newsfirstkannada.com

BIG BREAKING: ಆದಿತ್ಯ L-1 ನೌಕೆ ಯಶಸ್ವಿ ಉಡಾವಣೆ; ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ ವಿಜ್ಞಾನಿಗಳು

Share :

02-09-2023

    PSLV-C57 ರಾಕೆಟ್ ಮೂಲಕ ಆದಿತ್ಯ L-1 ನೌಕೆ ಉಡಾವಣೆ

    ಸೂರ್ಯ ನೆತ್ತಿ ಮೇಲಿರುವ ಕಾಲವನ್ನಾಧರಿಸಿ ಸಮಯ ನಿಗದಿ

    ಆದಿತ್ಯ-L1 ಕಕ್ಷೆ ತಲುಪಿ ಕೆಲಸ ಆರಂಭಿಸಲು 125 ದಿನಗಳು ಬೇಕು

ಉಸಿರು ಬಿಗಿ ಹಿಡಿದು, ಕೌತುಕದ ಕಣ್ಣುಗಳಿಂದ ಕಾಯುತ್ತಿದ್ದ ಅಪರೂಪದ ಕ್ಷಣ ಬಂದೇ ಬಿಟ್ಟಿದೆ. ಭಾರತೀಯರ ಹೆಮ್ಮೆಯ ಇಸ್ರೋ ವಿಜ್ಞಾನಿಗಳು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ. ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ L-1 ನೌಕೆ ಸೂರ್ಯನ ಶಿಕಾರಿಗೆ ಯಶಸ್ವಿಯಾಗಿ ಉಡಾವಣೆಯಾಗಿದೆ.

ಇದನ್ನೂ ಓದಿ: 125 ದಿನ, 15 ಲಕ್ಷ ಕಿ.ಮೀ ದೂರ.. ‘ಸೂರ್ಯ’ ಶಿಕಾರಿಯ ಆದಿತ್ಯ L-1 ಉಡಾವಣೆಯ ಅಂತಿಮ​ ಸಿದ್ಧತೆ ಹೇಗಿದೆ?

ಭೂಮಿ- ಸೂರ್ಯನ ಮಧ್ಯೆ ಇರುವ ಲಾಂಗ್ರೇಜ್ ಪಾಯಿಂಟ್ 1ಗೆ ಈ ರಾಕೆಟ್ ತಲುಪಲಿದೆ. ಆದಿತ್ಯ L-1 ಲಾಂಗ್ರೇಜ್ ಪಾಯಿಂಟ್ 1 ತಲುಪಲು ನಾಲ್ಕು ತಿಂಗಳು ಸಮಯ ಬೇಕು. ಮುಂದಿನ ಐದು ವರ್ಷಗಳ ಕಾಲ ಆದಿತ್ಯ L-1 ಮೂಲಕ ಇಸ್ರೋ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಿದೆ. ಸೂರ್ಯನ ಕಿರಣಗಳು, ಸೂರ್ಯನ ಮೇಲ್ಮೈ, ಸೂರ್ಯನ ಶಾಖ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಇದುವರೆಗೂ ಆಮೆರಿಕಾದ ನಾಸಾ, ಯೂರೋಪ್ ಬಾಹ್ಯಾಕಾಶ ಏಜೆನ್ಸಿಗಳಿಂದ ಸೂರ್ಯನ ಬಗ್ಗೆ ಅಧ್ಯಯನ ನಡೆಸಲಾಗಿದೆ. ಏಳು ಪೇಲೋಡ್‌ಗಳನ್ನು ಹೊತ್ತು ಆದಿತ್ಯ L-1 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.

ಆದಿತ್ಯ L1 ರಾಕೆಟ್‌ನಲ್ಲಿ ಏಳು ಪೇ ಲೋಡ್‌ಗಳಿವೆ

ಪೇ ಲೋಡ್ 1- ವಿಸಿಬಲ್ ಎಮಿಷನ್ ಲೈನ್ ಕೋರೊನಾ ಗ್ರಾಫ್
ಇದರ ಸಾಮರ್ಥ್ಯ— ಕೊರೊನಾಲ್‌/ಇಮೇಜಿಂಗ್‌, ಸ್ಪೆಕ್ಟ್ರೋಸ್ಕೋಪಿ

ಪೇ ಲೋಡ್ 2- ಸೋಲಾರ್‌ ಅಲ್ಟ್ರಾ ವೈಲೇಂಟ್‌ ಇಮೇಜಿಂಗ್ ಟೆಲಿಸ್ಕೋಪ್
ಇದರ ಸಾಮರ್ಥ್ಯ-ಪೋಟೋಸ್ಪೇರ್‌ ಮತ್ತು ಕ್ರೋಮೋಸಫೇರ್ ಇಮೇಜಿಂಗ್

