ರೇಬಿಸ್ನಿಂದ ನಾಯಿಯಂತೆ ಬೊಗಳುತ್ತಿರುವ ಬಾಲಕ!
ಬಾಲಕನಿಗೆ ಚಿಕಿತ್ಸೆ ಕೊಡಿಸಲು ನಿರ್ಲಕ್ಷ್ಯ ತೋರಿದ್ದ ಪೋಷಕರು
ನಿನ್ನ ಹೆಸರು ಏನು ಎಂದರೆ ಬೌ..ಬೌ.. ಎನ್ನುತ್ತಿರುವ ಬಾಲಕ!
ದೇಶದ ವಿವಿಧೆಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಿಳೆಯರು, ಮಕ್ಕಳು ಒಬ್ಬಂಟಿಯಾಗಿ ರಸ್ತೆಗಳಲ್ಲಿ ಓಡಾಡುವುದೇ ಕಷ್ಟವೆನಿಸಿದೆ. ಸರ್ಕಾರ ಕೂಡ ಈ ಬಗ್ಗೆ ಹಲವು ಸೂಚನೆಗಳನ್ನು ಹೊರಡಿಸಿ ನಾಯಿ ಕಚ್ಚಿಸಿಕೊಂಡ ತಕ್ಷಣ ವೈದ್ಯರ ಬಳಿ ಚಿಕಿತ್ಸೆ ಪಡೆಯುವಂತೆ ತಿಳಿಸುತ್ತಲೇ ಇರುತ್ತದೆ. ಆದರೂ ಜನರು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದೇ ರೀತಿ ಕಡೆಗಣಿಸಿದ್ದಕ್ಕೆ ಬಾಲಕನೊಬ್ಬ ನಾಯಿಯಂತೆ ವರ್ತನೆ ಮಾಡುತ್ತಿದ್ದಾನೆ.
ಉತ್ತರಭಾರತದ ರಾಜ್ಯದವೊಂದರ ಬಾಲಕನೊಬ್ಬನಿಗೆ ಬೀದಿ ನಾಯಿ ಕಚ್ಚಿದೆ ಎನ್ನಲಾಗಿದೆ. ಆದ್ರೆ ನಂತರ ಆ ಬಾಲಕನಿಗೆ ಪೋಷಕರು ಯಾವುದೇ ಚಿಕಿತ್ಸೆ ಕೊಡಿಸಿಲ್ಲ. ಹೀಗಾಗಿ ಬಾಲಕನಿಗೆ ರೇಬಿಸ್ ವೈರಸ್ ತಗುಲಿದ್ದು ನಾಯಿಯಂತೆ ವರ್ತನೆ ಮಾಡುತ್ತಿದ್ದಾನೆ. ಇದನ್ನು ಗಮನಿಸಿದ ಪೋಷಕರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಬಾಲಕ ಥೇಟ್ ನಾಯಿಯಂತೆ ಬೊಗಳುತ್ತಿದ್ದಾನೆ. ಅಲ್ಲದೇ ಹಿಂದಿಯಲ್ಲಿ ನಿನ್ನ ಹೆಸರು ಏನೆಂದು ಕೇಳಿದರೆ ಬೌ.. ಬೌ.. ಎಂದು ಬೊಗಳುತ್ತಾ, ನಾಲಿಗೆ ಹೊರ ಚಾಚುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಯಿಯಿಂದ ಕಚ್ಚಿಸಿಕೊಂಡ ಬಾಲಕನಿಗೆ ರೇಬಿಸ್ ತಗುಲಿದೆ. ಪೋಷಕರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಾಗ ಆ ಬಾಲಕ ನಾಯಿಯಂತೆ ಬೊಗಳುತ್ತಿದ್ದಾನೆ. #Newsfirstlive #Dogbite #Rabies #Viralvideo #KannadaNews pic.twitter.com/lMQMhzz7w6
— NewsFirst Kannada (@NewsFirstKan) June 12, 2023