newsfirstkannada.com

ಕರ್ನಾಟಕದ ಈ ಆಟಗಾರನ ಮುಂದೆ ವಿರಾಟ್​-ಗಿಲ್ ಲೆಕ್ಕಕ್ಕಿಲ್ಲ; ಫಿಟ್ನೆಸ್​​ನ ನಯಾ ಸುಲ್ತಾನ್ ಇವರು..!!

Share :

16-09-2023

    ಯೋ-ಯೋ ಟೆಸ್ಟ್​ನಲ್ಲಿ ಕನ್ನಡಿಗನೇ ಕಿಂಗ್!

    ತಂಡದಲ್ಲಿ ಸ್ಥಾನವಿಲ್ಲ.. ಆದರೆ ಛಲ ಬಿಟ್ಟಿಲ್ಲ..!

    ಮೋಸ್ಟ್​ ಫಿಟ್​​​ ಅಂಡ್ ಫೈನ್​ ಕ್ರಿಕೆಟರ್ ಯಾರು?

ಮೋಸ್ಟ್​ ಫಿಟ್​​​ ಅಂಡ್ ಫೈನ್​ ಕ್ರಿಕೆಟರ್ ಯಾರು ಅಂತ ಕೇಳಿದ್ರೆ ತಕ್ಷಣ ಎಲ್ಲರೂ ಹೇಳೋದು ವಿರಾಟ್ ಕೊಹ್ಲಿ ಆ್ಯಂಡ್ ಶುಭ್​ಮನ್ ಗಿಲ್​. ಆದ್ರೀಗ ಇದು ತಪ್ಪು.

ವಿರಾಟ್ ಕೊಹ್ಲಿ.. ಟೀಮ್ ಇಂಡಿಯಾದ ಒಂಟಿಸಲಗ.. ಆಟದಿಂದ ಎಷ್ಟು ಫೇಮಸೋ, ಫಿಟ್ನೆಸ್​​ನಿಂದಲೂ ಅಷ್ಟೇ ಫೇಮಸ್.. ಟೀಮ್ ಇಂಡಿಯಾದ ಫಿಟ್ನೆಸ್​​​​​​​​ ಐಕಾನ್ ಆಗಿರೋ ಕೊಹ್ಲಿಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿರುವ ಹಲವರಿದ್ದಾರೆ. ಇವರ ಹಾದಿಯಲ್ಲೇ ನಡೆಯುತ್ತಿರುವ ಶುಭ್​​ಮನ್ ಗಿಲ್, ಫಿಟ್ನೆಸ್​ ವಿಚಾರದಲ್ಲಿ ಕಿಂಗ್​​ ಕೊಹ್ಲಿಯನ್ನೇ ಸೆಡ್ಡು ಹೊಡೆದು ನಯಾ ಸುಲ್ತಾನನಾಗಿ ಮೆರೆಯೋಕೆ ಹೊರಟ್ಟಿದ್ದ. ಆದ್ರೀಗ ಇವಬ್ಬರಿಗೂ ತೊಡ್ಡೆ ತಟ್ಟಿ ನಿಂತಿರುವ ಮತ್ತೊಬ್ಬ ಕ್ರಿಕೆಟಿಗ ಇದ್ದಾನೆ. ಆತ ಬೇಱರೂ ಅಲ್ಲ. ನಮ್ಮ ಹೆಮ್ಮೆಯ ಕನ್ನಡಿಗ ಮಯಾಂಕ್ ಅಗರ್ವಾಲ್.

ಈತನೇ ಈಗ ನಯಾ ಫಿಟ್ನೆಸ್​ ಕಾ ಸುಲ್ತಾನ. ಈತನೇ ಭಾರತೀಯ ಕ್ರಿಕೆಟ್​ನ ಫಿಟೆಸ್ಟ್​ ಕ್ರಿಕೆಟರ್. ಈತನೇ ನಯಾ ಶೇರ್​​. ಇಷ್ಟೆಲ್ಲಾ ಬಿಲ್ಡಪ್ ಕಾರಣ ಯೋ-ಯೋ ಟೆಸ್ಟ್​.

