ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ತಡೆದು ಅಪರಿಚಿತ ಗ್ಯಾಂಗ್ ಹಲ್ಲೆ
BJP ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ದಾಳಿ
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಣಿಕಂಠ ರಾಠೋಡ್
ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ತಲೆಗೆ ಬಿಯರ್ ಬಾಟಲ್ಗಳಿಂದ ಹೊಡೆದು ಅಪರಿಚಿತ ಗ್ಯಾಂಗ್ ಎಸ್ಕೇಪ್ ಆಗಿದೆ. ಈ ಘಟನೆಯು ತಾಲೂಕಿನ ಶಹಾಬಾದ್ ಬಳಿ ನಡೆದಿದೆ.
ಮಣಿಕಂಠ ರಾಠೋಡ್ ಚಿತ್ತಾಪುರದಿಂದ ಕಲಬುರಗಿಗೆ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಶಹಾಬಾದ್ ಬಳಿ ವಾಹನ ಬರುತ್ತಿದ್ದಂತೆ ದುಷ್ಕರ್ಮಿಗಳು ಅವರ ವಾಹನವನ್ನು ತಡೆದು ಬಿಯರ್ ಬಾಟಲ್ಗಳಿಂದ ಹೊಡೆದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ದಾಳಿ ಮಾಡಿದವರು ಯಾರೆಂಬುವುದು ನಿಖರವಾಗಿ ತಿಳಿದು ಬಂದಿಲ್ಲ.
ಅಪರಿಚಿತ ಗ್ಯಾಂಗ್ನ ದಾಳಿಯಿಂದ ಮಣಿಕಂಠ ರಾಠೋಡ್ ಗಂಭೀರವಾಗಿ ಗಾಯಗೊಂಡಿದ್ದು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಕಂಠ ರಾಠೋಡ್ ಬಿಜೆಪಿ ಮುಖಂಡನಾಗಿದ್ದು ಈ ಬಾರಿ ನಡೆದ ವಿಧಾನಸಭೆ ಎಲೆಕ್ಷನ್ನಲ್ಲಿ ಚಿತ್ತಾಪುರದಿಂದ ಸ್ಪರ್ಧೆ ಮಾಡಿ ಪ್ರಿಯಾಂಕ್ ಖರ್ಗೆ ವಿರುದ್ಧ ಸೋತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