ಹಗಲು-ರಾತ್ರಿ, ಕಠಿಣ ಪರಿಶ್ರಮ ಅಭೂತಪೂರ್ವ ಸಾಧನೆ
ಚಂದ್ರಯಾನ-3 ಯಶಸ್ಸಿಗಾಗಿ ಹಲವು ವಿಜ್ಞಾನಿಗಳು ಶಪಥ
ಅವಿಸ್ಮರಣೀಯ ಗೆಲುವಿಗೆ ಶ್ರಮಿಸಿದ ಶ್ರೀನಾಥ್ ರತ್ನಕುಮಾರ್
ಬೆಂಗಳೂರು: ಚಂದ್ರನ ಮೇಲೆ ಭಾರತ ತ್ರಿವಿಕ್ರಮನಾಗಿದೆ. ಇಸ್ರೋ ವಿಜ್ಞಾನಿಗಳ ಸಾಧನೆಯನ್ನ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಚಂದ್ರಯಾನ-3ರ ಯಶಸ್ಸಿನ ಹಿಂದೆ ಒಬ್ಬರು ಇಬ್ಬರ ಪರಿಶ್ರಮವಿಲ್ಲ. ಇಸ್ರೋದಲ್ಲಿ ಹಲವಾರು ಮಂದಿ ಭಾರತದ ಯಶಸ್ಸಿಗಾಗಿ ಕಷ್ಟ ಪಟ್ಟು ದುಡಿದಿದ್ದಾರೆ. ಹಗಲು ಇರುಳೆನ್ನದೇ ನಿರಂತರವಾಗಿ ಕೆಲಸ ಮಾಡಿ ಚಂದ್ರಯಾನ-3 ಮಿಷನ್ ಸಕ್ಸಸ್ ಮಾಡಿದವರು ಬಹಳಷ್ಟು ಜನರಿದ್ದಾರೆ. ಇಸ್ರೋ ಚಂದ್ರಯಾನ-3 ಮಿಷನ್‌ನಲ್ಲಿ ಶ್ರೀನಾಥ್ ರತ್ನಕುಮಾರ್ ಅವರ ಪಾತ್ರವೂ ಅಪಾರವಾಗಿದ್ದು, ಎಲ್ಲರ ಮೆಚ್ಚುಗೆಗಳಿಸಿದೆ.
ಶ್ರೀನಾಥ್ ರತ್ನಕುಮಾರ್ ಇಸ್ರೋದಲ್ಲಿ ಹಿರಿಯ ವಿಜ್ಞಾನಿಗಳು. ಇವರು ಚಂದ್ರಯಾನ- 3ರಲ್ಲಿ ಪ್ರಗ್ಯಾನ್ ಮತ್ತು ವಿಕ್ರಮ್ನಿಂದ ಬರುತ್ತಿರುವ ಮಾಹಿತಿಗಳನ್ನು ಪಡೆದುಕೊಂಡು ಅದನ್ನು ಹೊರಜಗತ್ತಿಗೆ ನೀಡುತ್ತಿರುವ ತಂಡದ ಪ್ರತಿಭಾನ್ವಿತ ವಿಜ್ಞಾನಿಯಾಗಿದ್ದಾರೆ. ಅಷ್ಟೇ ಅಲ್ಲದೇ ಯಾವುದೇ ಗ್ರಹದಿಂದ ಬರುತ್ತಿರುವ ಸಂಶೋಧನೆಗಳ ಮಾಹಿತಿಯನ್ನು ಪಡೆದು ಅದರ ಬಗ್ಗೆ ಅಧ್ಯಯನ ನಡೆಸಲು ನೆರವಾಗುತ್ತಿದ್ದಾರೆ.
ಶ್ರೀನಾಥ್ ರತ್ನಕುಮಾರ್ ಅವರು ಮೂಲತಃ ಗೌರಿಬಿದನೂರಿನ ಪಾಳ್ಯಗ್ರಾಮದವರು. ಈಗ ಚಂದ್ರಯಾನ-3 ಮಿಷನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಆರು ಚಿನ್ನದ ಪದಕದೊಂದಿಗೆ ತೇರ್ಗಡೆಯಾದರು. ಬಳಿಕ ಯುಜಿಸಿ-ನೆಟ್ UGC-NETಯಲ್ಲಿ ಉತ್ತೀರ್ಣಗೊಂಡು ಜೆ.ಆರ್.ಎಫ್. JRF ಪಡೆದು ಬೆಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಆಸಕ್ತಿದಾಯಕವಾದ ಆಳ ಅಂತರಿಕ್ಷ ಶೋಧನೆಗಾಗಿ ಇಸ್ರೋ ಸಂಸ್ಥೆ ಜೊತೆ ಸೇರಿಕೊಂಡರು. ಇವರು ಚಂದ್ರಯಾನ-1, ಚಂದ್ರಯಾನ- 2 ಮತ್ತು ಚಂದ್ರಯಾನ- 3ರಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೇ Mars orbiter mission, Megha-Tropiquesನಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ Astrosatನಲ್ಲಿ ISSDC ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ಗಗನಯಾನ ಯೋಜನೆಯಲ್ಲಿ ಹಾಗೂ SPADEX ಯೋಜನೆಯಲ್ಲಿ ಇವರು ಸಂಶೋಧನೆ ಮಾಡುತ್ತಿದ್ದಾರೆ.
ಶ್ರೀನಾಥ್ ರತ್ನಕುಮಾರ್ ಅವರು ವಿಜ್ಞಾನದ ಬಗ್ಗೆ ಜನರಿಗೆ ಆಸಕ್ತಿ ಮೂಡಿಸಲು CREACTIVE ಸಂಸ್ಥೆ ಸ್ಥಾಪಿಸಿ 150ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದ್ದಾರೆ. ಇದರಲ್ಲಿ ದೇಶದ ದೊಡ್ಡ, ದೊಡ್ಡ ವಿದ್ವಾಂಸರಿಂದ ಉಪನ್ಯಾಸಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೇ ವಿಜ್ಞಾನಿಯಾದರೂ ಬಾಲ್ ಬ್ಯಾಡ್ಮಿಂಟನ್, ವೀಣಾವಾದನ, ತೋಟಗಾರಿಕೆ, ಸ್ಫೂರ್ತಿದಾಯಕ ಉಪನ್ಯಾಸಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಕನ್ನಡದ ಬಗ್ಗೆ ಅಪಾರ ಪ್ರೇಮ ಆಸಕ್ತಿ ಹೊಂದಿದ್ದು ಇಸ್ರೋದಲ್ಲಿ ಕನ್ನಡರಾಜ್ಯೋತ್ಸವ ಕಾರ್ಯಕ್ರಮಗಳನ್ನು ಅಲ್ಲಿನ ಸಹೃದಯ ವಿಜ್ಞಾನಿಗಳ ಸಹಕಾರದಲ್ಲಿ ನಡೆಸುತ್ತಿದ್ದಾರೆ. ಅನೇಕ ಕನ್ನಡ ಪುಸ್ತಕಗಳನ್ನು ರಚಿಸಿದ್ದಾರೆ. ಇಂದು ಚಂದ್ರನಿಂದ ನಮಗೆ ಅನೇಕ ಛಾಯಾಚಿತ್ರಗಳು ಬರುತ್ತಿದ್ದು ಅದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವವರು ಹಿರಿಯ ವಿಜ್ಞಾನಿಗಳಾದ ಶ್ರೀನಾಥ್ ರತ್ನಕುಮಾರ್ ಅವರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