newsfirstkannada.com

ತ್ರಿಕೋನ ಪ್ರೇಮಕಥೆ; ಹುಡುಗಿ ಹಿಂದೆ ಬಿದ್ದವನೇ ಬೇರೆ; ಬೀದಿ ಹೆಣವಾಗಿದ್ದು ಮಾತ್ರ ಅಮಾಯಕ

Share :

28-07-2023

  ಹೆಣ್ಣೂರಿನಲ್ಲಿ ಕಾಲೇಜು ವಿದ್ಯಾರ್ಥಿ ಅನುಮಾನಾಸ್ಪದ ಸಾವು

  ಕಾಟ ಕೊಟ್ಟವನನ್ನು ಬಿಟ್ಟು ಗೆಳೆಯನನ್ನು ಕೊಂದ ಹಂತಕರು..!

  ಕೊಲೆ ಮಾಡಿ ಪರಾರಿಯಾಗಿದ್ದ 6 ಆರೋಪಿಗಳು ಪೊಲೀಸ್​ ಬಲೆಗೆ

ಬೆಂಗಳೂರು: ಇದು ಖಾಸಗಿ ಕಾಲೇಜು ವಿದ್ಯಾರ್ಥಿಯೊಬ್ಬನ ಟ್ರೈ ಆ್ಯಂಗಲ್ ಲವ್ ಸ್ಟೋರಿ. ಬೇಡ ಅಂದ್ರೂ ಯುವತಿ ಹಿಂದೆ ಬಿದ್ದಿದ್ದ ವಿಚಾರ ಗ್ಯಾಂಗ್ ಒಂದಕ್ಕೆ ಗೊತ್ತಾಗಿತ್ತು. ಮೊದಲೇ ರಕ್ತದ ಕಲೆ ಕೈಗೆ ಹಚ್ಚಿಕೊಂಡಿದ್ದ ಆ ಯುವಕರ ತಂಡ ಅಮಾಯಕನೊಬ್ಬನನ್ನ ಕೊಲೆ ಮಾಡಿದೆ.

ಟ್ರೈ ಆ್ಯಂಗಲ್ ಲವ್ ಸ್ಟೋರಿಯಲ್ಲಿ ವಿದ್ಯಾರ್ಥಿ ಕೊಲೆ…!

ವಿಪರ್ಯಾಸ ಏನೆಂದರೆ ಟ್ರೈ ಆ್ಯಂಗಲ್ ಲವ್ ಸ್ಟೋರಿ ವಿಚಾರಕ್ಕೆ ಸಂಬಂಧವೇ ಇಲ್ಲದ ಅಮಾಯಕನೊಬ್ಬನ ಕೊಲೆಯಾಗಿದೆ. ಸದ್ಯ ಈ ಪ್ರಕರಣ ಸಂಬಂಧ ಆರು ಜನ ಹಂತಕರನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಕೊಲೆ ಮಾಡಿದ ಆರೋಪಿಗಳು. ಕೊಲೆ ಕೇಸ್​ನ ರೂವಾರಿ ಶ್ರೀಕಾಂತ್ ಎನ್ನಲಾಗಿದೆ.

