newsfirstkannada.com

ಶಾಕಿಂಗ್​ ಸತ್ಯ.. ಈ ತರಕಾರಿ ತಿನ್ನೋ ಮುನ್ನ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು!

Share :

25-10-2023

    ತ್ಯಾಜ್ಯ ನೀರಿನಿಂದ ಬೆಳೆಯಲಾದ ತರಕಾರಿಗಳು ತಿನ್ನಲು ಯೋಗ್ಯವಲ್ಲ!

    ಜಿಲ್ಲೆಗಳಿಂದ ಬೆಂಗಳೂರಿಗೆ ಪೂರೈಕೆಯಾಗುವ ತರಕಾರಿ ಎಷ್ಟು ಶುದ್ಧ?

    ಸಾಕಷ್ಟು ತರಕಾರಿಗಳಲ್ಲಿ ಕಲುಷಿತಗೊಂಡಿರುವ ಹೆವಿ ಮೆಟಲ್​ ಪತ್ತೆ!

ಬೆಂಗಳೂರು: ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಡಿಕೊಳ್ಳುವುದು ಹೇಗೆ ಎಂಬಾ ಗೊಂದಲದಲ್ಲೇ ಇರುತ್ತಾರೆ. ಯಾವ ಆಹಾರ ದೇಹಕ್ಕೆ ಹಿತ, ಯಾವ ತರಕಾರಿ ತಿಂದರೆ ದೇಹಕ್ಕೆ ಒಳ್ಳೆಯದು ಎಂದು ಜನ ತಲೆ ಕೆಡಿಸಿಕೊಂಡಿರುತ್ತಾರೆ. ತರಕಾರಿ, ಹಣ್ಣುಗಳನ್ನು ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು ಅಂತ ಎಲ್ಲರಿಗೂ ಗೊತ್ತು. ಹಾಗಾಗಿ ಪ್ರತಿಯೊಬ್ಬರು ತರಕಾರಿ ಹಣ್ಣುಗಳನ್ನು ತಿನ್ನುತ್ತಾ ಇರುತ್ತಾರೆ. ಆದರೆ ಇದೀಗ ತರಕಾರಿಗಳ ಕರಾಳ‌ ಸತ್ಯ ಬೆಳಕಿಗೆ ಬಂದಿದೆ.

ಹೌದು, ನೀವು ದಿನನಿತ್ಯ ಸೇವಿಸೋ ತರಕಾರಿಗಳು ಎಷ್ಟು ಶುದ್ಧ ಎಂದು ನಿಮಗೆ ತಿಳಿದಿದೆಯೇ? ಈಗ ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳ ಬಗ್ಗೆ ಶಾಕಿಂಗ್ ರಿಪೋರ್ಟ್​ವೊಂದು ಬಂದಿದೆ. ನಗರದ ಬಹುತೇಕ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ತರಕಾರಿಗಳು ತಿನ್ನಲು ಯೋಗ್ಯವಿಲ್ಲ. (EMPRI) ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ರಿಪೋರ್ಟ್​ನಲ್ಲಿ ತರಕಾರಿಗಳ ಕರಾಳ ಸತ್ಯ ಬಯಲಾಗಿದೆ. ನಗರದಲ್ಲಿ ಮಾರಾಟವಾಗುವ ತರಕಾರಿಗಳ ಸ್ಯಾಂಪಲ್​ ಪಡೆದು EMPRI ಸಂಸ್ಥೆ ಅಧ್ಯಯನ ನಡೆಸಿದೆ. ಬೆಂಗಳೂರಿನದಾದ್ಯಂತ ಸುಮಾರು 20 ಮಳಿಗೆಗಳಿಂದ 400 ಸ್ಯಾಂಪಲ್​ಗಳ ಸಂಶೋಧನೆ ನಡೆಸಿದ್ದಾರೆ. 5 ದೊಡ್ಡ ಸೂಪರ್​​ ಮಾರ್ಕೆಟ್​ಗಳು, 5 ಸ್ಥಳೀಯ ಮಾರುಕಟ್ಟೆಗಳು ಹಾಗೂ ಸಾಯಯವ ಮತ್ತು ಹಾಪ್​​ಕಾಮ್ಸ್​ ಮಾರುಕಟ್ಟೆಗಳಿಂದ ಮಾದರಿಗಳನ್ನ EMPRI ಪಡೆದುಕೊಂಡಿದೆ.

