newsfirstkannada.com

×

ಭಾರತಕ್ಕಾಗಿ 70 ಗಂಟೆ ದುಡಿದ್ರೆ ತಪ್ಪೇನು?- ನಾರಾಯಣ ಮೂರ್ತಿ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಲೀಡರ್​​

Share :

Published November 10, 2023 at 8:19pm

    ಮಹಾನ್ ಶಕ್ತಿವಂತ ದೇಶ ಆಗಬೇಕಾದರೆ 70 ಗಂಟೆ ಕೆಲಸ ಮಾಡಬೇಕು

    ಭಾರತದ ಮುಂದಿನ ಪೀಳಿಗೆಗೆ ಒಳ್ಳೆಯದು ಆಗಬೇಕೆಂದ್ರೆ ದುಡಿಯಬೇಕು

    ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು ನಾರಾಯಣ ಮೂರ್ತಿ

ನವದೆಹಲಿ: ಪ್ರತಿಷ್ಠಿತ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದ ಬಗ್ಗೆ ದೇಶದ್ಯಾಂತ ಸದ್ಯ ಚರ್ಚೆ ನಡೆಯುತ್ತಿದೆ. ಈಗಾಗಲೇ ಇದಕ್ಕೆ ಪರ-ವಿರೋಧಗಳು ವ್ಯಕ್ತವಾಗುತ್ತಿವೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಕಾಂಗ್ರೆಸ್​ ನಾಯಕ ಮನೀಶ್ ತಿವಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿ, ದೇಶಾಭಿವೃದ್ಧಿಗೆ 70 ಗಂಟೆ ಕೆಲಸ ಮಾಡಿದ್ರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ನಾರಾಯಣ ಮೂರ್ತಿ ಅಂತಹವರು ಅಷ್ಟೊಂದು ಕೆಲಸ ಮಾಡಿದ್ದಕ್ಕೆ ಈಗ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಸದ್ಯ 70 ಗಂಟೆ ಕೆಲಸ ಮಾಡಿ ಎಂದು ಹೇಳಿರುವ ಸಲಹೆಯಲ್ಲಿ ತಪ್ಪೇನಿದೆ. ಭಾರತ ನಿಜವಾಗಿಯು ಮಹಾನ್ ಶಕ್ತಿವಂತ ದೇಶವಾಗಬೇಕಾದರೆ, ಒಂದೆರಡು ಜನರೇಶನ್ ಕಷ್ಟಪಟ್ಟು ಕೆಲಸ ಮಾಡಬೇಕು. ಅದು ಮುಂದಿನ ನಮ್ಮ ಯುವ ಪೀಳಿಗೆಗೆ ಸಹಾಯವಾಗುತ್ತದೆ. ಇದಕ್ಕಾಗಿ ವಾರಕ್ಕೆ 70 ಗಂಟೆ ಕೆಲಸ, ಒಂದು ಆಫ್ ಹಾಗೂ 1 ವರ್ಷಕ್ಕೆ 15 ದಿನ ರಜೆಗಳು ಕೊಡುವಂತೆ ರೂಢಿಯಾಗಬೇಕು ಎಂದು ಹೇಳಿದ್ದಾರೆ.

ನಮ್ಮ ದೇಶದಲ್ಲಿ ಕೆಲ ಜನಪ್ರತಿನಿಧಿಗಳು ಒಂದು ದಿನಕ್ಕೆ 12 ರಿಂದ 17 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ವಾರದ ಎಲ್ಲ ದಿನವೂ ಇದೇ ರೀತಿ ಅವರು ಮಾಡುತ್ತಿದ್ದಾರೆ. ಅವರಿಗೆ ಬಿಡುವಿಲ್ಲದಂತೆ ಕೆಲಸವಿದೆ. ಹೀಗಾಗಿ ಅವರು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತಕ್ಕಾಗಿ 70 ಗಂಟೆ ದುಡಿದ್ರೆ ತಪ್ಪೇನು?- ನಾರಾಯಣ ಮೂರ್ತಿ ಬೆಂಬಲಕ್ಕೆ ನಿಂತ ಕಾಂಗ್ರೆಸ್​ ಲೀಡರ್​​

https://newsfirstlive.com/wp-content/uploads/2023/11/Manish_Tewari.jpg

Load More