ಸುಮಲತಾ ಯಾವ ಪಕ್ಷಕ್ಕೆ ಹೋಗ್ತಾರೆ ಅನ್ನೋದು ಅವರ ನಿರ್ಧಾರ
ಸಂಸದರು ಮೊದಲು ಮೋದಿ, ಅಮಿತ್ ಶಾ ಬಳಿ ಹೋಗಿ ಚರ್ಚಿಸಲಿ
ಸಂಸದೆ ಸುಮಲತಾರ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ
ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯ ಹೋರಾಟ ಒಂದು ಕಡೆ. ಮತ್ತೊಂದೆಡೆ ರಾಜಕೀಯ ನಾಯಕರ ವಾಕ್ಸಮರ ಮಂಡ್ಯದಲ್ಲಿ ಜೋರಾಗಿದೆ. ಕಾವೇರಿ ಹೋರಾಟದಲ್ಲಿ ಭಾಗಿಯಾಗಿ ಉಸ್ತುವಾರಿ ಸಚಿವರ ವಿರುದ್ಧ ಕಿಡಿಕಾರಿದ್ದ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಂಸದೆ ಸುಮಲತಾ ಅವರು ಜೆಡಿಎಸ್ ಜೊತೆ ಇದ್ದಾರೋ ಅಥವಾ ಬಿಜೆಪಿ ಜೊತೆ ಇದ್ದಾರೋ ನನಗೆ ಗೊತ್ತಿಲ್ಲ. ಸುಮಲತಾ ಅವರು ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಚೆನ್ನಾಗಿಯೇ ಇದ್ದಾರೆ. ಮಂಡ್ಯ ಜಿಲ್ಲೆಗೆ ಅನುಕೂಲವಾಗಲಿ ಅಂತಾ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಹೊರ ರಾಜ್ಯಕ್ಕೆ ಕಾವೇರಿ ನೀರನ್ನು ಬಿಡುವ ವಿಚಾರವಾಗಿ ಕೇಂದ್ರದಲ್ಲಿ ಹೋಗಿ ಮಾತನಾಡುವುದು ಉತ್ತಮ. ಅದರ ಬದಲು ನಮ್ಮನ್ನ ಡ್ಯಾಂ ಬಳಿ ಹೋಗುವುದಿಲ್ಲ ಎಂದು ಹೇಳುತ್ತಾರೆ. ಡ್ಯಾಂನಲ್ಲಿ ನೀರು ಎಷ್ಟು ಇದೆ ಅಂತಾ ನಾವು ಹೇಗೆ ತಿಳಿದುಕೊಳ್ಳುವುದು. ನಮಗೆ ಇದರ ಬಗ್ಗೆ ತಿಳಿದುಕೊಳ್ಳಲು ಗೊತ್ತಿಲ್ವಾ? ಎಂದು ಸಂಸದೆ ಸುಮಲತಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಸಂಸದೆ ಸುಮಲತಾ ಅಂಬರೀಶ್ ಅವರು ಡ್ಯಾಂ ಬಳಿ ಉಸ್ತುವಾರಿ ಮತ್ತು ನೀರಾವರಿ ಸಚಿವರು ಹೋಗಿಲ್ಲ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಸಚಿವ ಚಲುವರಾಯಸ್ವಾಮಿ, ಮೊದಲು ನೀವು ಅಮಿತ್ ಶಾ ಬಳಿ ಹೋದರೆ ಸಂತೋಷ. ಚುನಾವಣೆ ಆದಾಗಿನಿಂದ ಅವರ ಮಾತಿಗೆ ಅವರೇ ಸಮರ್ಥರು. ಅವರು ಏನು ಬೇಕಾದರು ನಿರ್ಧಾರ ತೆಗೆದುಕೊಳ್ಳಲಿ. ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ. ಸುಮಲತಾ ಬಿಜೆಪಿ ಜೊತೆ ಹೋಗ್ತಾರೋ, ಜೆಡಿಎಸ್ ಜೊತೆ ಹೋಗ್ತಾರೋ, ಪಕ್ಷೇತರವಾಗಿ ಇರ್ತಾರೋ ಅದು ಅವರವರ ಇಚ್ಛೆಗೆ ಬಿಟ್ಟದ್ದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹರಿಹಾಯ್ದಿದ್ದಿದ್ದಾರೆ.
ಸದ್ಯದ KRS ಡ್ಯಾಂ ನೀರಿನ ಮಟ್ಟ
ಗರಿಷ್ಟ ಮಟ್ಟ- 124.80 ಅಡಿ
ಇಂದಿನ ಮಟ್ಟ- 97.52 ಅಡಿ
ಗರಿಷ್ಠ ಸಾಮರ್ಥ್ಯ- 49.452
ಇಂದಿನ ಸಾಮರ್ಥ್ಯ- 20.930
ಒಳಹರಿವು- 2,985
ಹೊರಹರಿವು- 4742
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