ಪ್ರತಿಸ್ಪರ್ಧಿ ಮಂಜು ವಿಜೇತ ಎಂದು ಘೋಷಣೆಗೂ ನಿರಾಕರಣೆ!
ಚುನಾವಣೆ ಅಕ್ರಮದಲ್ಲಿ ಮಂಜು ಕೂಡ ಭಾಗಿ ಎಂದ ಕೋರ್ಟ್
ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ರಾ ಸಂಸದ ಪ್ರಜ್ವಲ್ ರೇವಣ್ಣ!?
ಹಾಸನ: ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಆಯ್ಕೆ ಅನರ್ಹ ಅಂತಾ ಹೈಕೋರ್ಟ್ ಆದೇಶಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ, ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ ಆರೋಪ ಕೇಳಿ ಬಂದಿತ್ತು. ಈ ಆರೋಪ ಇದೀಗ ಸಾಬೀತಾಗಿದ್ದು, ಪ್ರಜ್ವಲ್ ಭವಿಷ್ಯವನ್ನ ಕತ್ತಲೆಗೆ ದೂಡಿದೆ. ತೆನೆ ಮೇಲೆ ತೂಗಿದ ಅನರ್ಹದ ತೂಗುಕತ್ತಿ ಇದ್ದ ಏಕೈಕ ಸಂಸದನನ್ನ ಬಲಿ ಹಾಕಿದೆ. ಹಾಸನ ಸಿಂಹಾಸನ ಸಮರದಲ್ಲಿ ಗೆದ್ದು ಬೀಗಿದ್ದ ಪ್ರಜ್ವಲ್ ರೇವಣ್ಣ ಆಯ್ಕೆಯೇ ರಾಂಗ್ ಅಂತ ಹೈಕೋರ್ಟ್ ತನ್ನ ಶರಾ ಬರೆದಿದೆ.
ಇದನ್ನೂ ಓದಿ: ಲೋಕಸಭಾ ಸ್ಥಾನದಿಂದ ಅನರ್ಹ; ಕುತೂಹಲ ಮೂಡಿಸಿದ ಪ್ರಜ್ವಲ್ ಮುಂದಿನ ನಡೆಯೇನು?
ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ರಾ ಪ್ರಜ್ವಲ್ ರೇವಣ್ಣ!?
ದಳಕ್ಕೆ ಮತ್ತೊಂದು ಶಾಕ್, ದಳದ ಏಕೈಕ ಸಂಸದ ಅನರ್ಹ!
ಜೆಡಿಎಸ್ನ ಹಾಸನದ ಏಕೈಕ ಸಂಸದ ಪ್ರಜ್ವಲ್ ರೇವಣ್ಣರನ್ನ ಅನರ್ಹಗೊಳಿಸಲಾಗಿದೆ. ಚುನಾವಣಾ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ಆರೋಪ ಹಿನ್ನೆಲೆ, ಅನರ್ಹಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣಾ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಅಂತ ಅಂದಿನ ಲೋಕಸಭೆ ಚುನಾವಣೆ ಪ್ರತಿಸ್ಪರ್ಧಿ ಎ.ಮಂಜು ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ 4 ವರ್ಷ ಸುದೀರ್ಘ ವಿಚಾರಣೆ ಬಳಿಕ ಹೈಕೋರ್ಟ್ ತನ್ನ ತೀರ್ಪು ನೀಡಿದ್ದು, ಪ್ರಜ್ವಲ್ ಭವಿಷ್ಯವನ್ನ ಅಂಧಕಾರಕ್ಕೆ ತಳ್ಳಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಡಬಲ್ ಶಾಕ್
6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಹೈ ನಿರ್ಬಂಧ?
