newsfirstkannada.com

×

BIGG BOSS 11ಗೆ ಎಂಟ್ರಿ ಕೊಡಲಿದ್ದಾರೆ ಸಖತ್​ ಸ್ಟ್ರಾಂಗ್ ಕಂಟೆಸ್ಟೆಂಟ್ಸ್; ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

Share :

Published September 28, 2024 at 3:39pm

Update September 28, 2024 at 4:06pm

    ಸೀರಿಯಲ್,​ ಸಿನಿಮಾ, ರಿಯಾಲಿಟಿ ಶೋನಿಂದ ಯಾರೆಲ್ಲಾ ಎಂಟ್ರಿ?

    ಇಂದು ಸಂಜೆ 5 ಸ್ಪರ್ಧಿಗಳ ಬಗ್ಗೆ ಸಿಗಲಿದೆ ಅಧಿಕೃತ ಮಾಹಿತಿ

    ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಐವರ ಹೆಸರು ರಿವೀಲ್​

ಕನ್ನಡದ ಬಹು ನಿರೀಕ್ಷಿತ ಶೋ ಬಿಗ್​​ಬಾಸ್​ ಸೀಸನ್​ 11 ಇಂದು ಸಂಜೆ ಐದು ಸ್ಪರ್ಧಿಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ದೊರಕಲಿದೆ. ಹೀಗಾಗಿ ಬಿಗ್​ಬಾಸ್​ ವೀಕ್ಷಕರು ತುದಿಗಾಲಿನ ಮೇಲೆ ನಿಂತುಕೊಂಡಿದ್ದಾರೆ. ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್- 11 ಆರಂಭವಾಗುವುದಕ್ಕೆ ಇನ್ನೇನು ಒಂದೇ ಒಂದು ದಿನ ಬಾಕಿ ಇದೆ.

ಇದನ್ನೂ ಓದಿ: BIGG BOSS ಹೊಸ ಪ್ರೊಮೋದಲ್ಲಿ ಅಡಗಿದೆ ಗುಟ್ಟು.. ಆ ಫೋಟೋದಲ್ಲಿರೋ ಸೆಲೆಬ್ರಿಟಿಗಳು ಯಾರು?

ಹೌದು, ಇಂದು ಸಂಜೆ 6 ಗಂಟೆಗೆ ರಾಜಾ ರಾಣಿ ಗ್ರ್ಯಾಂಡ್​ ಫಿನಾಲೆ ಇದೆ. ಇದೇ ಗ್ರ್ಯಾಂಡ್​ ಫಿನಾಲೆಯಲ್ಲಿ ಬಿಗ್​ಬಾಸ್​ ಮನೆಗೆ ಹೋಗುವ ಐದು ಸ್ಪರ್ಧಿಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ತಿಳಿದು ಬರಲಿದೆ. ಇನ್ನೂ ಈ ಬಾರಿಯ ಬಿಗ್​ಬಾಸ್​ಗೆ ಯಾರೆಲ್ಲಾ ಕಂಟೆಸ್ಟೆಂಟ್ಸ್​ಗಳು ಎಂಟ್ರಿ ಕೊಡಲಿದ್ದಾರೆ ಅಂತ ವೀಕ್ಷಕರು ಕಾಯುತ್ತಿದ್ದರು​.

ಇದೀಗ ನ್ಯೂಸ್​ಫಸ್ಟ್​ಗೆ ಈ ಬಾರಿ ಬಿಗ್​ಬಾಸ್​ ಮನೆಗೆ ಯಾರೆಲ್ಲಾ ಕಂಟೆಸ್ಟೆಂಟ್ಸ್​ಗಳು ಎಂಟ್ರಿ ಕೊಡಲಿದ್ದಾರೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಎಲ್ಲಾ ಕಂಟೆಸ್ಟೆಂಟ್ಸ್​ಗಳನ್ನು ಒಂದೊಂದು ಕ್ಷೇತ್ರಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಸೀರಿಯಲ್,​ ಸಿನಿಮಾ, ರಿಯಾಲಿಟಿ ಶೋ ಹೀಗೆ ಸಾಕಷ್ಟು ವಿಭಾಗಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಅದರಲ್ಲೂ ಮುಖ್ಯವಾಗಿ ಈ ಬಾರಿಯ ಬಿಗ್​ಬಾಸ್​ಗೆ ಕನ್ನಡ ಧಾರಾವಾಹಿಯ ನಟ ಹಾಗೂ ನಟಿಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಬಿಗ್‌ಬಾಸ್‌ ಅಂದ್ರೆ ಮಿಕ್ಚರ್ ಆಫ್ ಬ್ಯೂಟಿ ಅಂಡ್ ಇಂಟಲಿಜೆನ್ಸ್‌. ಇಲ್ಲಿ ಎಲ್ಲಾ ರೀತಿಯ ಸ್ಪರ್ಧಿಗಳು ಇರ್ತಾರೆ. ಅದರಲ್ಲೂ ಸ್ಪರ್ಧಿ ಸೀಸನ್‌ನಲ್ಲೂ ಸೀರಿಯಲ್‌ ನಟಿಯರು ಕಂಪಲ್ಸರಿ. ಮೊಟ್ಟ ಮೊದಲನೇಯದಾಗಿ ಪಾರು ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡ ಮೋಕ್ಷಿತಾ ಪೈ ಈ ಬಾರಿಯ ಬಿಗ್​ಬಾಸ್​ಗೆ ಎಂಟ್ರಿ ಕೊಡುತ್ತಿದ್ದಾರೆ.

