/newsfirstlive-kannada/media/post_attachments/wp-content/uploads/2023/11/accident-80.jpg)
ಬೆಳಗಾವಿ: ಚಲಿಸುತ್ತಿದ್ದ ಬಸ್​ನಿಂದ ಏಕಾಏಕಿ ವಿದ್ಯಾರ್ಥಿನಿ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆ ಚಿಕ್ಕೋಡಿಯ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ.
17 ವರ್ಷದ ವಿದ್ಯಾರ್ಥಿನಿ ಸಂಜನಾ ರಾಯಭಾಗದಿಂದ ಚಿಕ್ಕೋಡಿಗೆ ಆಗಮಿಸುತ್ತಿದ್ದ ಬಸ್​​ನಿಂದ ಇಳಿಯಲು ಮುಂದಾಗಿದ್ದಾಳೆ. ಈ ವೇಳೆ ಆಯತಪ್ಪಿ ಬಸ್​​ನಿಂದ ಕೆಳಗೆ ಬಿದ್ದಿದ್ದಾಳೆ. ಪರಿಣಾಮ ವಿದ್ಯಾರ್ಥಿನಿಯ ತಲೆಗೆ ಗಂಭೀರ ಪೆಟ್ಟಾಗಿದೆ. ಕೂಡಲೇ ಅಲ್ಲೇ ನಿಂತಿದ್ದ ಸ್ಥಳೀಯರು ದೌಡಾಯಿಸಿ ಆಕೆಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯು ನಂದಿಕುರಳಿ ನಿವಾಸಿ. ಇನ್ನು, ವಿದ್ಯಾರ್ಥಿನಿ ಕೆಳಗೆ ಬಿಳುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us