newsfirstkannada.com

ಶಾಲೆಗೆ ಹೋಗೋ ಹೆಣ್ಣುಮಕ್ಕಳ ಬಗ್ಗೆ ಹುಷಾರ್​​.. ಪೋಷಕರು ಓದಲೇಬೇಕಾದ ಸ್ಟೋರಿ ಇದು!

Share :

19-09-2023

    ವಿದ್ಯಾರ್ಥಿಗಳ ವರ್ತನೆಯಿಂದ ಪೋಷಕರಲ್ಲಿ ತೀವ್ರ ಕಂಗಾಲು

    ಶಾಲೆಗೆ ಹೋಗೋ ಹೆಣ್ಣುಮಕ್ಕಳ ಬಗ್ಗೆ ಪೋಷಕರು ಗಮನಹರಿಸಿ!

    ಎಲ್ಲಾ ಪೋಷಕರು ಓದಲೇಬೇಕಾದ ಸ್ಟೋರಿ ಇದು; ಯಾಕೆ ಗೊತ್ತಾ?

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯಲ್ಲೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯಲ್ಲಿ 14 ವಿದ್ಯಾರ್ಥಿನಿಯರು ಒಂದೇ ರೀತಿ ಕೈ ಕೊಯ್ದುಕೊಂಡಿರುವುದು ಆತಂಕವನ್ನು ಮೂಡಿಸಿದೆ. ಆನ್​ಲೈನ್​ ಗೇಮ್​ ಚಟಕ್ಕೆ ಇಂಥ ಕೃತ್ಯ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೋಷಕರು ಕಂಗಾಲಾಗಿದ್ದಾರೆ.

ಒಂದೇ ರೀತಿ ಕೈ ಕೊಯ್ದುಕೊಂಡಿರುವ 14 ವಿದ್ಯಾರ್ಥಿನಿಯರು

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಖಾಸಗಿ ಶಾಲೆಯಲ್ಲಿ ಅದು ಒಬ್ಬರು ಇಬ್ಬರಲ್ಲ. 14 ವಿದ್ಯಾರ್ಥಿನಿಯರು ಕೈಕೊಯ್ದುಕೊಂಡಿದ್ದಾರೆ. ಕಾರಣ ನಿಗೂಢವಾಗಿದ್ದು, ಆತಂಕ ಮೂಡಿಸಿದೆ.

ಖಾಸಗಿ ಶಾಲೆಯ 9-10ನೇ ತರಗತಿಯ ವಿದ್ಯಾರ್ಥಿನಿಯರು ತಮ್ಮ ಕೈಯನ್ನು ಗೀಚಿದ ರೀತಿಯಲ್ಲಿ ಕೈ ಕೊಯ್ದುಕೊಂಡಿದ್ದಾರೆ. ಎಲ್ಲ ವಿದ್ಯಾರ್ಥಿನಿಯರು ಕೂಡ ಒಂದೇ ರೀತಿ ಎಡಗೈ ತೋಳಿನ ಕೆಳಭಾಗದಲ್ಲಿ ಕೊಯ್ದುಕೊಂಡಿದ್ದು, ಈ ಬೆಳವಣಿಗೆಯಿಂದ ಪೋಷಕರು ಆತಂಕಗೊಂಡಿದ್ದಾರೆ. ವಿದ್ಯಾರ್ಥಿನಿಯರು ಶಾಲೆಯಲ್ಲೇ ಹೀಗೆ ಮಾಡಿಕೊಂಡಿದ್ದಾರೋ ಅಥವಾ ಮನೆಯಲ್ಲಿ ಕೈಕೊಯ್ದುಕೊಂಡಿದ್ದಾರೋ ಗೊತ್ತಿಲ್ಲ. ಈ ಘಟ‌ನೆ ಬೆಳಕಿಗೆ ಬರುತ್ತಿದ್ದಂತೆ ಕೂಡಲೆ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರು ಪಾಲಕರ ಸಭೆ ನಡೆಸಿ, ಪೋಷಕರಿಗೆ ವಿಷ್ಯ ಮುಟ್ಟಿಸಿತ್ತಂತೆ. ಇನ್ನು ಮುಖ್ಯೋಪಾಧ್ಯಾಯರು ಕೂಡ ಗಾಯ ಮಾಡಿಕೊಂಡಿರುವ ವಿದ್ಯಾರ್ಥಿನಿಯರನ್ನು ವಿಚಾರಿಸಿದ್ದು, ಒಬ್ಬೊಬ್ಬ ವಿದ್ಯಾರ್ಥಿನಿಯರು ಒಂದೊಂದು ಕಾರಣ ನೀಡಿದ್ದಾರಂತೆ. ಸದ್ಯ ಅಸಲಿ ಕಾರಣವನ್ನು ತಿಳಿಯಲು ವಿದ್ಯಾರ್ಥಿನಿಯರ ಕೌನ್ಸಿಲಿಂಗ್​ಗೆ ನಿರ್ಧರಿಸಲಾಗಿದೆ.

ಆನ್​​ಲೈನ್ ಗೇಮ್‌ ಗೀಳಿನಿಂದ ಕೈ ಕೊಯ್ದುಕೊಂಡಿರುವ ಶಂಕೆ

ಇನ್ನು ವಿದ್ಯಾರ್ಥಿನಿಯರು ಆನ್​​ಲೈನ್ ಗೇಮ್‌ ಚಟಕ್ಕೆ ಬಿದ್ದು ಕೈ ಕೊಯ್ದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ದಾಂಡೇಲಿ ಪೊಲೀಸ್ ಠಾಣಾಧಿಕಾರಿಯ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಘಟನೆ ಬಗ್ಗೆ ಕೆಲ ಸಂಘಟನೆಗಳು ಅನುಮಾನ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಒಟ್ಟಾರೆ. ವಿದ್ಯಾರ್ಥಿನಿಯರ ವರ್ತನೆಯಿಂದ ಪಾಲಕರಲ್ಲಿ ಆತಂಕಕ್ಕೆ ಮನೆ ಮಾಡಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಅನುಮಾನ, ಆತಂಕಗಳಿಗೂ ಬ್ರೇಕ್​ ಹಾಕಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಾಲೆಗೆ ಹೋಗೋ ಹೆಣ್ಣುಮಕ್ಕಳ ಬಗ್ಗೆ ಹುಷಾರ್​​.. ಪೋಷಕರು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/09/Students_UK.jpg

Load More