ಉತ್ತರ ಪ್ರದೇಶದಲ್ಲಿ ಹೇಯ ಕೃತ್ಯ
ಮಾತಿಗೆ ಮಾತು ಬೆಳೆದು ಜಗಳ..!
ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ
ಲಕ್ನೋ: ಉತ್ತರ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಸಂಭವಿಸಿದೆ. 10ನೇ ತರಗತಿ ವಿದ್ಯಾರ್ಥಿಯೋರ್ವನ ಕೊಲೆ ಸಹಪಾಠಿಯಿಂದಲೇ ನಡೆದು ಹೋಗಿದೆ.
ಹೌದು, ಕಾನ್ಪುರದ ಪ್ರಯಾಗ್ ವಿದ್ಯಾಮಂದಿರ ಇಂಟರ್ ಕಾಲೇಜಿನಲ್ಲಿ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಜಗಳ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಹಪಾಠಿಯೋರ್ವ ತನ್ನ ಸ್ನೇಹಿತನ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಸದ್ಯ ಕಾನ್ಪುರದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜತೆಗೆ ಕೊಲೆಗೈದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಯಾವ ಕಾರಣಕ್ಕೆ ಜಗಳ ನಡೆದಿದ್ದು, ಕೊಲೆ ಮಾಡಲು ಅಸಲಿ ಕಾರಣವೇನು ಎಂಬ ವಿಷಯ ವಿಚಾರಣೆಯಲ್ಲಿ ಬಹಿರಂಗವಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