ವಿಶ್ವಕಪ್ ವೇಳಾಪಟ್ಟಿ ರಿಲೀಸ್ಗೆ ಡೇಟ್ ಫಿಕ್ಸ್..!
ಸಂಜು ಸ್ಯಾಮ್ಸನ್ ಬಗ್ಗೆ ರವಿ ಶಾಸ್ತ್ರಿ ಏನಂದ್ರು..?
ಮಕ್ಕಳ ಜೊತೆ ಕ್ರಿಕೆಟ್ ಆಡಿದ ಡೇವಿಡ್ ವಾರ್ನರ್-Video
ಶುಭ ಕಾರ್ಯದ ವೇಳೆ ನಟರಾಜನ್ ಕೈಗೆ ಗಾಯ
ಟೀಮ್ ಇಂಡಿಯಾ ಬೌಲರ್ ನಟರಾಜನ್ ಸ್ಟೇಡಿಯಂ ಉದ್ಘಾಟನೆ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದಾರೆ. ನಟರಾಜನ್ ತಮ್ಮ ಸ್ವಗ್ರಾಮದಲ್ಲಿ ಯುವ ಆಟಗಾರರಿಗೆ ಅನುಕೂಲ ಆಗಲೆಂದು ಮೈದಾನ ನಿರ್ಮಿಸಿದ್ದಾರೆ. ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಈ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಕೂಡ ಉಪಸ್ಥಿತರಿದ್ರು. ಈ ಕ್ರೀಡಾಂಗಣದಲ್ಲಿ 4 ಪಿಚ್‌ಗಳು, ಎರಡು ಅಭ್ಯಾಸ ಟ್ರ್ಯಾಕ್‌ಗಳು, ಜಿಮ್ನಾಷಿಯಂ, ಕ್ಯಾಂಟೀನ್ ಮತ್ತು ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳಿಗೆ ಗ್ಯಾಲರಿ ಇದೆ. ಇದೇ ವೇಳೆ ನಟರಾಜನ್ ಬಾಗಿಲಿನ ಜಾಬ್ಗೆ ಕೈಗೆ ಸಿಲುಕಿಸಿಕೊಂಡು ಗಾಯ ಮಾಡಿಕೊಂಡಿದ್ದಾರೆ.
ದೇವಧರ್ ಟ್ರೋಫಿಗೆ ಪೂಜಾರ ಭರ್ಜರಿ ಸಮಾರಾಭ್ಯಾಸ
ಟೀಮ್ ಇಂಡಿಯಾ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಮುಂಬರೋ ದೇವಧರ್ ಟ್ರೋಫಿಗೆ ಭರ್ಜರಿ ಸಮಾರಾಭ್ಯಾಸ ನಡೆಸಿದ್ದಾರೆ. ನೆಟ್ಸ್ನಲ್ಲಿ ಇನ್ನಿಲ್ಲದಂತೆ ಬೆವರು ಹರಿಸ್ತಿದ್ದು, ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಪೂಜಾರಗೆ ಭಾರತ ತಂಡದಲ್ಲಿ ಸ್ಥಾನವಿಲ್ಲ. ಕಳಪೆ ಪ್ರದರ್ಶನ ಹಿನ್ನಲೆ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. ಸದ್ಯ ಪೂಜಾರ ಟೆಸ್ಟ್ ಕರಿಯರ್ ಅತಂತ್ರಕ್ಕೆ ಸಿಲುಕಿದ್ದು ಕಮ್ಬ್ಯಾಕ್ ಕಷ್ಟಕರವೆನಿಸಿದೆ. ಹೀಗಾಗಿ ಡೊಮೆಸ್ಟಿಕ್ ಕ್ರಿಕೆಟ್ನತ್ತ ಹೆಚ್ಚು ಗಮನ ಹರಿಸಿದ್ದಾರೆ.
ಮಕ್ಕಳ ಜೊತೆ ಕ್ರಿಕೆಟ್ ಆಡಿದ ಡೇವಿಡ್ ವಾರ್ನರ್
ಡೇವಿಡ್ ವಾರ್ನರ್ ಜಾಲಿ ಕ್ರಿಕೆಟರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಸದ್ಯ ಆಶಸ್ ಟೆಸ್ಟ್ ಬಿಡುವಿನಲ್ಲಿರೋ ಲೆಫ್ಟಿ ಬ್ಯಾಟ್ಸ್ಮನ್ ನೆಟ್ಸ್ನಲ್ಲಿ ಮಕ್ಕಳ ಜೊತೆ ಕ್ರಿಕೆಟ್ ಆಡಿ ಕಾಲ ಕಳೆದಿದ್ದಾರೆ. ಮಕ್ಕಳು ಬೌಲಿಂಗ್ ಮಾಡಿದ್ರೆ ವಾರ್ನರ್ ಬ್ಯಾಟಿಂಗ್ ಮಾಡಿ ಗಮನ ಸೆಳೆದ್ರು. ಮೊದಲ ಆಶಸ್ ಟೆಸ್ಟ್ ಅನ್ನ ಆಸ್ಟ್ರೇಲಿಯಾ ಗೆದ್ದಿದೆ. ಎರಡನೇ ಟೆಸ್ಟ್ ಜೂನ್ 28 ರಿಂದ ಆರಂಭವಾಗಲಿದೆ.
David Warner playing cricket with his daughter at Lord's.
