newsfirstkannada.com

ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದ ಸಬ್​ಸ್ಟೂಡ್ ಪ್ಲೇಯರ್ ಯಾರು.. ಫೀಲ್ಡಿಂಗ್​ನಲ್ಲಿ​ ಎಷ್ಟು ಕ್ಯಾಚ್​ ಹಿಡಿದ್ರು ಗೊತ್ತಾ?

Share :

04-09-2023

  ಬ್ಯಾಟ್ಸ್​ಮನ್​ ಮ್ಯಾನ್​ ಆಫ್​ ದಿ ಮ್ಯಾಚ್ ಗೆಲ್ಲೋದು ಸಹಜ

  ಸಬ್​ಸ್ಟೂಡ್ ಪ್ಲೇಯರ್​ ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದರು

  ಕೆಲವು ಆಟಗಾರರು ಮಾತ್ರ ಈ ಸಾಧನೆ ಮಾಡಿದ್ದಾರೆ ಅಷ್ಟೇ!

ಮ್ಯಾನ್ ಆಫ್ ದಿ ಮ್ಯಾಚ್.. ಇದು ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಿಸುವ ಆಟಗಾರನಿಗೆ ನೀಡುವ ಪ್ರಶಸ್ತಿ. ಹೀಗಾಗಿ​ ಬೌಲರ್ ಹಾಗೂ ಬ್ಯಾಟ್ಸ್​ಮನ್​ ಗೆಲ್ಲೋದು ಸಹಜ. ಆದ್ರೆ, ಫೀಲ್ಡಿಂಗ್​ನಿಂದಲೂ ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದಿದ್ದಾರೆ. ಅದ್ಯಾರು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ಫೀಲ್ಡಿಂಗ್‌ಗಾಗಿ ಮ್ಯಾನ್ ಆಫ್ ದಿ ಮ್ಯಾಚ್ ಗೆಲ್ಲೋದು ವಿರಳ. ಇಲ್ಲಿಯವರೆಗೆ ಕೆಲವೇ ಕ್ರಿಕೆಟಿಗರು ಮಾತ್ರ ಇಂಥ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯದ ಸಬ್​ಸ್ಟೂಡ್ ಪ್ಲೇಯರ್​ ಕೂಡ ಮ್ಯಾನ್ ಆಫ್ ದಿ ಮ್ಯಾಚ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆ ಆಟಗಾರ ಬೇಱರು ಅಲ್ಲ. ಜಾಂಟಿ ರೋಡ್ಸ್​.

ಜಾಂಟಿ ರೋಡ್ಸ್

ಹೌದು! ಫಸ್ಟ್​ ಕ್ಲಾಸ್​ ಮ್ಯಾಚ್​ನಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಎಂಟ್ರಿ ನೀಡಿದ್ದ ಜಾಂಟಿ, ಬರೋಬ್ಬರಿ 7 ಕ್ಯಾಚ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ರು. ಫಸ್ಟ್​ ಕ್ಲಾಸ್ ಕ್ರಿಕೆಟ್​ನಲ್ಲಿ ಮಾತ್ರವಲ್ಲ. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲೂ ಈ ಸೌತ್ ಆಫ್ರಿಕನ್ ದಂತಕತೆ ಇಂಥದ್ದೊಂದು ಸಾಧನೆ ಮಾಡಿದ್ದಾರೆ. 1993ರಲ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ ಐದು ಕ್ಯಾಚ್ ಪಡೆದು ಗಮನ ಸೆಳೆದಿದ್ದರು. ಈ ಪಂದ್ಯದಲ್ಲಿ ಜಾಂಟಿ ರೋಡ್ಸ್​ ತೋರಿದ್ದ ಅತ್ಯುತ್ತಮ ಫೀಲ್ಡಿಂಗ್ ಕೌಶಲ್ಯಕ್ಕೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಒಲಿದಿತ್ತು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಮೊಟ್ಟ ಮೊದಲು ಕ್ಷೇತ್ರ ರಕ್ಷಣೆಯಿಂದ ಮ್ಯಾನ್ ಆಫ್ ದಿ ಮ್ಯಾಚ್ ಪಡೆದವರು ವೆಸ್ಟ್ ಇಂಡೀಸ್​ನ ಗಸ್ ಲೋಗಿ ಅನ್ನೋದು ವಿಶೇಷ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದ ಸಬ್​ಸ್ಟೂಡ್ ಪ್ಲೇಯರ್ ಯಾರು.. ಫೀಲ್ಡಿಂಗ್​ನಲ್ಲಿ​ ಎಷ್ಟು ಕ್ಯಾಚ್​ ಹಿಡಿದ್ರು ಗೊತ್ತಾ?

https://newsfirstlive.com/wp-content/uploads/2023/09/Jonty_Rhodes-1.jpg

Load More