ಎಸ್ಟಿಎಸ್ ‘ಕೈ’ ಸೇರೋದಕ್ಕೂ ಮುನ್ನ ಅನುದಾನ
ಪಕ್ಷಕ್ಕೆ ಬರಲು ಗಿಫ್ಟ್ ನೀಡಿದ್ರಾ ಡಿಸಿಎಂ ಡಿಕೆ ಶಿವಕುಮಾರ್?
ಅನುದಾನದ ಬಗ್ಗೆ ಸರ್ಕಾರ ಕೊಟ್ಟ ಸಮರ್ಥನೆ ಇದು!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಘರ್ವಾಪ್ಸಿ ಭಾರೀ ಸಂಚಲನ ಸೃಷ್ಟಿಸಿದೆ. ಬಾಂಬೆ ಬಾಯ್ಸ್ ವಾಪಸ್ ಕಾಂಗ್ರೆಸ್ನತ್ತ ಬರ್ತಾರೆ ಅನ್ನೋ ಮಾತಿನ ಮಧ್ಯೆ ಮಾಜಿ ಸಚಿವ ಎಸ್ಟಿ ಸೋಮಶೇಖರ್ ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನ ಮೊತ್ತ ಕುತೂಹಲ ಮೂಡಿಸದೆ. ಈ ನಡುವೆ ಹೆಚ್ಡಿಕೆ ಕಾಂಗ್ರೆಸ್ನ ಕೆಲ ಶಾಸಕರೇ ಕೈ ಬಿಡಲಿದ್ದಾರೆ ಅನ್ನೋ ಬಾಂಬ್ ಸಿಡಿಸಿದ್ದಾರೆ. ಯಶವಂತಪುರ ಶಾಸಕ ಎಸ್ಟಿ ಸೋಮಶೇಖರ್ ಸೇರಿ ನಾಲ್ವರು ಬಾಂಬೆ ಬಾಯ್ಸ್ ವಾಪಸ್ ಬಿಜೆಪಿಯಿಂದ ಕಾಂಗ್ರೆಸ್ಗೆ ಘರ್ವಾಪ್ಸಿ ಮಾಡ್ತಾರೆಂಬ ಸುದ್ದಿ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಗುಲ್ಲೆಬ್ಬಿಸಿದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಹೋಗಲ್ಲ ಅಂತ ಖುದ್ದು ಸೋಮಶೇಖರ್ ಹೇಳ್ತಿದ್ರೂ ಈ ಘರ್ವಾಪ್ಸಿ ವಿಚಾರ ಭಾರೀ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ಮತ್ತೊಂದು ವಿಚಾರ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ.
ಯಶವಂತಪುರ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ಮಂಜೂರು
ಎಸ್ಟಿಎಸ್ ‘ಕೈ’ ಸೇರ್ಪಡೆ ಚರ್ಚೆ ಬೆನ್ನಲ್ಲೇ ಅನುದಾನ
ಯಶವಂತಪುರ ಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಎಸ್ಟಿ ಸೋಮಶೇಖರ್ ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾಗ್ತಾರೆ ಅನ್ನೋ ಚರ್ಚೆ ಬೆನ್ನಲ್ಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಸೋಮಶೇಖರ್ ಪಕ್ಷಕ್ಕೆ ಬರೋದಕ್ಕೆ ಡಿಸಿಎಂ ಡಿಕೆಶಿ ಗಿಫ್ಟ್ ನೀಡಿದ್ರಾ ಅನ್ನೋ ಮಾತುಗಳು ರಾಜಕೀಯದ ಮೊಗಸಾಲೆಯಲ್ಲಿ ಹರಿದಾಡ್ತಿವೆ. ಯಶವಂತಪುರ ಕ್ಷೇತ್ರಕ್ಕೆ ಬರೋಬ್ಬರಿ 7.63 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಹೇರೋಹಳ್ಳಿ, ಕೆಂಗೇರಿ ಭಾಗಕ್ಕೆ ಕುಡಿಯೋ ನೀರಿಗೆ ಅನುದಾನ ನೀಡಲಾಗಿದೆ. 