ಆರೋಪಿ ಶ್ರೀಕಾಂತ್ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಅದೇ ಯುವತಿಯ ಹಿಂದೆ ಕೊಲೆಯಾದ ಮಾರ್ವೇಶ್​ನ ಗೆಳೆಯನೊಬ್ಬ ಬಿದ್ದಿದ್ದ. ಪ್ರೀತ್ಸು ಪ್ರೀತ್ಸು ಅಂತಾ ಕಾಟ ಕೊಡುತ್ತಿದ್ದನಂತೆ. ಈ ವಿಚಾರ ಯಾವಾಗ ಶ್ರೀಕಾಂತ್ ಕಿವಿಗೆ ಬಿತ್ತೋ ತನ್ನ ಹುಡುಗಿ ಹಿಂದೆ ಬಿದ್ದವನ ಹುಡುಕಾಟಕ್ಕೆ ನಿಂತಿದ್ದ. ಆಗ ಸಿಕ್ಕಿದ್ದು ಅವನ ಗೆಳೆಯ ಮಾರ್ವೇಶ್. ತನ್ನ ಕಾಲೇಜು ಬಳಿ ಮೊನ್ನೆ ಮಧ್ಯಾಹ್ನ ಟೀ ಕುಡಿಯುತ್ತಿದ್ದವನ ಬಳಿ ಗೆಳೆಯರಾದ ಆರೋಪಿ ಡ್ಯಾನಿಯಲ್ ಮತ್ತು ರಾಕಿ ಎಂಬಾತನನ್ನು ಕಳುಹಿಸಿದ್ದ. ಟೀ ಕುಡಿಯೋಕೆ ನಿಂತಿದ್ದವನನ್ನು ಮಾತಾಡಬೇಕು ಎಂದು ಕರೆದೊಯ್ದಿದ್ದ. ಕೊನೆಗೆ ಕಾರ್ತಿಕ್ ಅಂಡ್​​ ಗ್ಯಾಂಗ್​​ಗೆ ಆತನನ್ನು ಒಪ್ಪಿಸಿದ್ದಾರೆ. ಈ ಗ್ಯಾಂಗ್ ಮಾರ್ವೇಶ್​​ನಿಗೆ ನಿನ್ನ ಗೆಳೆಯ ಎಲ್ಲಿದ್ದಾನೆ ಎಂದು ಹೇಳು ಅಂತಾ ಹೊಡೆದಿದ್ದಾರೆ. ಆದರೆ ಮಾರ್ವೇಶ್​​ ಯಾವುದೇ ವಿಚಾರವನ್ನು ಬಾಯಿಬಿಟ್ಟಿಲ್ಲ ಎಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಕಾರ್ತಿಕ್, ನೆಲ್ಸನ್, ಅಭಿಶೇಕ್ ಈ ಮೂವರೂ ಕಾಲೇಜ್ ಡ್ರಾಪೌಟ್. ಬಿಕಾಂ ಓದುತ್ತಿದ್ದವರ ಕೈಗೆ ಅದಾಗಲೇ ರಕ್ತ ಹತ್ತಿತ್ತು. ಕೊಲೆಯತ್ನ ಕೇಸ್​ಗಳಲ್ಲಿ ಭಾಗಿಯಾಗಿದ್ದರು. ಕಾರ್ತಿಕ್ ಮೇಲೆ ರಾಮಮೂರ್ತಿ ನಗರ ಸ್ಟೇಷನ್​ನಲ್ಲಿ ರೌಡಿಶೀಟರ್​​​ ಕೇಸ್​​ ಕೂಡ ಓಪನ್ ಆಗಿತ್ತು. ಶ್ರೀಕಾಂತ್ ತನ್ನ ಲವರ್ ಹಿಂದೆ ಬೇರೊಬ್ಬ ಬಿದ್ದಿದ್ದ ವಿಚಾರ ಇವರ ಕಿವಿಗೆ ಹಾಕಿದ್ದ. ಆತ ಸಿಗದೆ ಮಾರ್ವೇಶ್​ನನ್ನ ಕರೆಸಲು ಯತ್ನಿಸಿದ್ದರು. ಆದ್ರೆ ಮಾರ್ವೇಶ್ ಕರೆ ಮಾಡಿದಾಗ ಆತನ ಗೆಳೆಯ ಕರೆ ರಿಸೀವ್ ಮಾಡಿರಲಿಲ್ಲ. ನಂತರ ಪೈಪ್​ನಿಂದ ಹೊಡೆತ ಜೋರು ಮಾಡಿದ್ದವರು ಕೊಂದೇ ಬಿಟ್ಟಿದ್ದಾರೆ.

ಸದ್ಯ ಅಮಾಯಕನೊಬ್ಬನನ್ನ ಕೊಲೆ ಮಾಡಿದ್ದ ಎಲ್ಲಾ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದಿದ್ದಾರೆ. ಕೇಸ್ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದರಲ್ಲಿ ಕೊಲೆಯಾದ ಮಾರ್ವೇಶ್ ಘಟನೆ ಮಾತ್ರ ದುರಂತ. ಯಾರದ್ದೋ ತಪ್ಪು ಮತ್ಯಾರಿಗೋ ಶಿಕ್ಷೆ ಅಂತಾ ಹಂತಕರು ಅಮಾಯಕನನ್ನ ಕೊಂದಿರೋದು ಬೇಸರದ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತ್ರಿಕೋನ ಪ್ರೇಮಕಥೆ; ಹುಡುಗಿ ಹಿಂದೆ ಬಿದ್ದವನೇ ಬೇರೆ; ಬೀದಿ ಹೆಣವಾಗಿದ್ದು ಮಾತ್ರ ಅಮಾಯಕ

https://newsfirstlive.com/wp-content/uploads/2023/07/deatgh-1.jpg

Load More