newsfirstkannada.com

EXCLUSIVE: ಜನರ ತೆರಿಗೆ ದುಡ್ಡಲ್ಲಿ ಹ್ಯಾರಿಸ್ ಅಂಧಾ ದರ್ಬಾರ್‌.. ಲಕ್ಷ, ಲಕ್ಷದ ಲೆಕ್ಕ ನೋಡಿದ್ರೆ ಪಕ್ಕಾ ಶಾಕ್!!

Share :

Published June 27, 2024 at 10:29pm

Update June 27, 2024 at 10:35pm

  ಬಿಡಿಎ ಅಧ್ಯಕ್ಷರಾಗ್ತಿದ್ದಂತೆ ಹ್ಯಾರಿಸ್ ಸಾಹೇಬರ ದರ್ಬಾರ್ ಶುರು​

  ಸಾರ್ವಜನಿಕರ ದುಡ್ಡು ಪೋಲಾಗ್ತಿದ್ದರೂ ಕೇಳೋರೇ ಇಲ್ಲವಂತೆ!

  ಸಚಿವರು ಸಿಎಂ, ಡಿಸಿಎಂ ಈ ಬಗ್ಗೆ ಇದುವರೆಗೂ ಪ್ರಶ್ನೆ ಮಾಡಿಲ್ವಾ?

ಅರಮನೆಯಂತೆ ಇದ್ದ ಕಚೇರಿಯನ್ನೇ ಕೆಡವಿ ಮರುನವೀಕರಣ ಮಾಡಿಸ್ತಿದ್ದಾರೆ. ಬಿಡಿಎ ಅಧ್ಯಕ್ಷ, ಶಾಸಕ ಎನ್​.ಎ ಹ್ಯಾರಿಸ್​. ಪ್ರತಿ 5 ವರ್ಷಕ್ಕೊಮ್ಮೆ ಅಥವಾ ಹೊಸ ಸರ್ಕಾರ ಬಂದ್ರೆ ಬಿಡಿಎ ಅಧ್ಯಕ್ಷರ ಬದಲಾವಣೆಯಾಗುತ್ತೆ. ಅದ್ರಂತೆ ಈಗ ಕಾಂಗ್ರೆಸ್​ ಸರ್ಕಾರ ಆಡಳಿತ ಮಾಡ್ತಿದ್ದು, ಬಿಡಿಎ ಅಧ್ಯಕ್ಷರನ್ನಾಗಿ ಹ್ಯಾರಿಸ್​ ಅವರನ್ನ ನೇಮಕ ಮಾಡಲಾಗಿದೆ. ಬಂದವರು ಖುರ್ಚಿ ಮೇಲೆ ಕೂತು ಕೆಲಸ ಮಾಡೋದು ಬಿಟ್ಟು, ಸಾರ್ವಜನಿಕರ ಲಕ್ಷ ಲಕ್ಷ ಹಣ ಖರ್ಚು ಮಾಡಿ ಚೇಂಬರ್​ ನವೀಕರಣಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: ‘ಸಿಎಂ ಕುರ್ಚಿ ಬಿಟ್ಟು ಕೊಡಿ’- ಆಗಲ್ಲ ಎಂದ ರಾಜಣ್ಣಗೆ ಚಂದ್ರಶೇಖರನಾಥ ಸ್ವಾಮೀಜಿ ಹಿಗ್ಗಾಮುಗ್ಗ ವಾಗ್ದಾಳಿ; ಹೇಳಿದ್ದೇನು?

ಕಳೆದ 1 ತಿಂಗಳಿಂದ ಈ ನವೀಕರಣ ಕಾಮಗಾರಿ ಕೆಲಸ ನಡೆಯುತ್ತಿದೆ. ಬಿಡಿಎ ಸಾಲದ ಸುಳಿಯಲ್ಲಿದ್ರೂ ಅಧ್ಯಕ್ಷರಿಗೆ ಹೈಟೆಕ್ ಕಚೇರಿಗೆ ಮುಂದಾಗಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 50 ಲಕ್ಷ ಖರ್ಚು ಮಾಡ್ತಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಕಾಮಗಾರಿ ನೋಡಿದ್ರೆ 50 ಲಕ್ಷ ದಾಟಿದ್ರೂ ಅಚ್ಚರಿ ಪಡೋಹಾಗಿಲ್ಲ.

ಬಿಡಿಎ ಕಚೇರಿಯಲ್ಲಿ ನಡೀತಿರೋ ರಿಪೇರಿ ಕೆಲಸಗಳೇನು?