ಫಿಟ್ನೆಸ್​ ವಿಚಾರದಲ್ಲಿ ಕನ್ನಡಿಗನೇ ಕಿಂಗ್..!

ಇದು ಆಶ್ಚರ್ಯ ಅನ್ನಿಸಿದ್ರೂ ಸತ್ಯ. ದಶಕಗಳ ಕಾಲ ಫಿಟ್ನೆಸ್​ ಕ್ರಾಂತಿಯನ್ನೇ ಮಾಡಿದ್ದ ಕೊಹ್ಲಿ. ವಿರಾಟ್​ ಕೊಹ್ಲಿಯನ್ನೇ ಫಾಲೋ ಮಾಡ್ತಿರೋ ಪ್ರಿನ್ಸ್​ ಶುಭ್​ಮನ್. ಇಬ್ಬರು ಕನ್ನಡಿಗ ಮಯಾಂಕ್ ಅಗರ್ವಾಲ್ ಮುಂದೆ ಲೆಕ್ಕಕ್ಕಿಲ್ಲ. ಒಂದು ಮಾತಲ್ಲಿ ಹೇಳೋದಾದ್ರೆ ಮಯಾಂಕ್​​​ ಅಗರ್ವಾಲ್​ಗೆ ಹೋಲಿಕೆ ಮಾಡಿದೆ. ಸೆನ್ಸೇಷನ್ ಸ್ಟಾರ್ ಶುಭ್​ಮನ್, ಕಿಂಗ್ ಕೊಹ್ಲಿ ಹತ್ತಿರಕ್ಕೂ ಸುಳಿಯಲ್ಲ.

ಯೋ-ಯೋ ಟೆಸ್ಟ್​​ನಲ್ಲಿ ಬಯಲಾಗಿದೆ ಅಸಲಿ ಸತ್ಯ

ಏಷ್ಯಾಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಯೋ ಯೋ ಟೆಸ್ಟ್​​ ನಡೆಸಲಾಗಿತ್ತು. ಈ ಮಹತ್ವದ ಟೆಸ್ಟ್​ನಲ್ಲಿ ಫಿಟ್ನೆಸ್​​ ಪಂಟರ್​ ಕೊಹ್ಲಿಯನ್ನೇ ಶುಭ್​​ಮನ್ ಗಿಲ್​ ಹಿಂದಿಕ್ಕಿದ್ರು. ಯೋ ಯೋ ಟೆಸ್ಟ್​ನಲ್ಲಿ ಕೊಹ್ಲಿ 17.2 ಸ್ಕೋರ್​​ ಗಳಿಸಿದ್ರೆ, ಯುವ ಆಟಗಾರ ಗಿಲ್, 18.7 ಸ್ಕೋರ್​ ಗಳಿಸಿ ಎಲ್ಲರನ್ನು ನಿಬ್ಬೆರಗಾಗಿಸಿದ್ರು. ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ಮೊನ್ನೆ ನಡೆದ ಯೋ-ಯೋ ಟೆಸ್ಟ್​ನಲ್ಲಿ ಕನ್ನಡಿಗ ಮಯಾಂಕ್, 21.1 ಅಂಕ ಗಳಿಸಿ ದಾಖಲೆ ಬರೆದಿದ್ದಾರೆ. ಮೋಸ್ಟ್​​​ ಫಿಟೆಸ್ಟ್​​ ಕ್ರಿಕೆಟರ್ ಆಗಿ ಹೊರಹೊಮ್ಮಿದ್ದಾರೆ. ಈ ವಿಚಾರವನ್ನು ಸ್ವತಃ ಮಯಾಂಕ್ ಅಗರ್ವಾಲ್, ಇನ್ಸ್​ಟಾ ಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಸ್ಕೋರ್ ರಿವೀಲ್.. ಮಯಾಂಕ್​ಗೆ ಕಾದಿದ್ಯಾ ಶಿಕ್ಷೆ..?

