ಪದವಿ ಪರೀಕ್ಷೆಗಾಗಿ ನೆರೆ ನೀರಿನಲ್ಲಿ ಕಾಲೇಜಿಗೆ ಹೋದ ವಿದ್ಯಾರ್ಥಿಗಳು
ಮೊಣಕಾಲಷ್ಟು ತುಂಬಿದ ನೀರಿನಲ್ಲಿ ವಿದ್ಯಾರ್ಥಿಗಳ ಸಂಚಾರ
ರಸ್ತೆ ತುಂಬ ನಿಂತ ನೆರೆ ನೀರು, ದಾರಿ ಕಾಣದೆ ಪರದಾಡಿದ ವಿದ್ಯಾರ್ಥಿಗಳು
ಮಂಗಳೂರು: ನಿರಂತರ ಮಳೆಯ ಹಿನ್ನೆಲೆ ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಮತ್ತೊಂದೆಡೆ ಜನ ಜೀವನ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೆಲವು ಜಿಲ್ಲೆಗಳಿಗೆ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿದ್ಯಾರ್ಥಿಗಳಿಂದು ಅಪಾಯಕಾರಿ ನೆರೆ ನೀರಿನಲ್ಲೇ ಪರೀಕ್ಷೆಗೆ ಬರೆಯಲು ಕಾಲೇಜಿಗೆ ಹೋದ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕುಕ್ಕೆ ಸುಬ್ರಮಣ್ಯದಲ್ಲಿ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಸಂಪೂರ್ಣ ನೀರು ತುಂಬಿದ ರಸ್ತೆಯಲ್ಲಿ ಸಂಚರಿಸಿದ್ದಾರೆ. ಮೊಣಕಾಲಷ್ಟು ನೀರಿದ್ದರೂ ಒದ್ದೆಯಾಗಿಕೊಂಡೇ ಪರೀಕ್ಷೆ ಬರೆಯಲು ಹೋಗಿದ್ದಾರೆ. ರಸ್ತೆ ಪೂರ್ತಿ ನೀರಿನಿಂದ ಆವೃತವಾಗಿದ್ದರೂ ವಿದ್ಯಾರ್ಥಿಗಳ ಕಾಲೇಜು ತೆರಳಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿದ್ಯಾರ್ಥಿಗಳಿಂದು ಅಪಾಯಕಾರಿ ನೆರೆ ನೀರಿನಲ್ಲೇ ಪರೀಕ್ಷೆಗೆ ಬರೆಯಲು ಹೋದ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ.#Subramanya #Kukkesubramanya #RainAlert #KumaradharaRiver pic.twitter.com/Rqk2rdCOzZ
— NewsFirst Kannada (@NewsFirstKan) July 24, 2023
ಇನ್ನು ಮಳೆಯಿಂದಾಗಿ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ಮತ್ತೊಂದಡೆ ಕುಮಾರಧಾರ ಸ್ನಾನಘಟ್ಟವು ನೀರಿನಿಂದ ಮುಳುಗಡೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