newsfirstkannada.com

ನಾನು ನೋಡಿದ ದರ್ಶನ್ ಬೇರೆ.. ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟ ಸುಮಲತಾ ಅಂಬರೀಶ್; ಹೇಳಿದ್ದೇನು?

Share :

Published July 4, 2024 at 5:49pm

  ದರ್ಶನ್ ವಿಚಾರದಲ್ಲಿ ನನ್ನ ಮೌನವನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ

  ತಾಯಿಯಾಗಿ ನಾನು ಅವನು ಹೀಗೆ ಮಾಡಿರುವುದನ್ನು ನಂಬಲ್ಲ

  ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಹಾಕಿಲ್ಲ ಯಾಕೆ ಗೊತ್ತಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ಮೊದಲ ಬಾರಿಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ನಾವೆಲ್ಲರೂ ಶಾಕ್‌ನಲ್ಲಿದ್ದು ನೋವನ್ನು ಅನುಭವಿಸುತ್ತಿದ್ದೇವೆ. ನನ್ನ ಮೌನವನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಅಭಿಮಾನಿಗಳು ಬೇರೆ ರೀತಿ ತಿಳಿದುಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ನನ್ನ ಅಭಿಪ್ರಾಯ ಹೊರಗೆ ಹಾಕಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ‘ನಾನು ಬದುಕಿರೋ ತನಕ ದರ್ಶನ್​​ ನನ್ನ ಹಿರಿಯ ಮಗನೇ’- ನೋವು ತೋಡಿಕೊಂಡ ಸುಮಲತಾ!

ಕೊಲೆ ಕೇಸ್‌ ಕೋರ್ಟ್‌ನಲ್ಲಿ ಇರುವ ಕಾರಣ ನಾನು ಹೆಚ್ಚಾಗಿ ಮಾತನಾಡಲು ಆಗಲ್ಲ. ದರ್ಶನ್ ಜನರಿಗೆ ಸಹಾಯ ಮಾಡುವಂತಹ ವ್ಯಕ್ತಿ. ನಾನು ಆ ರೀತಿಯ ದರ್ಶನ್ ಮಾತ್ರ ನೋಡಿದ್ದೇನೆ. ಬೇರೆ ದರ್ಶನ್‌ನ ನಾನು ನೋಡಿಲ್ಲ. ಮಗನ ರೀತಿಯಲ್ಲಿ ನಾನು ಅವನನ್ನು ನೋಡಿದ್ದೇನೆ. ತಾಯಿಯಾಗಿ ನಾನು ಅವನು ಹೀಗೆ ಮಾಡಿರುವುದನ್ನು ನಂಬಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ನಾನು ಒಬ್ಬ ತಾಯಿಯಾಗಿದ್ದು, ರೇಣುಕಾಸ್ವಾಮಿ ತಾಯಿ ಆಳುವುದನ್ನು ನೋಡಿದ್ದೇನೆ. ಆ ಪತ್ನಿ ಆಳುವುದನ್ನು ನೋಡಿದ್ದೇನೆ. ನನಗೂ ಈ ಘಟನೆಯಿಂದ ನೋವಾಗಿದೆ. ಸತ್ಯ ಹೊರಗೆ ಬರಬೇಕು. ಮೊದಲ ದಿನದಿಂದಲೇ ಆರೋಪಿಯಿಂದ ಅಪರಾಧಿ ಮಾಡಲು ಬೇಡ ಎಂಬುದು ನನ್ನ ಅನಿಸಿಕೆ. ಅವರು ಏನು ಮಾಡಿದ್ದಾರೆ, ಏನು ಮಾಡಿಲ್ಲ ಎಂಬುದು ಹೊರಗೆ ಬರಲಿ. ಕಾನೂನು ನಾಳೆ ಏನು ಹೇಳುತ್ತದೆ ಎಂಬುದನ್ನು ನಾವು ಒಪ್ಪಲೇಬೇಕು.

ಇದನ್ನೂ ಓದಿ: ನಟ, ನಟಿಯರು ಆರೋಪಿಗಾಗಿ ಜೈಲಿಗೆ ಹೋಗ್ತಿದ್ದಾರೆ.. ನಾವು ಎಲ್ಲಿಗೆ ಹೋಗ್ಬೇಕು? ರೇಣುಕಾಸ್ವಾಮಿ ತಾಯಿ ಕಣ್ಣೀರು 

ಯಾರೂ ಇಂತಹ ಸಮಯದಲ್ಲಿ ಹೇಳಿಕೆಗಳನ್ನು ನೀಡಲೇಬಾರದು. ಎಲ್ಲವನ್ನೂ ನಾನು ಒಂದೇ ದಿನ ಹೊರಗೆ ಬಂದು ಮಾತನಾಡಲು ಆಗಲ್ಲ. ಕಾನೂನಿನ ಪ್ರಕಾರ ಏನೇನು ಮಾಡಬೇಕೋ ಅದೆಲ್ಲಾ ಆಗಲಿ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬೇರೆ ಬೇರೆ ಸುದ್ದಿಗಳು ಬರುತ್ತಿದೆ.

ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಹಾಕದೇ ಇರುವ ವಿಚಾರಕ್ಕೆ ಸುಮಲತಾ ಅಂಬರೀಶ್ ಅವರು ಜಾರ್ಚ್‌ಶೀಟ್ ಆಗುವವರೆಗೂ ಬೇಲ್ ಅರ್ಜಿ ಹಾಕಲು ಅವಕಾಶ ಇಲ್ಲ ಅನ್ನಿಸುತ್ತದೆ. ಹೀಗಾಗಿ ನೇರವಾಗಿ ಬೇಲ್ ಅರ್ಜಿ ಹಾಕಿಲ್ಲ ಅನ್ನಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾನು ನೋಡಿದ ದರ್ಶನ್ ಬೇರೆ.. ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟ ಸುಮಲತಾ ಅಂಬರೀಶ್; ಹೇಳಿದ್ದೇನು?

https://newsfirstlive.com/wp-content/uploads/2024/07/Sumalatha-Ambarish-On-Darshan-1.jpg

Load More