newsfirstkannada.com

ಬ್ರ್ಯಾಂಡ್​ ಬೆಂಗಳೂರು ಎಫೆಕ್ಟ್​​​.. ಬೀದಿ ವ್ಯಾಪಾರಿಗಳಿಗೆ ಶಾಕ್​​ ಕೊಟ್ಟ ಬಿಬಿಎಂಪಿ

Share :

22-07-2023

    25 ಸಾವಿರ ಮಂದಿಗೆ ಮಾತ್ರ ಬಿಬಿಎಂಪಿಯಿಂದ ಲೈಸೆನ್ಸ್

    89 ಸಾವಿರ ವ್ಯಾಪಾರಿಗಳಿಂದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ

    ಬಿಬಿಎಂಪಿ ನಡೆಗೆ ಬೀದಿಬದಿ ವ್ಯಾಪಾರಿಗಳ ಸಂಘ ಸಿಡಿಮಿಡಿ

ಬೆಂಗಳೂರು: ನಗರದ ಬೀದಿ ಬದಿ ವ್ಯಾಪಾರಿಗಳ‌ ತೆರವಿಗೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ, ಡಿಸಿಎಂ ಆಜ್ಞೆ ಪಾಲಿಸೋಕೆ ಮುಂದಾದ ಬಿಬಿಎಂಪಿ ಅಧಿಕಾರಿಗಳು, ಈಗಾಗಲೇ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಶುರು ಮಾಡಿದ್ದಾರೆ. ನಗರದಲ್ಲಿ ಅಂದಾಜು 1.50 ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಈ ಪೈಕಿ 25 ಸಾವಿರ ಮಂದಿಗೆ ಈಗಾಗಲೇ ಬಿಬಿಎಂಪಿ ಲೈಸೆನ್ಸ್ ಕೊಡಲಾಗಿದೆ. 89 ಸಾವಿರ ಬೀದಿ ಬದಿ ವ್ಯಾಪಾರಿಗಳು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ನೋಂದಣಿಯನ್ನೂ ಮಾಡಿಕೊಂಡಿದ್ದಾರೆ. 13 ಸಾವಿರ ಕಿಲೋ ಮೀಟರ್​ ಉದ್ದದ ರಸ್ತೆ ಜಾಲ ಹೊಂದಿರುವ ಮಹಾನಗರ ಬೆಂಗಳೂರಿನಲ್ಲಿ 10% ಅಂದರೆ 1,300 km ಉದ್ದದ ಮುಖ್ಯ ರಸ್ತೆ ಬದಿಯಲ್ಲಿರುವ ಬೀದಿ ಬದಿ ವ್ಯಾಪಾರಿಗಳ ತೆರವು ಮಾಡಲು ಸೂಚನೆ ನೀಡಲಾಗಿದೆ.

ಬಿಬಿಎಂಪಿಯಿಂದಲೇ ವ್ಯಾಪಾರ ಮಾಡಲು ಪರವಾನಿಗೆ ಕೊಟ್ಟು ಈಗ ತೆರವು ಅಂದ್ರೆ ಏನ್​ ಅರ್ಥ. ಬಿಬಿಎಂಪಿ ಈ ನಡೆಯಿಂದ ಒಂದೂವರೆ ಲಕ್ಷಕ್ಕೂ ಅಧಿಕ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಪೆಟ್ಟು ಬೀಳಲಿದೆ ಅಂತ ಬಿಬಿಎಂಪಿ ಅಧಿಕಾರಿಗಳ ಡಬಲ್ ಸ್ಟಾಂಡರ್ಡ್ ವಿರುದ್ಧ ಬೀದಿಬದಿ ವ್ಯಾಪಾರಿಗಳು ಕಿಡಿಕಾರಿದ್ದಾರೆ. ಅಷ್ಟೇ ಅಲ್ಲ, ವ್ಯಾಪಾರಕ್ಕೆ ಅವಕಾಶ ಮಾಡಿಕೊಡದಿದ್ದರೆ ಬಿಬಿಎಂಪಿ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಅಂದು ವ್ಯಾಪಾರಕ್ಕೆ ಅವಕಾಶ ಕೊಟ್ಟು ಇಂದು ಬ್ರ್ಯಾಂಡ್​ ಬೆಂಗಳೂರು ಹೆಸರಿನಲ್ಲಿ ಹೀಗೆ ದಿನದ ವ್ಯಾಪರ ನಂಬಿ ಬದುಕುವ ಬೀದಿ ಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಸದ್ಯದ ಪ್ರಶ್ನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರ್ಯಾಂಡ್​ ಬೆಂಗಳೂರು ಎಫೆಕ್ಟ್​​​.. ಬೀದಿ ವ್ಯಾಪಾರಿಗಳಿಗೆ ಶಾಕ್​​ ಕೊಟ್ಟ ಬಿಬಿಎಂಪಿ

https://newsfirstlive.com/wp-content/uploads/2023/07/stree-stop-1.jpg

Load More