newsfirstkannada.com

ಕರೆಂಟ್​ ಬಿಲ್​ ಏರಿಕೆ.. ರಾಜ್ಯ ಸರ್ಕಾರದ ವಿರುದ್ಧ ಸುಮಲತಾ ಅಂಬರೀಶ್​ ಕೆಂಡಾಮಂಡಲ!

Share :

22-06-2023

  ಕರೆಂಟ್​ ಬಿಲ್​​ ಏರಿಕೆ ವಿರೋಧಿಸಿ ಬೀದಿಗಿಳಿದ ವ್ಯಾಪಾರಿಗಳು

  ವರ್ತಕರು, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸುಮಲತಾ ಬೆಂಬಲ

  ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸುಮಲತಾ ಕಿಡಿ!

ಬೆಂಗಳೂರು: ವಿದ್ಯುತ್ ದರ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರಿಗೆ, ಕೈಗಾರಿಕೋದ್ಯಮಿಗಳಿಗೆ, ವರ್ತಕರು ಮತ್ತು ಸಣ್ಣಪುಟ್ಟ ಉದ್ಯಮವನ್ನು ಅವಲಂಬಿಸಿರುವವರ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಿದೆ. ವಿದ್ಯುತ್ ದರದ ಹೊಡೆತಕ್ಕೆ ನಲುಗಿರುವ ಉದ್ಯಮಿಗಳು ಮತ್ತು ವರ್ತಕರು ದುಬಾರಿ ಬಿಲ್​​ನಿಂದಾಗಿ ಕೈಗಾರಿಕೆಗಳನ್ನೇ ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಕೈಗಾರಿಕೆಗಳು ಮುಚ್ಚಿದರೆ ಅದರ ಪರಿಣಾಮ ಇನ್ನೂ ಘೋರ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಅವರು ಟ್ವೀಟ್​ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸುಮಲತಾ ಅಂಬರೀಶ್​​, ಉದ್ಯಮಿಗಳ, ವರ್ತಕರು, ಸಾಮಾನ್ಯ ಜನರೂ ನಡೆಸುತ್ತಿರುವ ಪ್ರತಿಭಟನೆಯು ನ್ಯಾಯಯುತವಾಗಿದೆ. ಸರಕಾರ ಕೂಡಲೇ ಮಧ್ಯ ಪ್ರವೇಶಿಸಿ, ವಿದ್ಯುತ್ ನಿಗಮಕ್ಕೆ ದರ ಇಳಿಸುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯೊಂದಿಗೆ ಒತ್ತಾಯಿಸುವೆ ಎಂದು ಬರೆದುಕೊಂಡಿದ್ದಾರೆ.

ವರ್ತಕರಿಗೆ ಬಿಗ್​ ಶಾಕ್​​

ರಾಜ್ಯದ ಜನರಿಗೆ 200 ಯೂನಿಟ್​​ ವಿದ್ಯುತ್​ ಉಚಿತ ಎಂದು ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ಗೃಹಜ್ಯೋತಿ ಸ್ಕೀಮ್​​​ ಜಾರಿ ಮಾಡಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರ ಕರೆಂಟ್​ ಬಿಲ್​ ಏರಿಕೆ ಮಾಡಿ ಶಾಕ್​ ಕೊಟ್ಟಿದೆ. ಇದರಿಂದ ನಮಗೆ ಹೊರೆಯಾಗಲಿದೆ ಎಂದು ಮಧ್ಯಮ ವರ್ಗ, ಕೈಗಾರಿಕೋದ್ಯಮಿಗಳು, ವರ್ತಕರು ಮತ್ತು ಸಣ್ಣಪುಟ್ಟ ಉದ್ಯಮ ನಂಬಿದವರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ತಮ್ಮ ಬೆಂಬಲ ಇರುವುದಾಗಿ ಹೇಳಿರುವ ಸುಮಲತಾ ಕರೆಂಟ್​​ ಬಿಲ್​ ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್​ ಬಿಲ್​ ಏರಿಕೆ.. ರಾಜ್ಯ ಸರ್ಕಾರದ ವಿರುದ್ಧ ಸುಮಲತಾ ಅಂಬರೀಶ್​ ಕೆಂಡಾಮಂಡಲ!

https://newsfirstlive.com/wp-content/uploads/2023/06/Sumalatha-Ambarish.jpg

Load More