ನಾವೆಲ್ಲಾ ಸೇವಿಸುವ ತರಕಾರಿಗಳಲ್ಲಿ ಅತೀ ಹೆಚ್ಚು ಲೋಹದ ಅಂಶ ಪತ್ತೆಯಾಗಿದೆ. ​ಇದಕ್ಕೆ ಪ್ರಮುಖ ಕಾರಣ ತ್ಯಾಜ್ಯ ನೀರಿನಿಂದ ತರಕಾರಿಗಳನ್ನು ಬೆಳೆಯುತ್ತಿರುವುದು. ತ್ಯಾಜ್ಯ ನೀರಿನಿಂದ ಬೆಳೆಯಲಾದ ತರಕಾರಿಗಳು ತಿನ್ನಲು ಯೋಗ್ಯವಲ್ಲ ಎಂದು ವರದಿ ಮೂಲಕ ತಿಳಿದು ಬಂದಿದೆ. EMPRI ಸಂಶೋಧಕರು 10 ತರಕಾರಿಗಳ 400 ಮಾದರಿಗಳನ್ನ ಪರೀಕ್ಷಿಸಿದ್ದಾರೆ. FAO (ಆಹಾರ ಮತ್ತು ಕೃಷಿ ಸಂಸ್ಥೆ) ನಿಗದಿಪಡಡಿಸಿದ ಮಿತಿಗಿಂತಲೂ ಹೆಚ್ಚುಮಾಲಿನ್ಯ ಆಗಿರೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಬೆಂಗಳೂರಿಗೆ ತರಕಾರಿಗಳು ಪೂರೈಕೆಯಾಗುತ್ತವೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಪ್ರದೇಶಗಳಿಂದ ಹೆಚ್ಚು ತರಕಾರಿಗಳು ನಗರಕ್ಕೆ ಪೂರೈಕೆಯಾಗುತ್ತವೆ. ಹಾಪ್​​ಕಾಮ್ಸ್​​ವೊಂದಕ್ಕೆ ನಿತ್ಯ 70 ಟನ್​ ತರಕಾರಿ ಪೂರೈಕೆಯಾಗುತ್ತೆ. ತಳ್ಳುಗಾಡಿ, ರಸ್ತೆಬದಿಯಿಂದ ಹಿಡಿದ ಸೂಪರ್​​ ಮಾರ್ಕೆಟ್​​ಗಳವರೆಗೆ ಸಾಕಷ್ಟು ಪ್ರಮಾಣದಲ್ಲಿ ತರಕಾರಿಗಳು ಮಾರಾಟವಾಗುತ್ತವೆ.

ಸಂಶೋಧನೆಗೊಳಪಡಿಸಲಾದ ತರಕಾರಿಗಳು..

  1. ಟೊಮ್ಯಾಟೊ
  2. ದೊಡ್ಡ ಮೆಣಸಿನ ಕಾಯಿ
  3. ಬದನೆಕಾಯಿ
  4. ಬೀನ್ಸ್​
  5. ಕ್ಯಾರೆಟ್​
  6. ಹಸಿ ಮೆಣಸಿನ ಕಾಯಿ
  7. ಈರುಳ್ಳಿ
  8. ಆಲೂಗಡ್ಡೆ
  9. ಪಾಲಾಕ್​ ಸೊಪ್ಪು
  10. ಕೊತ್ತಂಬರಿ ಸೊಪ್ಪು

ತರಕಾರಿಗಳಲ್ಲಿ ಅನುಮತಿಸಲಾದ ಕಬ್ಬಿಣದ ಗರಿಷ್ಠ ಮಿತಿ 425.5 ಮಿಲಿ ಗ್ರಾಂ ಪರ್​​ ಕೆಜಿ. ಆದರೆ ಸಮಶೋಧನೆಯಲ್ಲಿ ಕಂಡುಬಂದಿರುವ ಮಿತಿ ಹೆಚ್ಚಿದೆ. ಪ್ರತಿಷ್ಠಿತ ಸಾವಯವ ತರಕಾರಿ ಮಳಿಗೆಗಳಿಂದ ಖರೀದಿಸಿದ ಬೀನ್ಸ್ 810/20 ಮಿಲಿ ಗ್ರಾಂ ಪರ್​​ ಕೆಜಿ. ಕೊತ್ತಂಬರಿ 945.70 ಮಿಲಿ ಗ್ರಾಂ ಪರ್​​ ಕೆಜಿ. ಪಾಲಾಕ್ 554.58 ಮಿಲಿ ಗ್ರಾಂ ಪರ್​​ ಕೆಜಿ. ಹಾಪ್​​ಕಾಮ್ಸ್​ ಈರುಳ್ಳಿ 592.18 ಮಿಲಿ ಗ್ರಾಂ ಪರ್​​ ಕೆಜಿ.

