newsfirstkannada.com

ಮನೆ ಹರಾಜು ಹಾಕ್ತೀವಿ ಎಂದು ನೋಟೀಸ್ ನೀಡಿ ವಾಪಸ್​ ಪಡೆದುಕೊಂಡ ಬ್ಯಾಂಕ್​​; 56 ಕೋಟಿ ಸಾಲದ ಸುಳಿಯಲ್ಲಿ ಗದರ್ ಸಿನಿಮಾ ನಟ

Share :

22-08-2023

    ಮನೆ ಇ-ಹರಾಜು ಹಾಕುವುದಾಗಿ ಬ್ಯಾಂಕ್ ನೋಟಿಸ್

    ಮಗನ ಸಾಲಕ್ಕೆ ಜಾಮೀನು ನೀಡಿದ್ದ ನಟ ಧರ್ಮೇಂದ್ರ

    ಇದು ಸುಳ್ಳು ಸುದ್ದಿ ಎಂದ ಅಕ್ಷಯ್ ಕುಮಾರ್ ವಕ್ತಾರರು

ಗದರ್-2 ಸಿನಿಮಾ ಸಕ್ಸಸ್ ನಡುವೆ ಬಾಲಿವುಡ್ ನಟ ಸನ್ನಿ ಡಿಯೋಲ್​​ಗೆ ಸಂಕಷ್ಟ ಎದುರಾಗಿದೆ. ಮನೆ ಅಡಮಾನ ಇಟ್ಟು ಸಾಲ ಮಾಡಿದ್ದ ಸನ್ನಿಡಿಯೋಲ್​ಗೆ ಬ್ಯಾಂಕ್ ನೋಟಿಸ್ ನೀಡಿ ಹರಾಜು ಮಾಡಲು ನಿರ್ಧರಿಸಿತ್ತು. ಆದ್ರೆ ಕಡೇ ಕ್ಷಣದಲ್ಲಿ ನೋಟಿಸ್ ಹಿಂಪಡೆದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗದರ್-2 ಸನ್ನಿಡಿಯೋಲ್‌ಗೆ ಬಹುಕಾಲದ ಬಳಿಕ ಬ್ರೇಕ್‌ ನೀಡಿರೋ ಚಿತ್ರ. ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಚಿತ್ರ ಒಂದೇ ವಾರದಲ್ಲಿ 300 ಕೋಟಿ ಗಳಿಕೆ ಮಾಡುವ ಮೂಲಕ ಸನ್ನಿ ಡಿಯೋಲ್‌ಗೆ ಪುನರ್ಜನ್ಮ ನೀಡಿದೆ. ಆದ್ರೆ ಇದಕ್ಕಾಗಿ ಸಂಭ್ರಮಿಸುವ ಸ್ಥಿತಿಯಲ್ಲಂತೂ ನಟ ಸನ್ನಿ ಡಿಯೋಲ್‌ ಇಲ್ಲ. ಯಾಕಂದ್ರೆ ಅವರನ್ನ ಸುತ್ತಿಕೊಂಡಿರೋ ಸಾಲದ ಸುಳಿ ಅವರನ್ನ ಮನೆ ಹರಾಜಾಗುವ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಗದರ್-2 ಯಶಸ್ಸಿನಲ್ಲಿದ್ದ ಸನ್ನಿ ಡಿಯೋಲ್​ಗೆ ಬ್ಯಾಂಕ್ ಶಾಕ್!
56 ಕೋಟಿ ರೂ. ಸಾಲ ತೀರಿಸುವಂತೆ ಬ್ಯಾಂಕ್ ನೋಟಿಸ್!

