ ಮಕ್ಕಳು ಕುಸುಮಾ ಅವರನ್ನು ಮುತ್ತಿಗೆ ಹಾಕಿ, ನೀವೂ ಭಾಗ್ಯಕ್ಕನಿಗೆ ಜೋರು ಮಾಡ್ಬೇಡಿ. ಅವರು ಹೇಳೋದನ್ನು ಕೇಳಿ. ಇಲ್ಲ ಅಂದ್ರೆ ನಾವ್ ಸೀರಿಯಲ್ ನೋಡೋಲ್ಲ ಎಂದು ಪ್ರೀತಿಯಿಂದ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಡಿಯೋನ್ನು ಸೂಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರೋ ಸುಷ್ಮಾ, ಈ ಪ್ರೀತಿ ಮುಂದೆ ನನಗೆ ಇನ್ನೇನು ಬೇಕು? ಈ ಅಭಿಮಾನ ಪ್ರೀತಿಗೆ ಚಿರಋಣಿ ಎಂದಿದ್ದಾರೆ.
ಸೀರಿಯಲ್ ಕತೆಗೆ ಬರೋದಾದರೆ ಭಾಗ್ಯಳನ್ನ ಓದಿಸುವ ಛಲಕ್ಕೆ ಮೊದಲ ಗೆಲುವು ಸಿಕ್ಕಿದೆ. ಮೊಮ್ಮಗಳು ಓದುತ್ತಿರುವ ಶಾಲೆಯಲ್ಲಿಯೇ ಸೊಸೆಗೆ ಅಡ್ಮಿಷನ್ ಮಾಡಿಸಿದ್ದಾರೆ ಕುಸುಮಾ. ಭ್ಯಾಗ್ಯ ಓದಿನ ಹೊಸ ಪರ್ವ ಶುರುವಾಗಿದೆ. ಒಟ್ಟಿನಲ್ಲಿ ಸದ್ಯದ ಟ್ರ್ಯಾಕ್ನಲ್ಲಿ ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ. ಅದ್ರಲ್ಲೂ ಹೆಣ್ಮಕ್ಕಳಿಗೆ ಓದು ಎಷ್ಟು ಮುಖ್ಯ ಅನ್ನೋದ್ರ ಬಗ್ಗೆ ಅರಿವು ಮೂಡಿಸುತ್ತಿದೆ ಭಾಗ್ಯಲಕ್ಷ್ಮೀ ತಂಡ. ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿ ಆಗಿವೆ ಭಾಗ್ಯ-ಕುಸುಮಾ ಪಾತ್ರ.
https://fb.watch/m8oLAVVleK/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