ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಗೊತ್ತಾ?
ವೀಕ್ಷಕರಲ್ಲಿ ಹೆಚ್ಚಾಯ್ತು ಬಿಗ್ಬಾಸ್ ಸೀಸನ್ 11 ಮೇಲಿನ ಕುತೂಹಲ
ಸೀಸನ್ 11ಕ್ಕೆ ಈ ನಟ ನಟಿಯರು ಬರ್ತಾರಾ? ನಿರೂಪಕ ಏನಂದ್ರು?
ಕನ್ನಡದ ಬಹು ನಿರೀಕ್ಷಿತ, ವೀಕ್ಷಕರ ಅಚ್ಚು ಮೆಚ್ಚಿನ ಶೋ ಅಂದ್ರೆ ಅದು ಬಿಗ್ಬಾಸ್. ಕಳೆದ 10 ಸೀಸನ್ಗಳು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ. ಬಿಗ್ಬಾಸ್ ಸೀಸನ್ 11 ತೆರೆಗೆ ಬರೋದಕ್ಕೆ ತಯಾರಿ ನಡೆಸುತ್ತಿದೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸಾಕಷ್ಟು ಅಭಿಮಾನಿಗಳು ಬಿಗ್ಬಾಸ್ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಸೀಸನ್-11ಕ್ಕೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಅನ್ನೋದ್ರ ಬಗ್ಗೆ ಚರ್ಚೆ ಶುರುವಾಗ್ತಿದೆ.
ಇದನ್ನೂ ಓದಿ: ವೀಕ್ಷಕರಿಗೆ ಗುಡ್ನ್ಯೂಸ್; ಶೀಘ್ರದಲ್ಲೇ ಬರಲಿದೆ ಬಿಗ್ಬಾಸ್ ಸೀಸನ್ 11ರ ಹೊಸ ಪ್ರೋಮೋ..!
ಬಿಗ್ಬಾಸ್ ಮನೆಗೆ ಸುಖಾ ಸುಮ್ಮನೆ ಯಾರನ್ನೂ ಕರೆಸಲ್ಲ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನ, ಸಿನಿಮಾ ತಾರೆಯರನ್ನ, ಕ್ರೀಡಾಪಟುಗಳನ್ನು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆಗಳಿಸಿದವರನ್ನು ಕರೆಸಲಾಗುತ್ತದೆ. ಆಗಸ್ಟ್ ಮುಕ್ತಾಯಗೊಳ್ಳುತ್ತಿದ್ದಂತೆ ವೀಕ್ಷಕರು ಬಿಗ್ಬಾಸ್ ಬಗ್ಗೆ ಸಾಕಷ್ಟು ತಲೆ ಕಡೆಸಿಕೊಳ್ತಿದ್ದಾರೆ. ಪ್ರತಿ ಸೀಸನ್ ಶುರುವಾಗೋದು ಅಕ್ಟೋಬರ್ ಕೊನೆ ವಾರ ಅಥವಾ ಸೆಪ್ಟಂಬರ್ ಮೊದಲ ವಾರದಲ್ಲಿ.
ಕನ್ನಡದ ಬಿಗ್ಬಾಸ್ ಶೋಗೆ ಸನ್ನಿ ಲಿಯೋನ್ ಬರ್ತಾರೆ ಅನ್ನೋ ಚರ್ಚೆ ಶುರುವಾಗಿದೆ. ಏಕೆಂದರೆ ಬಿಗ್ಬಾಸ್ ಮಾಜಿ ಸ್ಪರ್ಧಿಗಳಾಗಿದ್ದ ನಿರಂಜನ್ ದೇಶಪಾಂಡೆ ಮತ್ತು ಕಿರಿಕ್ ಕೀರ್ತಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಈ ಬಾರಿಯ ಬಿಗ್ಬಾಸ್ಗೆ ಯಾರೆಲ್ಲ ಹೋಗಬಹುದು ಅನ್ನೋ ಲಿಸ್ಟ್ ಬಗ್ಗೆ ಹೇಳಿದ್ದಾರೆ. ಈ ಲಿಸ್ಟ್ನಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ನಟಿ ಕೀರ್ತಿ ಪಾತ್ರದಲ್ಲಿ ನಟಿಸಿರೋ ತನ್ವಿ ರಾವ್, ಗೀತಾ ಸೀರಿಯಲ್ ನಟಿ ಶರ್ಮಿತಾ ಗೌಡ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ ಹಾಗೂ ರಾಘವೇಂದ್ರ, ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್, ಬೃಂದಾವನ ಧಾರಾವಾಹಿ ನಟ ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ, ರೀಲ್ಸ್ ಸ್ಟಾರ್ ಮಲ್ಲು ಜಮಖಂಡಿ, ಪ್ರಿಯಾ ಸವದಿ ಬರಬಹುದು ಎಂದಿದ್ದಾರೆ. ಜೊತೆಗೆ ಇಬ್ಬರ ಪ್ರಕಾರ ಸನ್ನಿ ಲಿಯೋನ್ ಬಿಗ್ಬಾಸ್ಗೆ ಬರಲಿ ಅನ್ನೋದು ಅವರ ಆಸೆಯಾಗಿದೆ. ಕನ್ನಡದ ಪ್ರೇಮ್ ಸಿನಿಮಾದಲ್ಲಿ ನಟಿಸಿರುವ ಸನ್ನಿ ಲಿಯೋನ್ ಈ ಬಾರಿ ಬಿಗ್ಬಾಸ್ಗೆ ಬರ್ತಾರಾ? ಈ ಬಗ್ಗೆ ಬಿಗ್ಬಾಸ್ ಶುರುವಾದಾಗ ಅಸಲಿ ಲಿಸ್ಟ್ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