FAO ಅನುಮತಿಸಿರುವ ಕ್ಯಾಡ್ಮಿಯಮ್​​​ನ ಗರಿಷ್ಠ ಮಿತಿ 0.2 ಮಿಲಿ ಗ್ರಾಂ ಪರ್​​ ಕೆಜಿ. ಆದರೆ ಬಿಟಿಎಂ ಲೇಔಟ್​ ಸೂಪರ್​​ ಮಾರ್ಕೆಟ್​​ನಿಂದ ಖರೀದಿಸಿದ ಬದನೆಕಾಯಿಯಲ್ಲಿ 52.30 ಮಿಲಿ ಗ್ರಾಂ ಪರ್​​ ಕೆಜಿ ಕ್ಯಾಡ್ಮಿಯಂ ಇರೋದು ಪತ್ತೆಯಾಗಿದೆ. ಅತೀ ಹೆಚ್ಚಿನ ಕ್ಯಾಡ್ಮಿಯಂ ದೇಹಕ್ಕೆ ತುಂಬಾ ಅಪಾಯಕಾರಿಯಾಗಿದೆ. ಪಾಲಾಕ್​ನಲ್ಲಿ​ 53.50 ಮಿಲಿ ಗ್ರಾಂ ಪರ್​​ ಕೆಜಿ ಇದೆ. ಕ್ಯಾರೇಟ್​​ನಲ್ಲಿ 54.60 ಮಿಲಿ ಗ್ರಾಂ ಪರ್​​ ಕೆಜಿ ಇದೆ. ಇದರಲ್ಲಿ ವಿಷದ ಅಂಶವಿದ್ದು ದೇಹವನ್ನ ದಿನದಿಂದ ದಿನಕ್ಕೆ ದುರ್ಬಲಗೊಳಿಸುತ್ತೆ. ಸೀಸ ಕೂಡ ವಿಷಕಾರಿ ಅಂಶವಾಗಿದ್ದು ಮಿತಿಗಿಂತ ಹೆಚ್ಚು ಇರೋದು ಕಂಡುಬಂದಿದೆ. ತರಕಾರಿಗಳಲ್ಲಿ ಸೀಸದ ಗರಿಷ್ಟ ಪ್ರಮಾಣ 0.3 ಮಿಲಿ ಗ್ರಾಂ ಪರ್​​ ಕೆಜಿ ಇದೆ. ಆದರೆ ಬೀನ್ಸ್​​ನಲ್ಲಿ 12.20 ಮಿಲಿ ಗ್ರಾಂ ಪರ್​​ ಕೆಜಿ ಇರೋದು ಪತ್ತೆಯಾಗಿದೆ.

ತರಕಾರಿಗಳು ಕಲುಷಿತಗೊಳ್ಳಲು ಕಾರಣಗಳು..!

  1. ಕೃಷಿಗೆ ತ್ಯಾಜ್ಯ ನೀರು ಬಳಕೆ
  2. ರೈತರು ಒಳಚರಂಡಿ ನೀರನ್ನು ತರಕಾರಿಗಳಿಗೆ ಬಳಸ್ತಿರೋದು
  3. ಕಾಲುವೆಗಳು, ಹೊರಹರಿವಿನ ನೀರು ಬಳಕೆ
  4. ಅನೈತಿಕ ಕೃಷಿ ಚಟುವಟಿಕೆಗಳು

ಯಾವ್ಯಾವ ತರಕಾರಿಗಳಲ್ಲಿ ಕಬ್ಬಿಣ ಇರಬೇಕಾದ ಮಿತಿ 425.5 mg/kg, ಇದ್ದ ಮಿತಿ ಎಷ್ಟಿದೆ..?

ಬೀನ್ಸ್ 810.20 ಮಿಗ್ರಾಂ/ಕೆಜಿ
ಕೊತ್ತಂಬರಿ 945.70 ಮಿಗ್ರಾಂ/ಕೆಜಿ
ಪಾಲಕ್ 554.58 ಮಿಗ್ರಾಂ/ಕೆಜಿ

ಯಾವ್ಯಾವ ಕ್ಯಾಡ್ಮಿಯಮ್ ಇರಬೇಕಾದ ಮಿತಿ 0.2 ಮಿಗ್ರಾಂ/kg, ಇದ್ದ ಮಿತಿ ಎಷ್ಟಿದೆ..?

ಬದನೆಕಾಯಿ 52.30 ಮಿಗ್ರಾಂ/ಕೆಜಿ
ಕೊತ್ತಂಬರಿ 53.30/ಕೆಜಿ
ಪಾಲಕ್ 53.50 ಮಿಗ್ರಾಂ/ಕೆಜಿ
ಕ್ಯಾರೆಟ್ 54.60 ಮಿಗ್ರಾಂ/ಕೆಜಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಕಿಂಗ್​ ಸತ್ಯ.. ಈ ತರಕಾರಿ ತಿನ್ನೋ ಮುನ್ನ ಎಚ್ಚರ! ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/07/veg.jpg

Load More