1.63 ಲಕ್ಷ ನೀರು ಪೂರೈಸುವ ಟ್ಯಾಂಕರ್‌ಗಳಿಗೆ ಮೀಸಲಿಡಲಾಗಿದೆ. ಹೊಸ ಬೋರ್ವೆಲ್, ಮೇಂಟೇನೆನ್ಸ್ ಸೇರಿ 6 ಕೋಟಿ ನೀಡಲಾಗಿದೆ. ಬಿಬಿಎಂಪಿ ಮೂಲಕ ಡಿಸಿಎಂ ಭರ್ಜರಿ ಗಿಫ್ಟ್ ಕೊಟ್ರಾ ಅನ್ನೋ ಚರ್ಚೆ ಸದ್ಯ ಜೋರಾಗಿದೆ. ಇನ್ನು ಯಶವಂತಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿರೋ ಬಗ್ಗೆ ರಾಮನಗರದಲ್ಲಿ ಮಾತನಾಡಿರೋ ಸಚಿವ ರಾಮಲಿಂಗಾ ರೆಡ್ಡಿ, ನಮಗೂ ಕೂಡ ಹಣ ಬಿಡುಗಡೆಯಾಗಿದೆ. ಬಿಜೆಪಿ ಇದ್ದಾಗ ಕಾಂಗ್ರೆಸ್ ಶಾಸಕರಿಗೆ ಕಡಿಮೆ ಹಣ ಬಿಡುಗಡೆ ಮಾಡಿದ್ರು. 100 ರಲ್ಲಿ 10 ಶೇಕಡಾ ಕೊಡೋರು ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ನತ್ತ ಸೋಮಶೇಖರ್.. ಅಲರ್ಟ್ ಆದ ಜೆಡಿಎಸ್
ಇನ್ನು ಕಾಂಗ್ರೆಸ್ನತ್ತ ಎಸ್.ಟಿ ಸೋಮಶೇಖರ್ ಅನ್ನೋ ಚರ್ಚೆ ಬೆನ್ನಲ್ಲೇ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್ ಅಲರ್ಟ್ ಆಗಿದೆ. ಜೆಡಿಎಸ್ ಪಕ್ಷ ಉಪ ಚುನಾವಣೆಗೆ ಸಿದ್ಧತೆ ಶುರು ಮಾಡಿದೆ ಎನ್ನಲಾಗ್ತಿದೆ. ಈ ಬಗ್ಗೆ ಯಶವಂತಪುರ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸಭೆ ಕರೆದಿದ್ದಾರೆ. ಪರಾಜಿತ ಅಭ್ಯರ್ಥಿ ಜವರಾಯಿಗೌಡ ಸೇರಿ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಒಟ್ಟಾರೆ ಘರ್ವಾಪ್ಸಿ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಹಲ್ಚಲ್ ಸೃಷ್ಟಿಸಿದೆ. ಅದರಲ್ಲೂ ಮಾಜಿ ಸಚಿವ ಎಸ್ಟಿ ಸೋಮಶೇಖರ್ ವಾಪಸ್ ಕಾಂಗ್ರೆಸ್ಗೆ ಬರ್ತಾರೆ ಅನ್ನೋ ಸುದ್ದಿ ಬೆನ್ನಲ್ಲೇ ಅವರ ಕ್ಷೇತ್ರಕ್ಕೆ ಭಾರೀ ಪ್ರಮಾಣದ ಅನುದಾನ ಬಿಡುಗಡೆ ಸದ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನಾವೇನು ಒತ್ತಡದ ಮೇಲೆ ಯಾರನ್ನೂ ಸೆಳೆಯುತ್ತಿಲ್ಲ, ಆಪರೇಷನ್ ಹಸ್ತ ಮಾಡುತ್ತಿಲ್ಲ. ಆದರೂ ಕೆಲವರು ನಮ್ಮ ಪಕ್ಷಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ. ಯಾರನ್ನ ತೆಗೆದುಕೊಳ್ಳಬೇಕೆಂಬುದನ್ನ ಸಿಎಂ, ಡಿಸಿಎಂ ಅಂತಿಮ ತೀರ್ಮಾನ ಮಾಡುತ್ತಾರೆ ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