ಹೌದು, ಪಾರು ಸೀರಿಯಲ್​ ಮೂಲಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಮೋಕ್ಷಿತಾ ಅವರ ಫ್ಯಾನ್ ಫಾಲೋವರ್ಸ್ ಬಗ್ಗೆ ಹೇಳೋದೇ ಬೇಡ. ಇಡೀ ಕರ್ನಾಟಕದ ತುಂಬಾ ಇದೇ. ಆದ್ರೆ, ಇಷ್ಟು ದಿನ ನೀವು ಮೋಕ್ಷಿತಾನಾ ಪಾರು ಆಗಿ ನೋಡಿದ್ರಿ, ಆದ್ರೆ, ಮೋಕ್ಷಿತಾ ರಿಯಲ್‌ ಲೈಫ್‌ನಲ್ಲಿ ಹೇಗಿರ್ತಾರೆ ಅನ್ನೋದನ್ನ ಬಿಗ್‌ಬಾಸ್ ಮೂಲಕ ನೋಡಬಹುದಾಗಿದೆ.

ಗೀತಾ ಸೀರಿಯಲ್ ಮೂಲಕ ಖ್ಯಾತಿ ಪಡೆದುಕೊಂಡ ನಟಿ ಭವ್ಯಾ ಗೌಡ ಕೂಡ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡಲಿದ್ದಾರೆ. ಇನ್ನೂ ನಟಿ ಭವ್ಯಾ ಗೌಡ ಬಿಗ್‌ಬಾಸ್‌ಗೆ ಹೋಗ್ತಾರೆ ಅಂತಾ ಈಗಾಗಲೇ ವೈರಲ್ ಆಗಿತ್ತು.  ಹೀಗಾಗಿ ಇವ್ರು ಹೋಗ್ತಾರೆ ಅನ್ನೋದು ಸೀಕ್ರೆಟ್ ಆಗಿ ಉಳಿದಿರಲಿಲ್ಲ. ಬಟ್ ಇವ್ರು ಕನ್ಫರ್ಮ್‌ ಆಗಿದ್ದಾರೆ.

ಇದೇ ಲಿಸ್ಟ್‌ನಲ್ಲಿ ಇರೋ ಇನ್ನೊಬ್ಬರು ಸೀರಿಯಲ್‌ನ ಪಾಪ್ಯುಲರ್ ನಟಿ ಗೌತಮಿ ಜಾಧವ್‌. ಸತ್ಯ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ ನಟಿ ಗೌತಮಿ ಜಾಧವ್‌. ತಮ್ಮ ಖಡಕ್ ರೋಲ್ ಮೂಲಕನೇ ಪ್ರಖ್ಯಾತಿ ಪಡೆದಿದ್ದಾರೆ. ಆದ್ರೆ, ಅವರು ರಿಯಲ್ ಲೈಫ್‌ನಲ್ಲಿ ಸಖತ್ ಸಾಫ್ಟ್‌. ಆದ್ರೆ, ಬಿಗ್‌ಬಾಸ್‌ನಲ್ಲಿ ಹೇಗಿರ್ತಾರೋ ಏನೋ ಗೊತ್ತಿಲ್ಲ.

ಇದನ್ನೂ ಓದಿ: BBK11: ವೀಕ್ಷಕರಿಗೆ ಗುಡ್​​ನ್ಯೂಸ್​; ಇಂದು ಬಿಗ್​ ಅಪ್ಡೇಟ್​ ಹೊತ್ತು ತರ್ತಿದೆ ಬಿಗ್​ಬಾಸ್​ ತಂಡ.. ಏನದು?

ಸೀರಿಯಲ್‌ ಮತ್ತು ರಿಯಾಲಿಟಿ ಶೋ ಮೂಲಕ ಪಾಪ್ಯುಲರ್ ಆಗಿರೋ ಇನ್ನೊಬ್ಬ ನಟಿಯೂ ಬಿಗ್‌ಬಾಸ್ ಸೀಸನ್‌ 11ಕ್ಕೆ ಸೆಲೆಕ್ಟ್ ಆಗಿದ್ದಾರೆ. ನಟಿ ಐಶ್ವರ್ಯಾ ಸಿಂಧೋಗಿ ಕೂಡ ಬಿಗ್​ಬಾಸ್​ಗೆ ಹೋಗುತ್ತಿದ್ದಾರೆ. ನಟಿ ಐಶ್ವರ್ಯಾ ಚಿರಪರಿಚಿತ ಹೆಸರು. ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿರೋ ಐಶ್ವರ್ಯಾ, ಸಖತ್ ಗ್ಲಾಮರಸ್ ಆ್ಯಕ್ಟರ್ಸ್‌. ಈಗ ಬಿಗ್‌ಬಾಸ್ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