ಬಾಲಿವುಡ್ ನಟ ಹಾಗೂ ಬಿಜೆಪಿ ಸಂಸದ ಸನ್ನಿ ಡಿಯೋಲ್​​ಗೆ ಸಂಕಷ್ಟ ಎದುರಾಗಿದೆ. ಮನೆ ಅಡವಿಟ್ಟು ಪಡೆದಿದ್ದ ಸಾಲ ತೀರಿಸದಿದ್ದಕ್ಕೆ ಬ್ಯಾಂಕ್ ಆಫ್ ಬರೋಡಾ ನಿನ್ನೆ ನೋಟಿಸ್ ನೀಡಿತ್ತು. ದೇಶದ 2ನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸಾಲದಾತ ಬ್ಯಾಂಕ್​​​​​​​​ ಆಗಿರುವ ಬ್ಯಾಂಕ್ ಆಫ್ ಬರೋಡಾ ಈ ಸಾಲದ ಹಣ ವಾಪಸಾತಿಗೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿ ಇ-ಹರಾಜು ಮಾಡಲು ನಿರ್ಧರಿಸಿತ್ತು. 56 ಕೋಟಿ ರೂಪಾಯಿ ಸಾಲ ತೀರಿಸುವಂತೆ ಸನ್ನಿ ಮನೆಗೆ ನೋಟಿಸ್ ನೀಡಿತ್ತು. ನಿಯಮದ ಪ್ರಕಾರ 90 ದಿನಗಳು ಅಸಲು-ಬಡ್ಡಿ ಪಾವತಿಸದಿದ್ರೆ ಆಗ ಸಾಲ ಅನುತ್ಪಾದಕ ಸಾಲ ಎನಿಸಲಿದೆ. ಅಂತಹ ಆಸ್ತಿಯನ್ನು ಹರಾಜು ಹಾಕಲು ಬ್ಯಾಂಕ್​ಗೆ ಅಧಿಕಾರ ಇದೆ. ಈ ನಡುವೆ ನಾವು ಸಾಲ ತೀರಿಸುವ ಪ್ರಕ್ರಿಯೆಯಲ್ಲಿ ಇದ್ದೇವೆ ಅಂತ ನಟ ಸನ್ನಿ ಡಿಯೋಲ್ ಪ್ರತಿಕ್ರಿಯೆ ನೀಡಿದ್ದರು. ಮುಂಬೈನ ಜುಹುವಿನಲ್ಲಿ ನಟ ಸನ್ನಿ ಡಿಯೋಲ್ ಮನೆ ಹೊಂದಿದೆ. ಜುಹು ಪ್ರದೇಶದ ಗಾಂಧಿಗ್ರಾಮ್ ರಸ್ತೆಯಲ್ಲಿರುವ ಸನ್ನಿ ವಿಲ್ಲಾ ಹೊಂದಿದ್ದಾರೆ. ಬ್ಯಾಂಕ್ ಆಫ್​ ಬರೋಡಾದಿಂದ 56 ಕೋಟಿ ಸಾಲ ಪಡೆದಿದ್ದ ಸನ್ನಿ 2022ರಿಂದ ಸಾಲ, ಬಡ್ಡಿ, ದಂಡ ಪಾವತಿಸಿರಲಿಲ್ಲ, ಸಾಲ ಮರುಪಾವತಿಸದ್ದಕ್ಕೆ ಸದ್ಯ ಬ್ಯಾಂಕ್ ನೋಟಿಸ್ ನೀಡಿದೆ. ಸೆಪ್ಟೆಂಬರ್ 25 ರಂದು ಮನೆಯನ್ನ ಇ-ಹರಾಜು ಹಾಕುವುದಾಗಿ ಜಾಹೀರಾತು ನೀಡಿದೆ. ಆಸ್ತಿ ಹರಾಜಿಗೆ ಮೀಸಲು ಬೆಲೆಯನ್ನು 51.43 ಕೋಟಿ ರೂ.ಗೆ ನಿಗದಿ ಮಾಡಿದೆ.. 5.14 ಕೋಟಿ ರೂ. ಬಡ್ಡಿ ಹೇರಿದೆ. ಮಗನ ಸಾಲಕ್ಕೆ ತಂದೆ, ನಟ ಧರ್ಮೇಂದ್ರ ಜಾಮೀನು ನೀಡಿದ್ದರು.

ನಟ ಸನ್ನಿ ಡಿಯೋಲ್‌ ಬಂಗಲೆ ಇ-ಹರಾಜು ರದ್ದು!
ನೋಟಿಸ್ ವಾಪಸ್​ ಪಡೆದಿದ್ದಕ್ಕೆ ಕಾಂಗ್ರೆಸ್ ಕಿಡಿ!

ಬಿಜೆಪಿ ಸಂಸದರೂ ಆಗಿರುವ ಸನ್ನಿ ಡಿಯೋಲ್​ಗೆ ನೋಟಿಸ್‌ ನೀಡಿದ್ದ ಬ್ಯಾಂಕ್ ಆಫ್ ಬರೋಡಾ ಇಂದು ವಾಪಸ್‌ ಪಡೆದಿರೋದು ಕುತೂಹಲಕ್ಕೆ ಕಾರಣವಾಗಿದೆ. ತಾಂತ್ರಿಕ ಕಾರಣದಿಂದ ನೋಟಿಸ್ ಪಡೆಯಲಾಗಿದೆ ಅಂತ ಬ್ಯಾಂಕ್ ಹೇಳಿದೆ. ಆದ್ರೆ ನೋಟಿಸ್ ವಾಪಸ್ ಪಡೆದಿದ್ದನ್ನ ಪ್ರಶ್ನಿಸಿರೋ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್, ಯಾವ ತಾಂತ್ರಿಕ ಕಾರಣಕ್ಕೆ ಹರಾಜಿನ ನೋಟಿಸ್ ವಾಪಸ್ ಪಡೆಯಲಾಯ್ತು ಅಂತ ಕಿಡಿಕಾರಿದ್ದಾರೆ.

