newsfirstkannada.com

ಕೊಹ್ಲಿ, ರೋಹಿತ್, ಪಂತ್ ಫೇಲ್.. ಅಪ್ಘಾನ್ ವಿರುದ್ಧ ಮಿಂಚಿದ್ದು ಈ ನಾಲ್ವರು ಆಟಗಾರರು..!

Share :

Published June 21, 2024 at 7:13am

  ಸೂಪರ್ 8ರ ಮೊದಲ ಪಂದ್ಯದಲ್ಲಿ ಭಾರತಕ್ಕೆ ಗೆಲುವು

  47 ರನ್​ಗಳ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ

  ನಿನ್ನೆಯ ಪಂದ್ಯದಲ್ಲಿ ಮಿಂಚಿದ ಆಟಗಾರರು ಯಾಱರು..?

ಲೀಗ್ ಹಂತದ ಪಂದ್ಯಗಳಲ್ಲಿ ಸಾಧಾರಣ ಗೆಲುವು ಸಾಧಿಸಿ ಸೂಪರ್​ 8ಗೆ ಎಂಟ್ರಿ ನೀಡಿದ್ದ ಭಾರತ ತಂಡವು, ಆರಂಭದಲ್ಲೇ ಭರ್ಜರಿ ಶುಭಾರಂಭ ಮಾಡಿದೆ. ನಿನ್ನೆ ಅಪ್ಘಾನಿಸ್ತಾನ ವಿರುದ್ಧ ನಡೆದ ಸೂಪರ್​ 8ರ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 47 ರನ್​​ಗಳ ಗೆಲುವು ಸಾಧಿಸಿದೆ.

ಸೂರ್ಯಕುಮಾರ್ ಯಾದವ್: ಸೂಪರ್​ 8ರ ಪಂದ್ಯಗಳಲ್ಲಿ ಸೂರ್ಯ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ನಿನ್ನೆ ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, 28 ಬಾಲ್​ನಲ್ಲಿ 53 ರನ್​​ಗಳಿಸಿ ಎದುರಾಳಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. 189.29 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ಸೂರ್ಯಕುಮಾರ್​, ಮೂರು ಸಿಕ್ಸರ್​, ಐದು ಬೌಂಡರಿಗಳನ್ನು ಬಾರಿಸಿದರು.

ಇದನ್ನೂ ಓದಿ:ದರ್ಶನ್‌ ಹಲ್ಲೆ ನಡೆಸಿದ ಬಗ್ಗೆ ನಿರ್ದಿಷ್ಟ ಉಲ್ಲೇಖ ಇಲ್ಲ.. ಕುಖ್ಯಾತ ನಟ ಪಾರಾಗಲು ಸಾಧ್ಯವೇ?

ಹಾರ್ದಿಕ್ ಪಾಂಡ್ಯ: ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು. ಸೂರ್ಯ ಕುಮಾರ್​ ಯಾದವ್​ಗೆ ಸಾಥಿಯಾದ ಪಾಂಡ್ಯ, 24 ಬಾಲ್​ನಲ್ಲಿ 32 ರನ್​​ಗಳ ಕಾಣಿಕೆಯನ್ನು ನೀಡಿ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣರಾದರು. 133.33 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಪಾಂಡ್ಯ ಎರಡು ಸಿಕ್ಸರ್, ಮೂರು ಬೌಂಡರಿಗಳನ್ನು ಬಾರಿಸಿದರು. ಇನ್ನು ಎರಡು ಓವರ್ ಬಾಲ್ ಮಾಡಿರುವ ಪಾಂಡ್ಯ ಕೇವಲ 13 ರನ್​​ಗಳನ್ನು ಮಾತ್ರ ನೀಡಿದರು.

ಬೂಮ್ ಬೂಮ್ ಬೂಮ್ರಾ: ಬೂಮ್ರಾ ಬಗ್ಗೆ ಯಾರೂ ಕೂಡ ಮಾತೇ ಆಡುವಂತಿಲ್ಲ. ಅಷ್ಟರಮಟ್ಟಿಗೆ ಬೌಲಿಂಗ್​ನಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ತಮ್ಮ ಕೋಟಾದ ನಾಲ್ಕು ಓವರ್​ಗಳಲ್ಲಿ ಅವರು ನೀಡಿದ್ದು ಕೇವಲ 7 ರನ್​ಗಳು ಮಾತ್ರ. 1.80 ಎಕನಾಮಿಕ್​ನಲ್ಲಿ ಬೌಲ್ ಮಾಡಿರುವ ಬೂಮ್ರಾ, ಕೇವಲ 7 ರನ್​ನೀಡಿ ಒಂದು ಮೇಡಿನ್ ಓವರ್​ ಕೂಡ ಮಾಡಿದರು. ಇನ್ನು ಭಾರತದ ಗೆಲುವಿಗೆ ಮೂರು ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಯಾರ ಮಾತಿಗೂ CM ಡೋಂಟ್‌ಕೇರ್.. ಸಿದ್ದರಾಮಯ್ಯರ ದೃಢ ನಿರ್ಧಾರಕ್ಕೆ ಇದೆ 5 ಕಾರಣ..!

ಅರ್ಷ್​ದೀಪ್ ಸಿಂಗ್: ಇವರು ಟೀಂ ಇಂಡಿಯಾಗೆ ಕೊಂಚ ದುಬಾರಿಯಾದರೂ, ಎದುರಾಳಿ ತಂಡದ ಮಗ್ಗಲನ್ನು ಮುರಿಯುವಲ್ಲಿ ಯಶಸ್ವಿಯಾದರು. ನಾಲ್ಕು ಓವರ್​ನಲ್ಲಿ 36 ರನ್​​ಗಳನ್ನು ನೀಡಿ ಮೂರು ವಿಕೆಟ್ ಪಡೆದುಕೊಂಡರು. ಅದೇ ರೀತಿ ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 2, ಅಕ್ಸರ್ ಪಟೇಲ್, ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

ಇದನ್ನೂ ಓದಿ:ಅಂದು ಭಾರತ ತಂಡದಲ್ಲಿ 7 ಮಂದಿ ಕರ್ನಾಟಕದವರು.. ಕನ್ನಡಿಗ ಜಾನ್ಸನ್ ಅವ್ರ ಕ್ರಿಕೆಟ್ ಬದುಕಿಗೆ ಮುಳುವಾಗಿದ್ದೇ ಅಲ್ಲಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಹ್ಲಿ, ರೋಹಿತ್, ಪಂತ್ ಫೇಲ್.. ಅಪ್ಘಾನ್ ವಿರುದ್ಧ ಮಿಂಚಿದ್ದು ಈ ನಾಲ್ವರು ಆಟಗಾರರು..!

https://newsfirstlive.com/wp-content/uploads/2024/06/Team-india-5.jpg

Load More