newsfirstkannada.com

ಗುಜರಾತ್​ ಸೋಲಿಗೆ ಹಾರ್ದಿಕ್​​ ಪಾಂಡ್ಯ ಕಾರಣ- ಹೇಗೆಂದು ಸತ್ಯ ಬಿಚ್ಚಿಟ್ಟ ಸುನೀಲ್​​ ಗವಾಸ್ಕರ್​!

Share :

Published May 31, 2023 at 1:34pm

    ಫೈನಲ್ಸ್​​ನಲ್ಲಿ​​ ಸಿಎಸ್​​ಕೆ ವಿರುದ್ಧ ಗುಜರಾತ್​ಗೆ ಸೋಲು

    GT​ ಹೀನಾಯ ​ಸೋಲಿಗೆ ಹಾರ್ದಿಕ್​ ಪಾಂಡ್ಯ​ ಕಾರಣ

    ಸೋಲಿಗೆ ಅಸಲಿ ಕಾರಣ ಬಿಚ್ಚಿಟ್ಟ ಸುನೀಲ್​​ ಗವಾಸ್ಕರ್​!

ಇತ್ತೀಚೆಗೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಫೈನಲ್​​​ ಪಂದ್ಯದಲ್ಲಿ ಕ್ಯಾಪ್ಟನ್​​ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್​ ಸೋಲಿಗೆ ಕಾರಣವೇನು ಎಂದು ಟೀಂ ಇಂಡಿಯಾದ ದಿಗ್ಗಜ ಸುನೀಲ್​ ಗವಾಸ್ಕರ್​​ ತಿಳಿಸಿದ್ದಾರೆ.

ಈ ಸಂಬಂಧ ಮಾತಾಡಿದ ಸುನೀಲ್​ ಗವಾಸ್ಕರ್​​, ಕೊನೇ ಓವರ್​​ನಲ್ಲಿ ಚೆನ್ನೈ ತಂಡದ ಗೆಲುವಿಗೆ 15 ರನ್​ ಬೇಕಿತ್ತು. ಮೋಹಿತ್​​ ಮೊದಲ 4 ಬಾಲ್​ನಲ್ಲಿ ಕೇವಲ 3 ರನ್​ ನೀಡಿ ಅದ್ಭುತ ನಿಯಂತ್ರಣ ಸಾಧಿಸಿದ್ದರು. ಆದರೆ, ಕೊನೇ ಎರಡು ಬಾಲ್​ ಎಸೆಯುವಾಗ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ ಮಾತು ಕೇಳಿ ಕೆಟ್ಟರು ಎಂದಿದ್ದಾರೆ.

ಮೋಹಿತ್ ಶರ್ಮಾ ಮೊದಲ 4 ಬಾಲ್​ ಅದ್ಭುತವಾಗಿ ಎಸೆದರು. ಕೊನೇ ಎರಡು ಬಾಲ್​ ಇದ್ದಾಗ ಹಾರ್ದಿಕ್​ ಪಾಂಡ್ಯ ಮೋಹಿತ್​ ಜತೆ ಮಾತಾಡಿದರು. ಮೊದಲ 4 ಬಾಲ್​ ಅದ್ಭುತವಾಗಿ ಎಸೆದ ಮೋಹಿತ್​ಗೆ ಹಾರ್ದಿಕ್​ ಸಲಹೆ ನೀಡಬಾರದಿತ್ತು. ಚೆನ್ನಾಗಿ ಬೌಲಿಂಗ್​ ಮಾಡುತ್ತಿದ್ದ ಮೋಹಿತ್​ಗೆ ಏನೋ ಮಾಡಲು ಹೇಳಿದ್ದೆ ಗುಜರಾತ್​ ಟೈಟಾನ್ಸ್​ ಸೋಲಿಗೆ ಕಾರಣವಾಯ್ತು ಎಂದರು ಗವಾಸ್ಕರ್.

ಹಾರ್ದಿಕ್​​ ಜತೆ ಮಾತಾಡಿದ ಬಳಿಕ ಮೋಹಿತ್​ ಏಕಾಗ್ರತೆ ಕಳೆದುಕೊಂಡಿದ್ದರು. ಇದರ ಪರಿಣಾಮ ಮೋಹಿತ್​ ಎಸೆದ ಕೊನೇ 2 ಬಾಲ್​ಗಳಿಗೆ ಜಡೇಜಾ ಬ್ಯಾಕ್​ ಟು ಬ್ಯಾಕ್​​ ಸಿಕ್ಸರ್​​, ಬೌಂಡರಿ ಬಾರಿಸಿ ಚೆನ್ನೈ ತಂಡವನ್ನು ಗೆಲ್ಲಿಸಿದರು ಎಂದು ಹೇಳಿದರು.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಗುಜರಾತ್​ ಸೋಲಿಗೆ ಹಾರ್ದಿಕ್​​ ಪಾಂಡ್ಯ ಕಾರಣ- ಹೇಗೆಂದು ಸತ್ಯ ಬಿಚ್ಚಿಟ್ಟ ಸುನೀಲ್​​ ಗವಾಸ್ಕರ್​!

https://newsfirstlive.com/wp-content/uploads/2023/05/Hardik_Dhoni_1.jpg

Load More