newsfirstkannada.com

ಲಂಡನ್​ನಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಚಾಕು ಇರಿದು ಕೊಂದ ಹಂತಕರು

Share :

15-06-2023

  ಭಾರತೀಯ ವಿದ್ಯಾರ್ಥಿಗಳ ಮೇಲೆ ತೀವ್ರ ಹಲ್ಲೆ, ಯುವತಿ ಸಾವು!

  ಇಬ್ಬರು ಆರೋಪಿಗಳನ್ನು ಅರೆಸ್ಟ್​ ಮಾಡಿದ ಲಂಡನ್​​ ಪೊಲೀಸರು

  ಉನ್ನತ ವ್ಯಾಸಂಗಕ್ಕಾಗಿ ಲಂಡನ್​ಗೆ ತೆರಳಿದ್ದ ವಿದ್ಯಾರ್ಥಿನಿಯರು

ಲಂಡನ್​: ಇಬ್ಬರು ದುಷ್ಕರ್ಮಿಗಳ ಚಾಕು ಇರಿತಕ್ಕೆ ಹೈದರಾಬಾದ್​ನ ವಿದ್ಯಾರ್ಥಿನಿಯೊಬ್ಬರು ಬಲಿಯಾದ ದುರ್ಘಟನೆ ಲಂಡನ್​ನ ವೆಂಬ್ಲಿಯ ನೀಲ್ಡ್ ಕ್ರೆಸೆಂಟ್ ಪ್ರದೇಶದಲ್ಲಿ ನಡೆದಿದೆ. ಇನ್ನೊಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೈದರಾಬಾದ್​ನ ಚಂಪಾಪೇಟ್ ನಿವಾಸಿ ಕೊಂತಂ ತೇಜಸ್ವಿನಿ ರೆಡ್ಡಿ ಚಾಕು ಇರಿತದಿಂದ ಮೃತಪಟ್ಟ ದುರ್ದೈವಿ. ತೇಜಸ್ವಿನಿ ಉನ್ನತ ವ್ಯಾಸಂಗ ಮಾಡಲೆಂದು ಕಳೆದ ಮಾರ್ಚ್​ನಲ್ಲಿ ಲಂಡನ್​ಗೆ ತೆರಳಿದ್ದರು. ಅಲ್ಲಿ ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ವೆಂಬ್ಲಿಯ ನೀಲ್ಡ್ ಕ್ರೆಸೆಂಟ್ ಪ್ರದೇಶದಲ್ಲಿ ಅವರು ಗೆಳತಿಯರೊಂದಿಗೆ ವಾಸವಾಗಿದ್ದರು. ಈ ವೇಳೆ ಇಬ್ಬರು ಆರೋಪಿಗಳು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ತೇಜಸ್ವಿನಿ ಗೆಳತಿ ಅಖಿಲಾ ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಸಂಬಂಧ ಅಲ್ಲಿನ ಪೊಲೀಸರು 23 ಮತ್ತು 24 ವರ್ಷದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗುತ್ತಿದೆ. ಗಾಯಗೊಂಡ ಅಖಿಲಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಂಡನ್​ನಲ್ಲಿ ಭಾರತೀಯ ವಿದ್ಯಾರ್ಥಿನಿಗೆ ಚಾಕು ಇರಿದು ಕೊಂದ ಹಂತಕರು

https://newsfirstlive.com/wp-content/uploads/2023/06/AP_Kontham_Tejaswini.jpg

Load More