This is beautiful. pic.twitter.com/nJ2MjlkyPO
— Johns. (@CricCrazyJohns) June 24, 2023
ಜೂನ್ 27ಕ್ಕೆ ಏಕದಿನ ವಿಶ್ವಕಪ್ ವೇಳಾಪಟ್ಟಿ ಪ್ರಕಟ
2023ರ ಏಕದಿನ ವಿಶ್ವಕಪ್ ವೇಳಾಪಟ್ಟಿ ಜೂನ್ 27 ರಂದು ಪ್ರಕಟಗೊಳ್ಳಲಿದೆ. ಅಂದು ಬೆಳಗ್ಗೆ 11.30 ಕ್ಕೆ ಮುಂಬೈನ ಲೋವರ್ ಪರೇಲ್‌ನಲ್ಲಿ ಐಸಿಸಿ ಸಂಪೂರ್ಣ ವೇಳಾಪಟ್ಟಿಯನ್ನ ರಿವೀಲ್ ಮಾಡಲಿದೆ. ಹೀಗಾಗಲೇ ಐಸಿಸಿ ಎಲ್ಲಾ ದೇಶಗಳ ಕ್ರಿಕೆಟ್ ಮಂಡಗಳಿಗೆ ಕರಡು ವೇಳಾಪಟ್ಟಿಯನ್ನ ಕಳುಹಿಸಿದೆ. ಅಂತಿಮ ಮುದ್ರೆಯನ್ನ ಜೂನ್ 27ಕ್ಕೆ ಹೊತ್ತಲಿದೆ. ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸಿದ್ದು, ಯಾವೆಲ್ಲಾ ಸ್ಟೇಡಿಯಂನಲ್ಲಿ, ಯಾವಾಗ ಪಂದ್ಯಗಳು ನಡೆಯಲಿದೆ ಅನ್ನೋದು ಮಂಗಳವಾರ ಬಹಿರಂಗೊಳ್ಳಲಿದೆ.
ಇದ್ಯಾವ ನ್ಯಾಯ ಸ್ವಾಮಿ..?
ಕ್ರಿಕೆಟ್ ಆಟದಲ್ಲಿ ಆಗಾಗ ವಿಚಿತ್ರ ಘಟನೆಗಳು ನಡೆಯುತ್ತವೆ. ಅಂತಹದೇ ಒಂದು ಘಟನೆಗೆ ವಿಟಲಿಟಿ ಬ್ಲಾಸ್ಟ್ ಟಿ20 ಲೀಗ್ ಸಾಕ್ಷಿಯಾಗಿದೆ. ರೊಲೋಫ್ಸೇನ್ ಎಂಬಾತ ತನ್ನದಲ್ಲದ ತಪ್ಪಿಗೆ ವಿಕೆಟ್ ಒಪ್ಪಿಸಿದ್ದಾರೆ. ರನ್ ಕದಿಯಲು ಪ್ರಯತ್ನಿಸಿದಾಗ ಬೌಲರ್ ಅಡ್ಡಿಪಡಿಸಿದ್ದಾನೆ. ಇದರಿಂದ ರೊಲೋಫ್ಸೇನ್ ಅನಾವಶ್ಯಕ ರನೌಟ್ ಆಗಬೇಕಾಯ್ತು. ಇದೇ ವಿಚಾರವಾಗಿ ಆನ್ಫೀಲ್ಡ್ ಅಂಪೈರ್ ಕೆಲಕಾಲ ಗೊಂದಲಕ್ಕಿಡಾಗಿದ್ದು ಕಂಡು ಬಂತು. ಬಳಿಕ ಮೂರನೇ ಅಂಪೈರ್ ಮೊರೆ ಹೋದಾಗ ಔಟ್ ಎಂದು ತೀರ್ಪು ಬಂತು.
‘ಸಂಜು ಸ್ಯಾಮ್ಸನ್ಗೆ ಇದೇ ಬೆಸ್ಟ್ ಚಾನ್ಸ್’
ಮುಂಬರೋ ವೆಸ್ಟ್ಇಂಡೀಸ್ ಏಕದಿನ ಸರಣಿಯಲ್ಲಿ ಸ್ಥಾನ ಪಡೆದಿರೋ ಸಂಜು ಸ್ಯಾಮ್ಸನ್ರನ್ನ ಮಾಜಿ ಕೋಚ್ ಕಾಮೆಂಟೇಟರ್ ರವಿ ಶಾಸ್ತ್ರಿ ಕೊಂಡಾಡಿದ್ದಾರೆ. ಸ್ಯಾಮ್ಸನ್ ಓರ್ವ ಮ್ಯಾಚ್ ವಿನ್ನರ್. ಅವರು ಸಿಕ್ಕ ಅವಕಾಶಗಳನ್ನ ಸರಿಯಾಗಿ ಬಳಸಿಕೊಳ್ಳದಿದ್ದರೆ ನನಗೆ ಬೇಜಾರಾಗುತ್ತೆ. ನಾನು ಕೋಚ್ ಆಗಿದ್ದಾಗ ರೋಹಿತ್ ಶರ್ಮಾ ಟೆಸ್ಟ್ ತಂಡದಲ್ಲಿ ರೆಗ್ಯುಲರ್ ಆಗಿ ಆಡಬೇಕೆಂದು ಬಯಸುತ್ತಿದ್ದೆ. ಇಲ್ಲವಾದ್ರೆ ನನ್ನ ಮನಸ್ಸಿಗೆ ಬೇಸರ ಆಗ್ತಿತ್ತು. ಈಗ ಸ್ಯಾಮ್ಸನ್ಗೆ ಉತ್ತಮ ಅವಕಾಶ ದೊರೆತಿದೆ. ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಲಿ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್