newsfirstkannada.com

ತಿರುಪತಿಗೆ ಚಿನ್ನದ ಶಂಖ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಸುಧಾಮೂರ್ತಿ!

Share :

16-07-2023

    ತಿರುಪತಿ ತಿಮ್ಮಪ್ಪನಿಗೆ ವಿಶೇಷ ಕಾಣಿಕೆ ನೀಡಿದ ಆದರ್ಶ ದಂಪತಿ

    ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾದರಿಯಾದ ದಂಪತಿ

    ಇನ್ಫೋಸಿಸ್‌ ಫೌಂಡೇಶನ್‌ಗೆ ಯಶಸ್ಸಿನ ಆಧಾರಸ್ತಂಭ ಈ ದಂಪತಿ

ಸರಳತೆಗೆ ಮತ್ತೊಂದು ಹೆಸರೇ ಇನ್ಫೋಸಿಸ್ ಸಂಸ್ಥೆ ಸಂಸ್ಥಾಪಕ  ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ. ಸುಧಾಮೂರ್ತಿ ಅವರು ಅದೇಷ್ಟೋ ಯುವಕ ಯುವತಿಯರಿಗೆ ಆದರ್ಶ. ಇದೀಗ ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ತಿರುಪತಿ ಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆಯಾಗಿ ನೀಡಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.

ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊದಲಿನಿಂದಲೂ ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ. ಅವರ ದಾಂಪತ್ಯ ಜೀವನಕ್ಕೆ ಈಗ 45 ವರ್ಷ. ಈ 45 ವರ್ಷಗಳಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಿರುಪತಿಗೆ ಚಿನ್ನದ ಶಂಖ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ಸುಧಾಮೂರ್ತಿ!

https://newsfirstlive.com/wp-content/uploads/2023/07/sudha.jpg

Load More