ಇಂಥದ್ದೊಂದು ಚರ್ಚೆ ಈಗ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿದೆ. ಯಾಕಂದ್ರೆ ಯೋ-ಯೋ ಟೆಸ್ಟ್​ನಲ್ಲಿ ಪಾಸಾಗಿದ್ದ ಅಂಕವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿರಾಟ್​​​​ಗೆ, ಬಿಸಿಸಿಐ ಎಚ್ಚರಿಕೆ ನೀಡಿತ್ತು. ಆದ್ರೀಗ ಕನ್ನಡಿಗ ಮಯಾಂಕ್ ಕೂಡ ಕೊಹ್ಲಿಯನ್ನ ಫಾಲೋ ಮಾಡಿದ್ದಾರೆ. ಹೀಗಾಗಿ ಮಯಾಂಕ್​ ಅಗರ್ವಾಲ್​ಗೆ ಬಿಸಿಸಿಐ ಎಚ್ಚರಿಕೆ ನೀಡುತ್ತಾ ಅನ್ನೋ ಚರ್ಚೆಯೂ ಕ್ರಿಕೆಟ್ ಪಡೆಸಾಲೆಯಲ್ಲಿ ಕೇಳಿ ಬರುತ್ತಿದೆ.

ತಂಡದಲ್ಲಿ ಸ್ಥಾನವಿಲ್ಲ.. ಛಲ ಬಿಡದ ಕನ್ನಡಿಗ..!

ಕನ್ನಡಿಗ ಮಯಾಂಕ್, ಟೀಮ್ ಇಂಡಿಯಾದಿಂದ ಹೊರಬಿದ್ದು ಬರೋಬ್ಬರಿ ಒಂದೂವರೆ ವರ್ಷವೇ ಕಳೆದಿದೆ. ಹೀಗಾದ್ರೂ ಮುಯಾಂಕ್, ಟೀಮ್ ಇಂಡಿಯಾ ಕಮ್​ಬ್ಯಾಕ್ ಕನಸು ಹಾಗೂ ಫಿಟ್ನೆಸ್​ ಮೇಲಿನ ಪೋಕಸ್ ಬಿಟ್ಟಿಲ್ಲ. ಈ ನಿಟ್ಟಿನಲ್ಲೇ ದೇಶಿ ಕ್ರಿಕೆಟ್​ನಲ್ಲಿ ಅಬ್ಬರಿಸ್ತಿರುವ ಮಯಾಂಕ್, ದೇವದರ್​​ ಟ್ರೋಫಿಯಲ್ಲಿ ನಾಯಕನಾಗಿಯೂ ಕಮಾಲ್ ಮಾಡಿದ್ದಾರೆ. ಛಲ ಬಿಡದ ತ್ರಿವಿಕ್ರಮನಂತೆ ರಣಜಿಯಲ್ಲೂ ಅಬ್ಬರಿಸಿದ್ದ ಮಯಾಂಕ್, ಇದೇ ಲಯ ಕಾಯ್ದುಕೊಂಡು ಮತ್ತೆ ತಂಡಕ್ಕೆ ಕಮ್​ಬ್ಯಾಕ್ ಮಾಡಲಿ ಅನ್ನೋದೇ ಕ್ರಿಕೆಟ್ ಅಭಿಮಾನಿಗಳ ಆಶಯ.

View this post on Instagram

A post shared by Mayank Agarwal (@mayankagarawal)

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕರ್ನಾಟಕದ ಈ ಆಟಗಾರನ ಮುಂದೆ ವಿರಾಟ್​-ಗಿಲ್ ಲೆಕ್ಕಕ್ಕಿಲ್ಲ; ಫಿಟ್ನೆಸ್​​ನ ನಯಾ ಸುಲ್ತಾನ್ ಇವರು..!!

https://newsfirstlive.com/wp-content/uploads/2023/08/VIRAT_GILL.jpg

Load More