newsfirstkannada.com

ಮಕ್ಕಳನ್ನು ಶಾಲೆಗೆ ಕಳಿಸೋಕು ಭಯ.. ಗೃಹ ಮಂತ್ರಿಗಳ ಕದ ತಟ್ಟಿದ ಪೋಷಕರು; ಕಾರಣವೇನು?

Share :

03-09-2023

  ಖಾಸಗಿ ಶಾಲಾ ಒಕ್ಕೂಟಗಳಿಗೆ ಹೊಸ ತಲೆ ನೋವು ಶುರು

  ಗೃಹ ಸಚಿವರ ಬಳಿ ಪತ್ರದ ಮೂಲಕ ಮನವಿ ಪೋಷಕರು!

  ಶಾಲಾ ಆಡಳಿತ ಮಂಡಳಿಗಳ ಮುಂದೆ ಪಾಲಕರು ಅಳಲು

ಬೆಂಗಳೂರು: ಪೋಷಕರಿಗೆ ಹಾಗೂ ಶಿಕ್ಷಕರಿಗೆ ಖಾಸಗಿ ಶಾಲಾ ಒಕ್ಕೂಟಗಳಿಗೆ ಹೊಸ ತಲೆ ನೋವು ಶುರುವಾಗಿದೆ. ಈ ನೋವನ್ನ ನಿವಾರಿಸಿ ಅಂತ ಖಾಸಗಿ ಶಾಲೆಗಳ ಒಕ್ಕೂಟ ಗೃಹ ಸಚಿವರ ಬಳಿ ಪತ್ರದ ಮೂಲಕ ಮನವಿ ಮಾಡುತ್ತಿದೆ. ಅಷ್ಟಕ್ಕೂ ಮಕ್ಕಳ ವಿಚಾರವಾಗಿ ಇವರಿಗೆಲ್ಲಾ ಕಾಡುತ್ತಿರುವ ಆ ಸಮಸ್ಯೆ, ಆತಂಕ ಏನು ಎಂಬ ಪ್ರಶ್ನೆ ಕಾಡುತ್ತಿದೆ.

ನಗರದಲ್ಲಿ ಈಗ ಬಾರ್ ಅಂಡ್​​ ರೆಸ್ಟೋರೆಂಟ್, ಹುಕ್ಕಾ ಬಾರ್​ಗಳಲ್ಲಿ ಅಪ್ರಾಪ್ತರದ್ದೇ ಹವಾ ಶುರುವಾಗಿದೆ. ಮಕ್ಕಳ ಹಾವಳಿ ಮಧ್ಯೆ ವಯಸ್ಕರನ್ನು ದುರ್ಬೀನು ಹಾಕಿ ಹುಡುಕುವ ಪರಿಸ್ಥಿತಿ ಇದ್ಯಂತೆ. ಅಪ್ರಾಪ್ತ ವಯಸ್ಸಿನಲ್ಲಿ ಮಕ್ಕಳು ದುಶ್ಚಟಗಳ ದಾಸರಾದರೇ ಮುಂದೆ ಇವರ ಭವಿಷ್ಯದ ಕತೆ ಏನಪ್ಪಾ ಅಂತ ಪೋಷಕರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಇದರ ಜೊತೆಗೆ ಶಿಕ್ಷಕರ ಬಳಿ ಮಕ್ಕಳಿಗೆ ಬುದ್ದಿ ಹೇಳುವಂತೆ ಮನವಿ ಮಾಡಿ ಕೊಳ್ಳುತ್ತಿದ್ದಾರಂತೆ. ಆದರೆ ಶಿಕ್ಷಕರು ಮಕ್ಕಳ ಖಾಸಗಿ ಬದುಕಿನಲ್ಲಿ ಎಂಟ್ರಿ ಕೊಟ್ಟು ಬುದ್ದಿ ಮಾತು ಹೇಳಿದ್ರೆ ಕೇಳುವ ಯುಗವಾ ಇದು? ನಮ್ಮ ನಿಯಂತ್ರಣಕ್ಕೂ ಮಕ್ಕಳು ಸಿಕ್ತಿಲ್ಲ ಅಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಸಲುವಾಗಿ ಈಗ ಕ್ಯಾಮ್ಸ್ ಗೃಹ ಸಚಿವರ ಬಳಿ ಪತ್ರದ ಮೂಲಕ ಮನವಿ ಮಾಡಿದೆ.

ಗೃಹ ಸಚಿವರ ಬಳಿ ಕೊಟ್ಟ ಮನವಿ ಪತ್ರದಲ್ಲಿ ಏನಿದೆ?