ಪೇ ಲೋಡ್ 3- ಸೋಲಾರ್ ಲೋ ಎನರ್ಜಿ ಎಕ್ಸ್ ರೇ ಸ್ಪೆಕ್ಸೋಟ್ರೋಮೀಟರ್‌ (ಸೋಲೇಕ್ಸ್)

ಪೇ ಲೋಡ್ 4- ಹೈ ಎನರ್ಜಿ ಎಲ್‌-1 ಆರ್ಬಿಟಿಂಗ್‌ ಎಕ್ಸ್ ರೇ ಸ್ಪೆಕ್ಸೋಟ್ರೋಮೀಟರ್

ಪೇ ಲೋಡ್ 5- ಆದಿತ್ಯ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸಪೀರಿಮೆಂಟ್

ಪೇ ಲೋಡ್ 6- ಪ್ಮಾಸ್ಮಾ ಅನಲೈಜರ್ ಪ್ಯಾಕೇಜ್ ಫಾರ್ ಆದಿತ್ಯ

ಪೇ ಲೋಡ್ 7- ಅಡ್ವಾನ್ಸಡ್‌ ಟ್ರೈ ಆಕ್ಸಿಯಲ್ ಹೈ ರೆಸಲ್ಯೂಷನ್ ಡಿಜಿಟಲ್ ಮ್ಯಾಗ್ನೇಟೋಮೀಟರ್

ಆದಿತ್ಯ L1 ಮಿಷನ್ ಉದ್ದೇಶಗಳು

ಸೌರ ಕ್ರೋಮೋಸಫೇರ್‌, ಸೂರ್ಯನ ಮೇಲ್ಮೈ ಡೈನಾಮಿಕ್ ಅಧ್ಯಯನ

ಸೂರ್ಯನ ಮೇಲ್ಮೈ ಮೇಲೆ ಉಂಟಾಗುವ ದೊಡ್ಡ ಸ್ಫೋಟಗಳು, ಬೆಂಕಿಉಂಡೆಗಳ ಬಗ್ಗೆ ಅಧ್ಯಯನ

ಸೂರ್ಯನ ಕಣಗಳ ಬದಲಾವಣೆಯ ಬಗ್ಗೆ ಅಧ್ಯಯನ

ಸೌರ ವ್ಯವಸ್ಥೆ ಮತ್ತು ಅದರ ಶಾಖದ ವ್ಯವಸ್ಥೆಯ ಬಗ್ಗೆ ಅಧ್ಯಯನ

ಸೂರ್ಯನ ಉಷ್ಣಾಂಶ, ಅದರ ವೇಗ, ಸಾಂದ್ರತೆಯ ಬಗ್ಗೆ ಅಧ್ಯಯನ

ಸೂರ್ಯ ಕಿರಣಗಳ ದೊಡ್ಡ ಸ್ಫೋಟಗಳ ಅಭಿವೃದ್ದಿ, ಬದಲಾವಣೆ, ಮೂಲದ ಬಗ್ಗೆ ಅಧ್ಯಯನ

ಸೌರ ಸ್ಫೋಟದ ಘಟನೆಗಳಿಗೆ ಕಾರಣವಾಗುವ ಬಹು ಪದರಗಳಲ್ಲಿ ಉಂಟಾಗುವ ಸರಣಿ ಪ್ರಕ್ರಿಯೆಗಳ ಬಗ್ಗೆ ಅಧ್ಯಯನ

ಸೂರ್ಯನ ಕಾಂತೀಯ ಕ್ಷೇತ್ರದ ಸ್ಥಳಶಾಸ್ತ್ರದ ಬಗ್ಗೆ ಅಧ್ಯಯನ ಮತ್ತು ಕಾಂತೀಯ ಕ್ಷೇತ್ರದ ಆಳತೆಯ ಬಗ್ಗೆ ಅಧ್ಯಯನ

ಬಾಹ್ಯಾಕಾಶ ವಾತಾವರಣದ ಮೂಲ, ಸಂಯೋಜನೆ ಮತ್ತು ಸೂರ್ಯನ ಗಾಳಿಯ ಬದಲಾವಣೆಯ ಬಗ್ಗೆ ಅಧ್ಯಯನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIG BREAKING: ಆದಿತ್ಯ L-1 ನೌಕೆ ಯಶಸ್ವಿ ಉಡಾವಣೆ; ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ ವಿಜ್ಞಾನಿಗಳು

https://newsfirstlive.com/wp-content/uploads/2023/09/ADITYA_L1_3.jpg

Load More