ಇನ್ನು, ಮುಂದಿನ ಸ್ಪರ್ಧಿ ಕನ್ನಡ ಮತ್ತು ತೆಲುಗು ಸೀರಿಯಲ್ ಇಂಡಸ್ಟ್ರಿಯಲ್ಲಿ ಮಿಂಚಿರೋ ಹ್ಯಾಂಡ್ಸಮ್‌ ನಟ ಶಿಶಿರ್‌ ಕೂಡ ಬಿಗ್​ಬಾಸ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ನಟ ಶಿಶಿರ್‌ ಕುಲವಧು ಸೀರಿಯಲ್ ಮೂಲಕ ಫೇಮಸ್​ ಆಗಿದ್ದರು. ಆ ಸೀರಿಯಲ್‌ನ ಅದ್ಭುತ ಯಶಸ್ಸುನಿಂದ ಶಿಶಿರ್‌ಗೆ ಸಖತ್ ಫ್ಯಾನ್ ಫಾಲೋವರ್ ದಕ್ಕಿತು. ಈ ಸೀರಿಯಲ್ ನಂತರ ಉದಯ ಟಿವಿಯಲ್ಲಿ ಪ್ರಸಾರವಾದ ಸೇವಂತಿ ಸೀರಿಯಲ್​ನಲ್ಲಿ ನಟಿಸುತ್ತಿದ್ದರು. ಕನ್ನಡ ಅಷ್ಟೇ ಅಲ್ಲದೇ ತೆಲುಗು ಸೀರಿಯಲ್‌ ಇಂಡಸ್ಟ್ರಿಯಲ್ಲೂ ನಟ ಶಿಶಿರ್‌ ಮಿಂಚಿದ್ದಾರೆ.

ಇನ್ನು, ಪದ್ಮಾವತಿ ಸೀರಿಯಲ್ ಮೂಲಕ ಮನೆ ಮಾತಾದ ತ್ರಿವಿಕ್ರಮ್‌ ಕೂಡ ಈ ಬಾರಿಯ ಬಿಗ್​ಬಾಸ್​ಗೆ ಎಂಟ್ರಿ ಕೊಡಲಿದ್ದಾರೆ. ಇವರು ಈ ಹಿಂದೆಯೇ ಬಿಗ್‌ಬಾಸ್‌ ಮನೆಗೆ ಹೋಗಿದ್ದರು. ಅದು ಸೀರಿಯಲ್‌ ಸ್ಪೆಷಲ್‌ ರೌಂಡ್‌ನಲ್ಲಿ. ಅಲ್ಲಿಯೇ ಸಖತ್ ಖದರ್ ತೋರಿಸಿದ್ದರು. ಈಗ ಮತ್ತೊಮ್ಮೆ ಖದರ್ ತೋರಿಸೋಕೆ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡ್ತಾ ಇದ್ದಾರೆ ಎನ್ನಲಾಗಿದೆ.

ಇದೇ ರೀತಿ ಹೆಸರು ಮಾಡಿ ಬಿಗ್‌ಬಾಸ್‌ಗೆ ಹೋಗ್ತಿರೋ ಮತ್ತೊಬ್ಬ ನಟ ರಂಜಿತ್‌ ಕುಮಾರ್. ಇವರ ಪೂರ್ತಿ ಹೆಸರು ಯಾರಿಗೂ ಗೊತ್ತಾಗಲ್ಲ. ಆದ್ರೆ, ಶನಿ ಸೀರಿಯಲ್‌ನ ಸೂರ್ಯದೇವ ಅಂದ್ರೆ ಎಲ್ಲರಿಗೂ ನೆನಪಾಗುತ್ತೆ. ಈ ಸೀರಿಯಲ್ ಮೂಲಕ ಪರಿಚಯವಾದ ರಂಜಿತ್ ಆ ನಂತರ ಕಣ್ಮರೆಯಾಗಿ ಬಿಟ್ಟರು. ಈಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ. ಸಿಕ್ಸ್ ಬಾರಿಸ್ತಾರಾ ಅನ್ನೋದನ್ನ ಕಾದು ನೋಡ್ಬೇಕಿದೆ. ಇನ್ನೂ ಸೆಪ್ಟೆಂಬರ್ 29ರ ಸಂಜೆ 6 ಗಂಟೆಗೆ ಬಿಗ್​ಬಾಸ್​ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS 11ಗೆ ಎಂಟ್ರಿ ಕೊಡಲಿದ್ದಾರೆ ಸಖತ್​ ಸ್ಟ್ರಾಂಗ್ ಕಂಟೆಸ್ಟೆಂಟ್ಸ್; ಯಾರೆಲ್ಲಾ ಬರ್ತಿದ್ದಾರೆ ಗೊತ್ತಾ?

https://newsfirstlive.com/wp-content/uploads/2024/09/bbk-11-2.jpg

Load More