ಕಳೆದ ಒಂದು ತಿಂಗಳಿಂದ ಇಷ್ಟು ದೊಡ್ಡ ಮಟ್ಟದಲ್ಲಿ ನವೀಕರಣ ಕೆಲಸವೇನೋ ನಡೀತಾ ಇದೆ. ಹ್ಯಾರಿಸ್​ಗೆ ಇಷ್ಟವಾದಂತೆ ಕಚೇರಿಯ ಬದಲಾವಣೆ ಮಾಡಲಾಗ್ತಿದ್ದು, ವಸ್ತುಗಳು, ಪೀಠೋಪಕರಣ, ಕಲರ್ ಎಲ್ಲವನ್ನೂ ಚೇಂಜ್ ಮಾಡಲಾಗ್ತಿದೆ. ಇನ್ನು ಕಚೇರಿಯ ಬಲ ಬದಿಗಿದ್ದ ಮಖ್ಯದ್ವಾರವನ್ನ ಕಿತ್ತು ಎಡಗಡೆಗೆ ಇಡಲಾಗ್ತಿದೆ. ಕಚೇರಿಯ ಕಿಟಕಿಗಳನ್ನ ಕಿತ್ತೆಸೆದು ಆ ಜಾಗಕ್ಕೆ ಗೋಡೆ ನಿರ್ಮಾಣ ಮಾಡಲಾಗ್ತಿದೆ. ಅಷ್ಟೇ ಅಲ್ಲ ಅಧ್ಯಕ್ಷರು ಕುಳಿತುಕೊಳ್ಳುವ ಡೈಕರೆಕ್ಷನ್​ ಕೂಡಾ ಬದಲಾವಣೆ ಮಾಡಲಾಗ್ತಿದೆ.

ಬಿಡಿಎನಲ್ಲಿ ಅಧ್ಯಕ್ಷರು ಏನ್​ ಹೇಳೀದ್ರೂ ಅದು ಆಗಲೇಬೇಕು. ತನ್ನ ಸ್ವಂತ ಮನೆ ರೀತಿ ಸಾರ್ವಜನಿಕರ ಆಸ್ತಿಯನ್ನ ಧ್ವಂಸ ಮಾಡ್ತಿದ್ರೂ, ದುಂದು ವೆಚ್ಚ ಮಾಡ್ತಿದ್ರೂ ಇದುವರೆಗೂ ಯಾವುದೇ ಅಧಿಕಾರಿಗಳು ತುಟಿಕ್​ ಪಿಟಿಕ್​ ಅಂತಿಲ್ವಂತೆ. ಅಷ್ಟೇ ಅಲ್ಲ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಯಾರಿಗೂ ಎಂಟ್ರಿ ಕೂಡಾ ಇಲ್ಲ. ಯಾಕಂದ್ರೆ ಇಲ್ಲಿ ಯಾರೂ ಬಾರದಂತೆ ಸೆಕ್ಯೂರಿಟಿಯನ್ನ ನೇಮಕ ಮಾಡಲಾಗಿದ್ಯಂತೆ. ಈ ಬಗ್ಗೆ ನ್ಯೂಸ್​ ಫಸ್ಟ್​ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಲು ಮುಂದಾದ್ರೆ ಹ್ಯಾರಿಸ್​ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಇನ್ನು ಸರ್ಕಾರದ ಸಚಿವರು ಸಿಎಂ, ಡಿಸಿಎಂ ಈ ಬಗ್ಗೆ ಇದುವರೆಗೂ ಪ್ರಶ್ನೆ ಮಾಡಿಲ್ವಾ? ಅಥವಾ ವಿಚಾರ ಗೊತ್ತಿಲ್ವಾ? ಎಲ್ಲಾ ಗೊತ್ತಿದ್ರೂ ಸುಮ್ಮಿನಿದ್ದಾರಾ? ಅನ್ನೋ ಪ್ರಶ್ನೆಗಳಿಗೆ ಅವರೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

EXCLUSIVE: ಜನರ ತೆರಿಗೆ ದುಡ್ಡಲ್ಲಿ ಹ್ಯಾರಿಸ್ ಅಂಧಾ ದರ್ಬಾರ್‌.. ಲಕ್ಷ, ಲಕ್ಷದ ಲೆಕ್ಕ ನೋಡಿದ್ರೆ ಪಕ್ಕಾ ಶಾಕ್!!

https://newsfirstlive.com/wp-content/uploads/2024/06/N.A-Haris.jpg

Load More