ಅಪ್ರಾಪ್ತ ಬಾಲಕಿಯರು, ಬಾಲಕರು ನಗರದ ಪಬ್‌, ರೆಸ್ಟೋರೆಂಟ್‌, ಹುಕ್ಕಾ ಜಾಯಿಂಟ್ಸ್‌, ನೈಟ್‌ ಔಟ್‌ ಪಾರ್ಟಿಗಳಿಗೆ ಮುಕ್ತವಾಗಿ ಹೋಗುತ್ತಿದ್ದಾರೆ. ಈ ಬಗ್ಗೆ ಪಾಲಕರು ಶಾಲಾ ಆಡಳಿತ ಮಂಡಳಿಗಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಲ್ಲಿ ಯಾರನ್ನೂ ಸಹ ದೂಷಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವ ಪಬ್‌, ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟವು ಗೃಹ ಸಚಿವರಲ್ಲಿ ಒತ್ತಾಯಿಸಿದೆ. ಶಾಲಾ-ಕಾಲೇಜುಗಳಿಂದ 100 ಮೀಟರ್​ ಆಸುಪಾಸಿನಲ್ಲಿ ಯಾವುದೇ ತಂಬಾಕು, ಮದ್ಯ ಮಾರಾಟ ಮಾಡಬಾರದೆಂಬ ನಿಯಮವೇ ಇದೆ. ಆದರೆ, ಇದ್ಯಾವುದಕ್ಕೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು, ಹುಕ್ಕಾಬಾರ್‌ಗಳ ಮಾಲೀಕರು ಕ್ಯಾರೇ ಅಂತಿಲ್ಲ. ಇವರಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಮುಖ ಗಿರಾಕಿಗಳು ಅನ್ನೋ ತರ ಇದ್ದಾರೆ ಅನ್ನೋದು ಕೂಡ ಮತ್ತೊಂದು ಆರೋಪ. ಇವುಗಳ ಕಡಿವಾಣ ಹಾಕಬೇಕು ಅಂತ ಗೃಹ ಸಚಿವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ, ಸರ್ಕಾರವೇ ತಂದಿರೋ ನಿಯಮ ಖಾಲಿ ಹಾಳೆ ಗಳಿಗಷ್ಟೇ ಸೀಮಿತವಾಗ್ತಿದ್ಯಾ ಅನ್ನೋ ಪ್ರಶ್ನೆ ಇದೆ. ಯಾಕಂದ್ರೆ ಅಬಕಾರಿ ನಿಯಮದ ಪ್ರಕಾರ ಮದ್ಯ ಖರೀದಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಆದರೆ, ಇದ್ಯಾವುದನ್ನು ಲೆಕ್ಕಿಸದೆಯೇ ಶಾಲಾ- ಕಾಲೇಜು ಮಕ್ಕಳಿಗೆ ಕೆಲ ಪಬ್‌, ಬಾರ್‌ಗಳಲ್ಲಿ ಮದ್ಯ ಒದಗಿಸಲಾಗುತ್ತಿದೆ. ರೂಲ್ ಮಾಡುವವರಿಗೆ ರೂಲ್ ಫಾಲೋ ಆಗೋ ಹಾಗೆ ನೋಡಿ ಕೊಳ್ಳೋಕೆ ಏನು ಕಷ್ಟ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ರಾಜ್ಯದಲ್ಲಿ ಸುಮಾರು 17,367 ಖಾಸಗಿ ಶಾಲೆಗಳಲ್ಲಿ 45.84 ಲಕ್ಷ ವಿದ್ಯಾರ್ಥಿಗಳು ಮತ್ತು 3,565 ಪಿಯು ಕಾಲೇಜುಗಳಲ್ಲಿ 6.73 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಪ್ರಾಪ್ತ ಮಕ್ಕಳು ಈ ತರಹ ದುಶ್ಚಟಗಳಿಗೆ ವಾಲುತ್ತಾ ಹೋದರೆ ಮುಂದಿನ ಶೈಕ್ಷಣಿಕ ಜೀವನ ಹಳಿ ತಪ್ಪುವ ಸಾಧ್ಯತೆ ಇರುವುದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬಾರ್ ಪಬ್​ಗಳಲ್ಲಿ ಎಂಟ್ರಿಗೆ ಕಠಿಣವಾದ ನಿಯಮ ಜಾರಿಗೆ ಆಗ್ರಹಿಸಲಾಗಿದ್ದು ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಕ್ರಮ ಕೈ ಗೊಳ್ಳುತ್ತಾರೆ ಅಂತ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಕ್ಕಳನ್ನು ಶಾಲೆಗೆ ಕಳಿಸೋಕು ಭಯ.. ಗೃಹ ಮಂತ್ರಿಗಳ ಕದ ತಟ್ಟಿದ ಪೋಷಕರು; ಕಾರಣವೇನು?

https://newsfirstlive.com/wp-content/uploads/2023/09/bng-pub-3.jpg

Load More