newsfirstkannada.com

ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಸುನೀಲ್ ನರೈನ್..!

Share :

06-11-2023

    ಕ್ರಿಕೆಟ್ ಅಭಿಮಾನಿಗಳಿಗೆ ನರೈನ್ ಬಿಗ್ ಶಾಕ್

    2011ರಿಂದ ಅಂತಾರಾಷ್ಟ್ರೀ ಪಂದ್ಯ ಆಡ್ತಿದ್ದ ನರೈನ್

    ಕಳೆದ ನಾಲ್ಕು ವರ್ಷಗಳಿಂದ ಒಂದೂ ಪಂದ್ಯ ಆಡಿರಲಿಲ್ಲ ​

ವೆಸ್ಟ್​ ಇಂಡೀಸ್​ ತಂಡದ ಸ್ಪಿನ್ನರ್​​ ಸುನೀಲ್​ ನರೈನ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ವಿಂಡೀಸ್​ ಪರ 6 ಟೆಸ್ಟ್​, 65 ಏಕದಿನ, 51 ಟಿ20 ಪಂದ್ಯಗಳನ್ನ ಸುನಿಲ್​ ನರೈನ್​ ಆಡಿದ್ದರು.

2019ರಲ್ಲಿ ಭಾರತದ ವಿರುದ್ಧ ಟಿ20 ಪಂದ್ಯವನ್ನಾಡಿದ ಬಳಿಕ ನರೈನ್​, ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ದೂರ ಉಳಿದಿದ್ದರು. ಸುದೀರ್ಘ 4 ವರ್ಷದಿಂದ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ನರೈನ್​, ಇದೀಗ ಗುಡ್​ ಬೈ ಹೇಳಿದ್ದಾರೆ.

ವಿಂಡೀಸ್ ಪರ 6 ಟೆಸ್ಟ್ ಪಂದ್ಯಗಳನ್ನು ಆಡಿರುವ ನರೈನ್, ಕೇವಲ 40 ರನ್ ಬಾರಿಸಿ 21 ವಿಕೆಟ್ ಪಡೆದು ಮಿಂಚಿದ್ದರು. ಅದೇ ರೀತಿ 65 ಏಕದಿನ ಪಂದ್ಯಗಳನ್ನು ಆಡಿ, 363 ರನ್ ಬಾರಿಸಿದ್ದ ನರೈನ್, 92 ವಿಕೆಟ್ ಪಡೆದು ಗಮನ ಸೆಳೆದಿದ್ದರು. 51 ಟಿ-20 ಪಂದ್ಯಗಳನ್ನು ಆಡಿರುವ ನರೈನ್ 155 ರನ್​ಗಳಿಸಿ, 52 ವಿಕೆಟ್ ಪಡೆದು ಮಿಂಚಿದ್ದರು.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನರೈನ್ ಭಾರೀ ಹೆಸರು ಮಾಡಿದ್ದಾರೆ. 2023ರ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಅವರನ್ನು 6 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಒಟ್ಟು 162 ಐಪಿಎಲ್ ಪಂದ್ಯಗಳನ್ನು ಆಡಿರುವ ನರೈನ್, 1046 ರನ್​ಗಳಿಸಿದ್ದಾರೆ. ಜೊತೆಗೆ 163 ವಿಕೆಟ್ ಕಿತ್ತು ಮಿಂಚಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ಬೈ ಹೇಳಿದ ಸುನೀಲ್ ನರೈನ್..!

https://newsfirstlive.com/wp-content/uploads/2023/11/SUNIL.jpg

Load More