newsfirstkannada.com

ಯಾಮಾರಿದ್ರೆ ಅಪಾಯ ಗ್ಯಾರಂಟಿ.. ಕಾಂಗ್ರೆಸ್ ಹೈಕಮಾಂಡ್‌ಗೆ ಸುನೀಲ್ ಕನುಗೋಲು ಟೀಂ ರಿಪೋರ್ಟ್‌

Share :

13-08-2023

    ಇದ್ರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, JDSಗೆ ಲಾಭ?

    ಚಲುವರಾಯಸ್ವಾಮಿ, ಡಿ.ಕೆ ಶಿವಕುಮಾರ್ ವಿರುದ್ಧದ ಆರೋಪ

    ಹೈಕಮಾಂಡ್‌ಗೆ ಸುನೀಲ್ ಟೀಮ್‌ ಕೊಟ್ಟ ವರದಿಯಲ್ಲಿ ಏನೇನಿದೆ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್‌ ನಾಯಕರು ಸಾಲು, ಸಾಲು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಮಂಡ್ಯ ಉಸ್ತುವಾರಿ, ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಇದರ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೂ ಕಮಿಷನ್ ಆರೋಪ ಕೇಳಿ ಬಂದಿದೆ. ಚಲುವರಾಯಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ವಿರುದ್ಧದ ಈ ಆರೋಪ ಪ್ರಕರಣಗಳ ವಿಚಾರ ಇದೀಗ ಕಾಂಗ್ರೆಸ್ ಹೈಕಮಾಂಡ್ ಅಂಗಳವನ್ನು ತಲುಪಿದೆ. ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿ ಬಂದಿರೋ ಭ್ರಷ್ಟಾಚಾರ ಆರೋಪ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಸುನೀಲ್ ಕನುಗೋಲು. ಇದೇ ಸುನೀಲ್ ಕನುಗೋಲು ಅವರೀಗ ರಾಜ್ಯ ಸರ್ಕಾರದ ರಾಜಕೀಯ ಸಲಹೆಗಾರರೂ ಕೂಡ ಆಗಿದ್ದಾರೆ. ಸುನೀಲ್ ಕನುಗೋಲು ಅವರ ತಂಡ ಇದೀಗ ಸಚಿವ ಚಲುವರಾಯಸ್ವಾಮಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೇಳಿ ಬಂದಿರೋ ಆರೋಪ ಪ್ರಕರಣದ ವರದಿ ಸಿದ್ಧಪಡಿಸಿದೆ. ಭ್ರಷ್ಟಾಚಾರ ಆರೋಪದ ಪ್ರಕರಣ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಕೆಯಾಗಿದ್ದು, ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಮಹತ್ವದ ಚರ್ಚೆ ನಡೆಯುತ್ತಿದೆ.

ಡಿಸಿಎಂ ಹಾಗೂ ಸಚಿವರ ವಿರುದ್ಧ ಕೇಳಿ ಬಂದಿರುವ ಆರೋಪದಲ್ಲಿ ರಾಜ್ಯ ಸರ್ಕಾರ ಮತ್ತು ಸಚಿವರು ಈ ಪರಿಸ್ಥಿತಿಯನ್ನ ಹೇಗೆ ನಿಭಾಯಿಸಬೇಕು ಅನ್ನೋ ಬಗ್ಗೆ ಸುನೀಲ್ ಕನುಗೋಲು ತಂಡ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಎಐಸಿಸಿ ನಾಯಕರಾದ ವೇಣುಗೋಪಾಲ್​ಗೆ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಆಗ್ರಹ; ಮಂಡ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ಮಧ್ಯೆ ಕಿತ್ತಾಟ

ಲೋಕಸಭಾ ಚುನಾವಣೆಗೆ ಪರಿಣಾಮ ‘ಗ್ಯಾರಂಟಿ’

ಚಲುವರಾಯಸ್ವಾಮಿ, ಡಿ.ಕೆ ಶಿವಕುಮಾರ್ ವಿರುದ್ಧದ ಎರಡು ಪ್ರಕರಣ
ಎರಡು ಆರೋಪಗಳೂ ಈಗಾಗಲೇ ಜನಸಾಮಾನ್ಯರಿಗೆ ತಲುಪಿದೆ
ಇದರಿಂದಾಗಿ ರಾಜ್ಯ ಸರ್ಕಾರದ ಮೇಲೆ ಸಂದೇಶ ರವಾನೆಯಾಗಿದೆ
ಈ ವಿಚಾರಗಳನ್ನ ಬಿಜೆಪಿ, ಜೆಡಿಎಸ್ ರಾಜಕೀಯವಾಗಿ ಬಳಸಿಕೊಳ್ತಿವೆ
ಲೋಕಸಭೆ ಚುನಾವಣೆಯ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ
ಭ್ರಷ್ಟಾಚಾರ ಆರೋಪಗಳಿಂದ ಕೆಟ್ಟ ಹೆಸರು ಬರದಂತೆ ಸರ್ಕಾರ ಹೊರ ಬರಬೇಕು
ಈ ಆರೋಪಗಳನ್ನ ಡಿಸಿಎಂ ಹಾಗೂ ಸಚಿವರು, ಸರ್ಕಾರ ನಿಭಾಯಿಸುವುದು ಅಗತ್ಯ

ಪರಿಸ್ಥಿತಿ ನಿಭಾಯಿಸಲು ಸುನೀಲ್ ಕನುಗೋಲು ಸಲಹೆ

ಸಲಹೆ-1: ಸರ್ಕಾರ ಡಿಸಿಎಂ ಹಾಗೂ ಸಚಿವರ ಪರ ಸಮರ್ಥನೆ ಮಾಡಿಕೊಳ್ಳಬೇಕು
ಸಲಹೆ-2: ಆರೋಪಗಳನ್ನ ಸುಳ್ಳು ಅಂತ ಸ್ಪಷ್ಟವಾಗಿ, ಗಟ್ಟಿ ಧ್ವನಿಯಲ್ಲಿ ವಿರೋಧಿಸಬೇಕು
ಸಲಹೆ-3: ಸಾಮಾಜಿಕ ಜಾಲತಾಣಗಳಲ್ಲಿ, ಆರೋಪಗಳನ್ನ ನಿರಾಕರಿಸಿ ಪೋಸ್ಟ್​ ಮಾಡಬೇಕು
ಸಲಹೆ-4: ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ಪಕ್ಷದ ನಾಯಕರು ಪೋಸ್ಟ್ ಮಾಡಬೇಕು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಯಾಮಾರಿದ್ರೆ ಅಪಾಯ ಗ್ಯಾರಂಟಿ.. ಕಾಂಗ್ರೆಸ್ ಹೈಕಮಾಂಡ್‌ಗೆ ಸುನೀಲ್ ಕನುಗೋಲು ಟೀಂ ರಿಪೋರ್ಟ್‌

https://newsfirstlive.com/wp-content/uploads/2023/08/Dk-Shivakumar-Sunil-Kanugolu.jpg

Load More