‘ಸನ್ನಿ ಸಾಲವನ್ನು ನಟ ಅಕ್ಷಯ್ ಕುಮಾರ್ ತೀರಿಸುವುದಿಲ್ಲ’!
ಸಾಲ ತೀರಿಸುವ ಸುದ್ದಿ ಸುಳ್ಳು ಎಂದ ಅಕ್ಷಯ್ ವಕ್ತಾರರು!

ಇನ್ನು ನಟ ಸನ್ನಿ ಡಿಯೋಲ್ ಸಾಲ ತೀರಿಸಲು ನಟ ಅಕ್ಷಯ್ ಕುಮಾರ್ ಮುಂದೆ ಬಂದಿದ್ದಾರೆ ಅಂತ ಹೇಳಲಾಗಿತ್ತು.. ಬ್ಯಾಂಕ್ ನೋಟಿಸ್ ನೀಡಿದ ಬೆನ್ನಲ್ಲೇ ಅಕ್ಷಯ್ ಕುಮಾರ್ ಸನ್ನಿಯ 30-40 ಕೋಟಿ ಸಾಲ ತೀರಿಸಲಿದ್ದಾರೆ ಅನ್ನೋ ಸುದ್ದಿ ಹೊರಬಿದ್ದಿತ್ತು.. ಆದ್ರೆ ಇದೆಲ್ಲಾ ಸುಳ್ಳು ಅಂತ ನಟ ಅಕ್ಷಯ್ ಕುಮಾರ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ.. ಅಂದಹಾಗೆ ಆಗಸ್ಟ್ 11ರಂದು ಸನ್ನಿಡಿಯೋಲ್ ಗದರ್​-2 ಮತ್ತು ಅಕ್ಷಯ್​ ಕುಮಾರ್ ನಟನೆಯ OMG-2 ಚಿತ್ರಗಳು ರಿಲೀಸ್​ ಆಗಿ ಬಾಕ್ಸಾಫೀಸ್​​ನಲ್ಲಿ ಭಾರಿ ಸದ್ದು ಮಾಡ್ತಿವೆ. ಕಳೆದ ವಾರ ಬಿಡುಗಡೆಯಾಗಿದ್ದ ಗದರ್-2 ಭರ್ಜರಿ ಪ್ರದರ್ಶನ ನೀಡ್ತಿದ್ದು ಈ ಬೆನ್ನಲ್ಲೇ ನಟ ಸನ್ನಿ ಡಿಯೋಲ್​​​ಗೆ ಸಾಲದ ನೋಟಿಸ್ ಕಸಿವಿಸಿ ತರಿಸಿದೆ. ಆದ್ರೆ ಹರಾಜು ಹಾಕುವ ಕಡೇ ಕ್ಷಣಗಳಲ್ಲಿ ನೋಟಿಸ್​ ಹಿಂಪಡೆದಿರೋದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದರಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದ್ಯಾ ಅನ್ನೋ ಮಾತು ಕೇಳಿ ಬರ್ತಿದೆ. ಇದರ ಹಿಂದೆಯೂ ಏನಾದ್ರೂ ಗದರ್‌ ಕಹಾನಿ ಇದೆಯಾ ಅಂತಾ ವಿಪಕ್ಷಗಳು ಪ್ರಶ್ನೆ ಮಾಡಲಾರಂಭಿಸಿವೆ. ಸಾಲ ತೀರಿಸಿದ್ರೆ ಸಮಸ್ಯೆಯೂ ಮುಗಿದಂತಾಗುತ್ತೆ. ಈ ನಿಟ್ಟಿನಲ್ಲಿ ಸನ್ನಿ ಡಿಯೋಲ್‌ ಏನು ನಿರ್ಧಾರ ತಗೊಳ್ತಾರೋ ಕಾದು ನೋಡಬೇಕಷ್ಟೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಹರಾಜು ಹಾಕ್ತೀವಿ ಎಂದು ನೋಟೀಸ್ ನೀಡಿ ವಾಪಸ್​ ಪಡೆದುಕೊಂಡ ಬ್ಯಾಂಕ್​​; 56 ಕೋಟಿ ಸಾಲದ ಸುಳಿಯಲ್ಲಿ ಗದರ್ ಸಿನಿಮಾ ನಟ

https://newsfirstlive.com/wp-content/uploads/2023/08/gaddar-5.jpg

Load More