newsfirstkannada.com

×

ಉಪ್ಪಿ ಫ್ಯಾನ್ಸ್​ಗೆ ಗುಡ್​​ನ್ಯೂಸ್​; UI ಚಿತ್ರದಲ್ಲಿ ರಿಯಲ್ ಸ್ಟಾರ್ ಜೊತೆ ಹಾಟ್ ಬ್ಯೂಟಿ ಸನ್ನಿ ಲಿಯೋನ್..! ​

Share :

Published September 9, 2024 at 9:50am

    ಭಾರೀ ನಿರೀಕ್ಷೆ ಮೂಡಿಸಿರುವ ಪ್ಯಾನ್ ಇಂಡಿಯಾ ಸಿನಿಮಾ UI

    ಯುಐನಲ್ಲಿ ಬಾಲಿವುಡ್ ಬ್ಯೂಟಿ ಸನ್ನಿ ಸಖತ್ ಹಾಟ್..​ ಹಾಟ್

    ಯುಐ ಸಿನಿಮಾದಲ್ಲಿ ಯಾವ್ಯಾವ ಕಲಾವಿದರು ನಟಿಸುತ್ತಿದ್ದಾರೆ?

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಯುಐ ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಚಿತ್ರದ ಕಥೆ ಏನಿರಬಹುದು ಎಂದು ಈಗಾಗಲೇ ಫ್ಯಾನ್ಸ್​ ಕಾಯುತ್ತಿದ್ದಾರೆ. ಯುಐಯ ಪ್ರತಿ ವಿಷಯ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ಮತ್ತೊಂದು ಅಪ್​ಡೇಟ್​ ಸಿಕ್ಕಿದ್ದು, ಇದು ನವಯುವಕರ ಮನಸು ಕದಡೋ ಸಂಗತಿಯಾಗಿದೆ!

ಇದನ್ನೂ ಓದಿ: ರಜನಿಕಾಂತ್​​​ಗೆ ಠಕ್ಕರ್ ಕೊಡ್ತಾರಾ ಉಪೇಂದ್ರ..? ಕೂಲಿ ಸಿನಿಮಾದಲ್ಲಿ ರಿಯಲ್ ಸ್ಟಾರ್ ಪಾತ್ರವೇನು?

ಉಪ್ಪಿ ಏನೇ ಮಾಡಿದರೂ ಅದನ್ನು ವಿಭಿನ್ನವಾಗಿ ಮಾಡಿ ತೋರಿಸುತ್ತಾರೆ. ಉಪೇಂದ್ರ ನಿರ್ದೇಶನ ಎಂದರೆ ಯಾರೂ ಊಹೆ ಮಾಡದಂತಹ ಸೀನ್​ಗಳು ಇದ್ದೆ ಇರುತ್ತವೆ. ಯುಐ ಮೂಲಕ ಜನರಿಗೆ ಏನೋ ಸಂದೇಶ ನೀಡಲು ಹೊರಟಿದ್ದಾರೆ ಎಂದು ಅಭಿಮಾನಿಗಳ ಕುತೂಹಲ. ಇದೆಲ್ಲದರ ನಡುವೆ ಬಾಲಿವುಡ್ ಬ್ಯೂಟಿ ಸಖತ್ ಹಾಟ್​ ಹಾಟ್ ಎನಿಸಿರುವ ಸನ್ನಿ ಲಿಯೋನ್ ಯುಐ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರಂತೆ. ಅಂದ್ಹಾಗೆ ಸನ್ನಿ ಲಿಯೋನ್​ ಕನ್ನಡದಲ್ಲಿ ನಟಿಸುತ್ತಿರುವ 3ನೇ ಸಿನಿಮಾ ಇದಾಗಿದೆ.

ರಿಯಲ್ ಸ್ಟಾರ್ ಉಪ್ಪಿ ನಟನೆಯ ಯುಐ ಸಿನಿಮಾದ ಕ್ರೇಜ್ ದಿನೇ ದಿನೇ ಜಾಸ್ತಿ ಆಗುತ್ತಿದೆ. ಉಪ್ಪಿ ಡೈರೆಕ್ಷನ್ ಕಂ ಆ್ಯಕ್ಟಿಂಗ್ ಇರೋದ್ರಿಂದ ಈ ರೇಂಜ್​ಗೆ ಕ್ರೇಜ್ ಸೃಷ್ಟಿಯಾಗಿದೆ. ಅಂದ್ಹಾಗೆ ಮೊದಲಿಂದ ಒಂದು ಸುದ್ದಿ ಓಡಾಡುತ್ತಿತ್ತು. ಇದೀಗ ಅದು ರಿವೀಲ್ ಆಗಿದೆ. ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರಂತೆ. ಈ ವಿಚಾರ ಈಗ ಕನ್ಫರ್ಮ್ ಆಗಿದೆ. ಈಗಾಗಲೇ ಯುಐ ಚಿತ್ರತಂಡ ಸನ್ನಿ ಲಿಯೋನ್ ಪೋಸ್ಟರ್ ರಿವೀಲ್ ಮಾಡಿದ್ದು, ಸನ್ನಿ ಕೇವಲ ಹಾಡಿನಲ್ಲಷ್ಟೇ ಇರುತ್ತಾರಾ, ಇಲ್ಲ ಸಿನಿಮಾದಲ್ಲಿ ವಿಶೇಷ ಪಾತ್ರವೇನಾದರೂ ಮಾಡಿದ್ದಾರಾ ಅನ್ನೋ ಕುತೂಹಲ ಪಡೆ ಹೈಕ್ಳದ್ದಾಗಿದೆ.

ಇದನ್ನೂ ಓದಿ: Breaking News: ಕಾಳಿಂದಿ ಎಕ್ಸ್​ಪ್ರೆಸ್ ಸ್ಫೋಟಕ್ಕೆ ಸಂಚು; ಮಧ್ಯರಾತ್ರಿ ತುಂಬಿದ ಸಿಲಿಂಡರ್​ಗೆ ಡಿಕ್ಕಿ ಹೊಡೆದ ಟ್ರೈನು

ಯುಐ ಸಿನಿಮಾಗೆ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು ಉಪೇಂದ್ರ ಜೊತೆ ರೀಷ್ಮಾ ನಾಣಯ್ಯ ಹಾಗು ನಿಧಿ ಸುಭಯ್ಯ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಸಿನಿಮಾಗೆ ಹೆಚ್‌.ಸಿ ವೇಣು ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಇದೆ. ಯುಐನಲ್ಲಿ ಆರ್ಮುಗ ರವಿಶಂಕರ್, ಸಾಧು ಕೋಕಿಲ, ಅಚ್ಯುತ್‌ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಇದೆ. ಇದರ ಜೊತೆಗೆ ಇದೀಗ ಸನ್ನಿ ಲಿಯೋನ್ ಕೂಡ ಸೇರ್ಪಡೆ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಪ್ಪಿ ಫ್ಯಾನ್ಸ್​ಗೆ ಗುಡ್​​ನ್ಯೂಸ್​; UI ಚಿತ್ರದಲ್ಲಿ ರಿಯಲ್ ಸ್ಟಾರ್ ಜೊತೆ ಹಾಟ್ ಬ್ಯೂಟಿ ಸನ್ನಿ ಲಿಯೋನ್..! ​

https://newsfirstlive.com/wp-content/uploads/2024/09/UPPI.jpg

Load More