ಒಟ್ಟು ಎರಡು ಚುನಾವಣಾ ತಕರಾರು ಅರ್ಜಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಇದರಲ್ಲಿ ಎ.ಮಂಜು ಸಲ್ಲಿಸಿದ್ದ ಅರ್ಜಿಯಲ್ಲಿ ಸೇಫ್ ಆಗಿದ್ದ ಪ್ರಜ್ವಲ್, ಆದರೆ ಮತ್ತೊಂದು ಅರ್ಜಿಯಲ್ಲಿ ತಗಲಾಕ್ಕೊಂಡಿದ್ದಾರೆ. 2019ರ ಹಾಸನ ಲೋಕಸಭಾ ಕ್ಷೇತ್ರದ ಸಂಸತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, 6 ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಹೈಕೋರ್ಟ್ ಆದೇಶ ನೀಡಿದೆ.
ಪ್ರತಿಸ್ಪರ್ಧಿ ಮಂಜು ವಿಜೇತ ಎಂದು ಘೋಷಣೆಗೆ ನಿರಾಕರಣೆ!

ಇಂಟ್ರಸ್ಟಿಂಗ್ ಅಂದರೆ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಆಧರಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಪ್ರತಿಸ್ಪರ್ಧಿ ಎ.ಮಂಜು ಕೂಡ ಚುನಾವಣೆ ಅಕ್ರಮದಲ್ಲಿ ಭಾಗಿ ಅಂತ ತೀರ್ಪು ನೀಡಿದೆ. ಅಲ್ಲದೆ ಎ ಮಂಜುರನ್ನ ವಿಜೇತ ಅಂತ ಘೋಷಿಸಲು ಹೈಕೋರ್ಟ್ ನಿರಾಕರಿಸಿದೆ. ತೀರ್ಪು ಹೊರ ಬೀಳುತ್ತಲೇ ಪ್ರಜ್ವಲ್ ರೇವಣ್ಣ ಕಾರ್ಯಕ್ರಮವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಕಾರು ಹತ್ತಿದ್ದಾರೆ.
ಕಾನೂನಿಗೆ ತಲೆ ಬಾಗಬೇಕು, ನಾವು ತಲೆ ಬಾಗುತ್ತೇವೆ
ಮೇಲ್ಮನವಿಗೆ ತಯಾರಿ ಆರಂಭಿಸಿದ ಗೌಡರ ಫ್ಯಾಮಿಲಿ
ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಜಡ್ಜ್‌ಮೆಂಟ್ ಕಾಪಿ ಸಿಕ್ಕಿಲ್ಲ. ನ್ಯಾಯಾಲಯಕ್ಕೆ ತಲೆ ಬಾಗ್ತೀನಿ ಅಂತ ಹೇಳಿದ್ದಾರೆ. ಅಲ್ಲದೆ, ಮೇಲ್ಮನವಿ ಸಲ್ಲಿಸೋ ಬಗ್ಗೆ ವಕೀಲು ತೀರ್ಮಾನಿಸ್ತಾರೆ ಎಂದರು. ಇನ್ನು, ತೀರ್ಪನ್ನ ಜೆಡಿಎಸ್ ಶಾಸಕರೂ ಆದ ಎ.ಮಂಜು ಸ್ವಾಗತಿಸಿ ಅಚ್ಚರಿ ಮೂಡಿಸಿದ್ದಾರೆ. ಈ ತೀರ್ಪಿನಿಂದ ಶ್ರೀಸಾಮಾನ್ಯರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಹೆಚ್ಚಿಸಿದೆ ಅಂತ ಇನ್ನೊಬ್ಬ ಅರ್ಜಿದಾರ ವಕೀಲ ದೇವರಾಜೇಗೌಡ ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ, ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಅನ್ನೋದು ರುಜುವಾಗಿದೆ. ಅಲ್ಲದೇ ಚುನಾವಣೆ ಅಕ್ರಮವೂ ಸಾಬೀತಾಗಿದ್ದು, ಹಾಸನದ ಸಿಂಹಾಸನ ಕಾನೂನು ಕದನದ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