/newsfirstlive-kannada/media/post_attachments/wp-content/uploads/2023/11/cm-siddu.jpg)
ಕರ್ನಾಟಕ ಮಾಧ್ಯಮ ಇತಿಹಾಸದಲ್ಲೇ ವಿನೂತನ ಕಾರ್ಯಕ್ರಮವನ್ನ ನ್ಯೂಸ್ ಫಸ್ಟ್ ಕನ್ನಡ ಚಾನೆಲ್ ಆಯೋಜಿಸಿದೆ. ‘ಕನ್ನಡ ರಾಮಯ್ಯ’ ಎಂಬ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿದ್ದರು. ಶಾಲಾ ವಿದ್ಯಾರ್ಥಿಗಳ ಸಂವಾದದಲ್ಲಿ ಮಕ್ಕಳು ಕೇಳಿದ ಹಲವು ಪ್ರಶ್ನೆಗಳಿಗೆ ಸಿಎಂ ನೇರವಾಗಿ ಉತ್ತರಿಸಿದ್ದಾರೆ.
ಮಕ್ಕಳ ಸಂವಾದದಲ್ಲಿ ವಿದ್ಯಾರ್ಥಿನಿ ಅನುಷಾ ಹಿರೇಮಠ್​, ಸಿಎಂ ಸಿದ್ದರಾಮಯ್ಯನವರಿಗೆ ಪ್ರಶ್ನೆ ಕೇಳಿದ್ದಾಳೆ. ಪ್ರತಿ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಆಚರಿಸುತ್ತೇವೆ. ಅದೇ ರೀತಿ ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು ಆಚರಿಸಬಹುದಲ್ಲವೇ. ಇದರಿಂದ ಕನ್ನಡದ ಪ್ರತಿಭೆಗಳು ಹೊರಗಡೆ ಬರುತ್ತವೆ ಎಂದು ಹೇಳುತ್ತಾಳೆ. ಆಗ ಇದಕ್ಕೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯನವರು, ನಿನ್ನ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳುತ್ತಾರೆ.
ಎರಡನೇದಾಗಿ ಸೃಷ್ಟಿ ಬನ್ನಟ್ಟಿ ಎಂಬ ವಿದ್ಯಾರ್ಥಿನಿಯು ಸಿಎಂ ಸಿದ್ದರಾಮಯ್ಯನವರಿಗೆ ಈ ರೀತಿ ಪ್ರಶ್ನೆ ಮಾಡಿದ್ದಾರೆ. ನೀವು 50 ವರ್ಷಗಳ ಹಿಂದೆ ಕಲಿತಿರುವ ಕನ್ನಡ ವ್ಯಾಕರಣ ಅಂಶ ಇಂದಿಗೂ ಸಹ ನಿಮಗೆ ನೆನಪಿದೆ. ಅದು ಹೇಗೆ ಸಾಧ್ಯ? ನಿಮ್ಮಂತೆ ನಾವು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದರೇ ಏನು ಮಾಡಬೇಕು ಎಂದು ಕೇಳುತ್ತಾಳೆ. ಅದಕ್ಕೆ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯನವರು, ಮೊದಲು ನೀವು ಕನ್ನಡತಿ ಆಗಬೇಕು. ಕನ್ನಡ ಮಾಧ್ಯಮದಲ್ಲೇ ಓದಬೇಕು. ನಾನು ಕೂಡ ಕನ್ನಡ ಮಾಧ್ಯಮದಲ್ಲಿ ಓದಿದವನು. ಆಗ ನಾನು ಇಡೀ ಶಾಲೆಗೆ 10ನೇ ತರಗತಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದೆ. ಇಂಗ್ಲಿಷ್​​ನಲ್ಲಿ ಓದುತ್ತಿದ್ದಾಗ 2ನೇ ಕ್ಲಾಸ್​ ಬಂದೆ ಎಂದು ಹೇಳುತ್ತಾ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.
/newsfirstlive-kannada/media/post_attachments/wp-content/uploads/2023/11/cm-siddu-1.jpg)
ಎಸ್.ಕೆ ಚಿರಾಗ್ ಎಂಬ ವಿದ್ಯಾರ್ಥಿ ಭವಿಷ್ಯದಲ್ಲಿ ನಿಮಗೊಂದು ಅವಕಾಶ ಸಿಕ್ಕರೆ ನೀವು ಪ್ರಧಾನ ಮಂತ್ರಿಯಾಗುವುದಕ್ಕೆ ಇಷ್ಟ ಪಡುತ್ತೀರಾ ಸರ್​​? ಎಂಬ ಪ್ರಶ್ನೆಯನ್ನು ಕೇಳಿದ್ದಾನೆ. ಅದಕ್ಕೆ ಉತ್ತರ ಕೊಟ್ಟ ಸಿದ್ದರಾಮಯ್ಯನವರು, ‘ನಾನು ಸ್ಪಷ್ಟವಾಗಿ ಮುಖ್ಯಮಂತ್ರಿಯಾಗಿ ಕರ್ನಾಟಕ ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತು ಬಿಟ್ಟೆ. ಈಗ ಅದಕ್ಕೆ ತೀರ್ಮಾನ ಮಾಡಿದ್ದೀನಿ ರಾಷ್ಟ್ರದ ರಾಜಕೀಯಕ್ಕೆ ಹೋಗಬಾರದು ಅಂತ. ಕರ್ನಾಟಕ ರಾಜಕೀಯದಲ್ಲೇ ಇರುವುದರಿಂದ ದೇಶದ ಪ್ರಧಾನಿಯಾಗುವ ಆ ಕನಸ್ಸನ್ನೇ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us