newsfirstkannada.com

ನೇಪಾಳ ಮೂಲದ ಪುಟ್ಟ ಕಂದಮ್ಮನಿಗೆ ಕನ್ನಡದ ಬಗ್ಗೆ ಇರೋ ಪ್ರೀತಿ ಎಂಥದ್ದು ಗೊತ್ತಾ? ಸ್ಟೋರಿ ಓದಿ!

Share :

20-07-2023

    ಬಹುನಿರೀಕ್ಷಿತ ಧಾರಾವಾಹಿಯಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ರಿತು

    ಮುದ್ದು ಮುದ್ದಾಗಿ ಕನ್ನಡದ ಬಗೆಗಿನ ಪ್ರೀತಿಯನ್ನು ವ್ಯಕ್ತಪಡಿಸಿದ ಬಾಲ ಪ್ರತಿಭೆ ರಿತು

    ಸೀತಾರಾಮ ಸೀರಿಯಲ್​ ಮೂಲಕ ಮತ್ತಷ್ಟು ವೀಕ್ಷಕರ ಮನ ಗೆಲ್ಲಲು ಸಜ್ಜಾದ ರಿತು

ವೈಷ್ಣವಿ ಗೌಡ-ಗಗನ್​ ಚಿನ್ನಪ್ಪ ಮುಖ್ಯ ಭೂಮಿಕೆಯಲ್ಲಿರುವ ಬಹುನಿರೀಕ್ಷಿತ ಧಾರಾವಾಹಿ ಸೀತಾರಾಮ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಸೀರಿಯಲ್​ನಲ್ಲಿ ಬರೋ ಸಿಹಿ ಯಾರು? ಸಿಹಿ.. ಹೆಸರಿಗೆ ತಕ್ಕಂತೆ ಅಷ್ಟೇ ಸಿಹಿಯಾಗಿ ಮನರಂಜನೆ ಸವಿ ನೀಡ್ತಿರೋ ಸೀತಾರಾಮ ಸೀರಿಯಲ್​ನ ಬಾರ್ಬಿ ಡಾಲ್​ ಇವರು. ಸಿಹಿ ನಿಜವಾದ ಹೆಸರು ರಿತು ಸಿಂಗ್​.

ನೇಪಾಳ ಮೂಲದ ಪೋರಿ ಈ ಮುದ್ದು ಪುಟಾಣಿ. ಊರು ನೇಪಾಳ ಆದ್ರೂ ಕನ್ನಡವನ್ನ ಅರಳು ಹುರಿದಂತೆ ಮಾತನಾಡುತ್ತಾಳೆ. ಈ ಪಟಾಕಿಗೆ ಕರ್ನಾಟಕನೇ ಫಿದಾ ಆಗಿದೆ. ಅಪ್ಪ-ಅಮ್ಮನ ಜೊತೆ ಮೈಸೂರಿನಲ್ಲಿ ನೆಲಿಸಿರೋ ರಿತು ಫೇಮಸ್​ ಆಗಿದ್ದು​ ಡ್ರಾಮಾ ಜೂನಿಯರ್ಸ್ ಮೂಲಕ. ಕ್ರೇಜಿ ಸ್ಟಾರ್​ ಅಂದ್ರೆ ಸಿಕ್ಕಾಪಟ್ಟೆ ಇಷ್ಟಪಡೋ ರಿತು, ಅವರ ಡೈಲಾಗ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈ ಪರಮ ಸುಂದರಿಯನ್ನ ಹೀರೋಯಿನ್​ ಆಗಿ ನೋಡೋಕೆ ಕ್ರೇಜಿಸ್ಟಾರ್​ ರವಿಮಾಮ ಇಷ್ಟ ಪಟ್ಟಿದ್ದರು. ಈ ಬಾಲೆ ಪ್ರತಿಭೆ ಅಷ್ಟರ ಮಟ್ಟಿಗೆ ಮೋಡಿ ಮಾಡಿತ್ತು. ಈಗ ಆ ಮಾತು ನಿಜವಾಗಿದೆ. ಕಿರುತೆರೆ-ಹಿರಿತೆರೆಯಲ್ಲಿ ರಿತುದೇ ಮಾತು. ಅಭಿನಯದಲ್ಲಂತೂ ರಿತು ಶ್ರದ್ಧೆಯನ್ನೇ ಮೆಚ್ಚಲೇಬೇಕು.

ನೇಪಾಳಿ ಮನೆಯ ಭಾಷೆ, ಹಿಂದಿ ಕೂಡ ಮಾತನಾಡೋ ರಿತುಗೆ ಕನ್ನಡದ ಬಗ್ಗೆ ಇರೋ ಪ್ರೀತಿ ಮಾತ್ರ ಅಚಲವಾದದ್ದು, ನೇಪಾಳಕ್ಕೆ ಮತ್ತೆ ಹೋಗ್ತಿರಾ ರಿತು ಅಂತಾ ಕೇಳಿದ್ದಕ್ಕೇ ಇಲ್ಲ.. ಇಲ್ಲಾ ಹೋಗಲ್ಲ. ನನಗೆ ಕನ್ನಡನೇ ಎಲ್ಲಾ ಅಂತಾ ತೊದಲು ನುಡಿಗಳಲ್ಲಿ ಮುದ್ದು ಮುದ್ದಾಗಿ ಕನ್ನಡದ ಬಗೆಗಿನ ಪ್ರೀತಿ ಹಂಚಿಕೊಂಡಿದ್ದರು ರಿತು. ಡ್ರಾಮಾ ಜೂನಿಯರ್ಸ್​ ಮೂಲಕ ಮನೆಮಾತಾಗಿದ್ದ ರಿತು ಸದ್ಯ ಸೀತಾರಾಮ ಮೂಲಕ ಮತ್ತಷ್ಟು ಹತ್ತಿರವಾಗಿದ್ದಾರೆ. ಮೊದಲಕ್ಕಿಂತ ಕನ್ನಡವನ್ನ ಅದ್ಭುತವಾಗಿ ಮಾತನಾಡುತ್ತಾರೆ. ಒಟ್ಟಿನಲ್ಲಿ ರಿತುಗೆ ಅವಕಾಶಗಳು ಒಲಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ರಿತು ಹೀರೋಯಿನ್​ ಆಗಿ ಎಂಟ್ರಿ ಕೊಟ್ರು ಕೊಡಬಹುದು.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನೇಪಾಳ ಮೂಲದ ಪುಟ್ಟ ಕಂದಮ್ಮನಿಗೆ ಕನ್ನಡದ ಬಗ್ಗೆ ಇರೋ ಪ್ರೀತಿ ಎಂಥದ್ದು ಗೊತ್ತಾ? ಸ್ಟೋರಿ ಓದಿ!

https://newsfirstlive.com/wp-content/uploads/2023/07/reethu-2.jpg

Load More